ಮಾಜಿ ಶಾಸಕ ಮೊಯಿದ್ದೀನ್‌ ಬಾವ ಸಹೋದರ ಮಮ್ತಾಜ್‌ ಅಲಿ ಆತ್ಮಹತ್ಯೆ: ಮಹಿಳೆ ಸೇರಿ ಮೂವರ ಬಂಧನ

ಮಾಜಿ ಶಾಸಕ ಮೊಯಿದ್ದೀನ್‌ ಬಾವ ಸಹೋದರ, ಉದ್ಯಮಿ ಮಮ್ತಾಜ್‌ ಅಲಿ ಆತ್ಮಹತ್ಯೆ ಪ್ರಕರಣ ಸಂಬಂಧ ಮಂಗಳೂರು CCB ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

Oct 8, 2024 - 12:23
Oct 8, 2024 - 12:30
 32
ಮಾಜಿ ಶಾಸಕ ಮೊಯಿದ್ದೀನ್‌ ಬಾವ ಸಹೋದರ ಮಮ್ತಾಜ್‌ ಅಲಿ ಆತ್ಮಹತ್ಯೆ: ಮಹಿಳೆ ಸೇರಿ ಮೂವರ ಬಂಧನ
ಮಾಜಿ ಶಾಸಕ ಮೊಯಿದ್ದೀನ್‌ ಬಾವ ಸಹೋದರ, ಉದ್ಯಮಿ ಮಮ್ತಾಜ್‌ ಅಲಿ ಆತ್ಮಹತ್ಯೆ ಪ್ರಕರಣ ಸಂಬಂಧ ಮಂಗಳೂರು CCB ಪೊಲೀಸರು ಮೂವರನ್ನು ಬಂಧಿಸಿದ್ದಾರೆ. A1 ಆರೋಪಿ ಆಯಿಷಾ ಅಲಿಯಾಸ್‌ ರೆಹಮತ್‌, ಆಕೆಯ ಪತಿ ಶೋಯೆಬ್‌ & ಸಿರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅಲಿ ನಾಪತ್ತೆ ಬಳಿಕ ಆರೋಪಿ ಆಯಿಷಾ ಪರಾರಿಯಾಗಿದ್ದು ಇದೀಗ ಬಂಟ್ವಾಳದ ಕಲ್ಲಡ್ಕ ಬಳಿ ಆಕೆಯನ್ನು ಬಂಧಿಸಲಾಗಿದೆ. ಈ ಬ್ಲ್ಯಾಕ್‌ಮೇಲ್‌ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್‌ ಸತ್ತಾರ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈ ತಂಡ ಮಮ್ತಾಜ್‌ರನ್ನು ಹನಿಟ್ರ್ಯಾಪ್‌ ಮಾಡಿ ಹಣಕ್ಕೆ ಪೀಡಿಸುತ್ತಿತ್ತು.

ಮಹಿಳೆಯ ಹನಿಟ್ರ್ಯಾಪ್‌ಗೆ ಬಲಿಯಾದ ಮಮ್ತಾಜ್‌ ಅಲಿ .
ಮಮ್ತಾಜ್‌ ಅವರ ಸಾವಿಗೆ ಆರು ಮಂದಿಯ ತಂಡ ನಡೆಸಿರುವ ಬ್ಲ್ಯಾಕ್‌ಮೇಲ್‌ ಕಾರಣ ಎಂಬುದಾಗಿ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ಈ ತಂಡವು ಅಲಿ ಅವರನ್ನು ಹನಿಟ್ರ್ಯಾಪ್‌ಗೆ ಸಿಲುಕಿಸಿ ಕೋಟ್ಯಂತರ ರೂಪಾಯಿ ಹಣ ವಸೂಲಿಗೆ ಪೀಡಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. 
ಈ ಪ್ರಕರಣದಲ್ಲಿ ಇಂದು ಬಂಧನವಾಗಿರುವ ಮಹಿಳೆ ಆಯೆಷಾ ರೆಹಮತ್‌ ಮಮ್ತಾಜ್‌ ಅಲಿ ಅವರು ನಡೆಸುತ್ತಿದ್ದ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದರು. ಕಾಟಿಪಳ್ಳದ ಈಕೆಯ ಜತೆಗೆ ಅಲಿ ಅವರಿಗೆ ಬಹಳ ಹತ್ತಿರದ ಒಡನಾಟ ಇತ್ತು ಎನ್ನಲಾಗಿದೆ. ಇದನ್ನೇ ಸಂದರ್ಭವಾಗಿಸಿಕೊಂಡಿದ್ದ ಆಯೆಷಾ ತನ್ನ ಪತಿ ಶೋಯೆಬ್‌ ಜತೆ ಸೇರಿಕೊಂಡು ಬ್ಲ್ಯಾಕ್‌ಮೇಲ್‌ಗೆ ಪ್ರಯತ್ನಿಸಿದ್ದರು. ಇವರ ಜತೆಗೆ ಕಾಂಗ್ರೆಸ್‌ ಮುಖಂಡರಾದ ಅಬ್ದುಲ್‌ ಸತ್ತಾರ್‌ ಹಾಗೂ ಮರಳು ದಂಧೆಯಲ್ಲಿ ತೊಡಗಿಸಿಕೊಂಡಿರುವ ಶಾಫಿ ನಂದಾವರ ಸೇರಿ ಮಮ್ತಾಜ್‌ ಅವರಿಂದ ಹೆಚ್ಚಿನ ಹಣ ವಸೂಲಿಗೆ ಸ್ಕೆಚ್‌ ಹಾಕಿದ್ದರು. ಅದರಂತೆ ಸುಮಾರು 50 ಲಕ್ಷ ರೂ. ವರೆಗೆ ಹಣ ವಸೂಲಿ ಕೂಡ ಮಾಡಿಕೊಂಡಿದ್ದರು. ಅದಾದ ಬಳಿಕ ಸುಮಾರು ಒಂದೂವರೆ ಕೋಟಿಗೂ ಹೆಚ್ಚು ಹಣಕ್ಕೆ ಬೇಡಿಕೆಯಿಟ್ಟು, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ತಂಡದಿಂದ ಬೇಸತ್ತು ಹೋಗಿದ್ದ ಮಮ್ತಾಜ್‌ ಮರ್ಯಾದೆಗೂ ಹೆದರಿ ಕುಳೂರು ಸೇತುವೆಯಿಂದ ನದಿ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಇನ್ನು ಕೂಡ ಹಲವರ ಬಂಧನ ಬಾಕಿಯಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.