ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ ,

Nov 15, 2024 - 06:31
ಈ ದಿನದ ರಾಶಿ ಭವಿಷ್ಯ
ದಿನ ಭವಿಷ್ಯ

ದಿನ ಭವಿಷ್ಯ:

               ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ  6

1.ಮೇಷ:

ಆರೋಗ್ಯ ಕಾಪಾಡಲು ಧನಾತ್ಮಕ ಚಿಂತನೆ, ಧ್ಯಾನದ ಅಭ್ಯಾಸ ಮಾಡಿ.ಉದ್ಯೋಗಸ್ಥರ  ಬುದ್ಧಿಮತ್ತೆಗೆ ಸವಾಲು.   ಉದ್ಯಮಗಳ ಬೆಳವಣಿಗೆಗೆ ಪೈಪೋಟಿಯ ಬಾಧೆ.  ಗುಣಮಟ್ಟ ಇಲ್ಲದ ಕೇಟರಿಂಗ್ ವ್ಯವಹಾರಸ್ಥರಿಗೆ ಸೋಲು. ಮಕ್ಕಳ ಓದಿನಲ್ಲಿ ಪ್ರಗತಿ.ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ಆದಿತ್ಯ ಹೃದಯ ಓದಿ.

2.ವೃಷಭ:

ಉದ್ಯೋಗ ಬದಲಾವಣೆ ಸದ್ಯಕ್ಕೆ ಬೇಡ...ಸರಕಾರಿ ಅಧಿಕಾರಿಗಳಿಗೆ ಸ್ಥಳಾಂತರ ಯೋಗ..ಖಾಸಗಿ ಉದ್ಯಮಗಳ ಸ್ಥಿತಿ ಸುಧಾರಣೆ. ..ಶೇರು ವ್ಯವಹಾರದಲ್ಲಿ  ಲಾಭ. ..ದೇವತಾ ಸಾನ್ನಿಧ್ಯಕ್ಕೆ  ಭೇಟಿ..ಹಿರಿಯರು, ಗೃಹಿಣಿಯರು, ಮಕ್ಕಳಿಗೆ  ಉಲ್ಲಾಸ.ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


3. ಮಿಥುನ:

 ಕಾಗದದ ಹುಲಿಗಳಿಗೆ ಹೆದರದಿರಿ. ಉದ್ಯೋಗದಲ್ಲಿ ಯಶಸ್ಸಿನ ಭರವಸೆ.. . ಸ್ವಂತ ಉದ್ಯಮದಲ್ಲಿ ಪ್ರಗತಿ ತೃಪ್ತಿಕರ. ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ. ವ್ಯವಹಾರ ಮಾತುಕತೆಯ ಮಧ್ಯಸ್ಥಿಕೆ.. .ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


4.ಕರ್ಕಾಟಕ:

 ಉದ್ಯೋಗ ಸ್ಥಾನದಲ್ಲಿ  ನಿಲ್ಲದ  ಕಿರಿಕಿರಿ, ..  ಉದ್ಯಮದ ಉತ್ಪಾದನೆಗಳಲ್ಲಿ   ವೈವಿಧ್ಯ ಪಾಲನೆ... ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳಿಗೆ ಅಧಿಕ‌ ಬೇಡಿಕೆ.ದೀರ್ಘಾವಧಿ ಹೂಡಿಕೆಯಲ್ಲಿ ಲಾಭ.. ಎಲ್ಲ ಮನೆಮಂದಿಗೂ ಉಲ್ಲಾಸ.ಗಣೇಶ ಪಂಚರತ್ನ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


5.ಸಿಂಹ:

ಕುಂಠಿತವಾದಂತೆ ಕಂಡರೂ ನಿಲ್ಲದ  ಪ್ರಗತಿ .. ಉದ್ಯೋಗಸ್ಥರಿಗೆ ಹೆಚ್ಚು ದುಡಿಯಲು ಉತ್ತೇಜನ.. ಬಾಯ್ದೆರೆ ಪ್ರಚಾರದಿಂದ  ವ್ಯಾಪಾರ ವೃದ್ಧಿ.. ನಿರ್ಮಾಣ ಕಾಮಗಾರಿಗಳ ವೇಗ ವರ್ಧನೆ. ... ಮನೆಯಲ್ಲಿ ಮಂಗಲಕಾರ್ಯದ ಸಿದ್ಧತೆ.ಗಣೇಶ ಕವಚ, ಶಿವಸಹಸ್ರನಾಮ, ಗುರುಸ್ತೋತ್ರ ಓದಿ.


6.ಕನ್ಯಾ:

ಹೆಚ್ದಿನ‌ ಮಟ್ಟಿಗೆ ಅನುಕೂಲದ  ದಿನ.  . ಉದ್ಯೋಗ ಸ್ಥಾನದಲ್ಲಿ ಕೆಲಸಕ್ಕೆ ಉತ್ತೇಜನ. ಉದ್ಯಮದಲ್ಲಿ ಶೀಘ್ರ ಪ್ರಗತಿ . ..ಉದ್ಯೋಗಾಸಕ್ತರನ್ನು ಅರಸಿಬರುವ  ಅವಕಾಶಗಳು..ಗುಣಮಟ್ಟ ಕಾಯ್ದುಕೊಳ್ಳದ ಹೋಟೆಲುಗಳಿಗೆ ನಷ್ಡ.ಗಣೇಶ ದ್ವಾದಶನಾಮ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

7.ತುಲಾ:

 ಕಾರ್ಯಸಾಮರ್ಥ್ಯದೊಂದಿಗೆ ಸಮಯಪಾಲನೆಗೂ ಬೆಲೆ ಇರಲಿ.. .ಅಕಸ್ಮಾತ್ ಧನಪ್ರಾಪ್ತಿ. ವಿತ್ತ ಸಂಸ್ಥೆಯ ನೆರವಿನಿಂದ  ವ್ಯವಹಾರ ವಿಸ್ತರಣೆ.ಅವಿವಾಹಿತರಿಗೆ ವಿವಾಹ ಯೋಗ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ.. ಸಮಾಜ ಸೇವೆಗೆ ಸಮಯ ಮೀಸಲು..ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕವಚ, ನವಗ್ರಹ ಸ್ತೋತ್ರ ಓದಿ.

8.ವೃಶ್ಚಿಕ:

ಮನಸ್ಸನ್ನು ಮುದುಡಿಸಿಕೊಳ್ಳದಿರಿ.  ಉದ್ಯಮ  ಭರದಲ್ಲಿ ಮುನ್ನಡೆ.  . ಉತ್ಪನ್ನಗಳ ಗುಣಮಟ್ಟಕ್ಕೆ ಸರ್ವತ್ರ  ಶ್ಲಾಘನೆ.  ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ.. ಗೃಹೋದ್ಯಮ ಉತ್ಪನ್ನಗಳ ಜನಪ್ರಿಯತೆ ವರ್ಧನೆ.ಸಣ್ಣ ಪ್ರಮಾಣದ ಕೃಷಿ ಕೈಗೊಳ್ಳಲು ನಿರ್ಧಾರ. ಗಣೇಶ ಅಷ್ಟಕ, ನರಸಿಂಹ ಕವಚ, ಮಹಾಲಕ್ಷ್ಮಿ ಅಷ್ಟಕ ಓದಿ.

9. ಧನು:

  ವಾತಾವರಣದಲ್ಲಿ ಅಸ್ಥಿರತೆ. ಆತ್ಮೀಯರಿಂದ  ಸಕಾಲದಲ್ಲಿ ಸಹಾಯ...  ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಸಣ್ಣ ಪ್ರಮಾಣದ  ಉದ್ಯಮಗಳ ಅಭಿವೃದ್ಧಿ. ದೀರ್ಘಕಾಲದ ಕೌಟುಂಬಿಕ ಸಮಸ್ಯೆಗೆ ಪರಿಹಾರ.ಗಣೇಶ ಪಂಚರತ್ನ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

10. ಮಕರ:

ಉದ್ಯೋಗ ಸ್ಥಾನದಲ್ಲಿ ಕೆಲಸದ ಒತ್ತಡವಿದ್ದರೂ ನೆಮ್ಮದಿ..ಉದ್ಯಮಿಗಳಿಗೆ ಶುಭದಿನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ.‌ಕೃಷ್ಯುತ್ಪನ್ನಗಳ ಮಾರಾಟದಿಂದ ಉತ್ತಮ ಲಾಭ.ಎಳನೀರು ವ್ಯಾಪಾರದಿಂದ ಇಮ್ಮಡಿ ಲಾಭ.
ಗಣೇಶ ಅಷ್ಟಕ.ಗಣೇಶ ಕವಚ, ನರಸಿಂಹ ಸ್ತೋತ್ರ, ಶನಿಸ್ತೋತ್ರ ಓದಿ.

11.ಕುಂಭ:

ಮೂಲಗಳು ಹಲವಿದ್ದರೂ ಒಂದು ಮೂಲದಿಂದ ಅಧಿಕ ಅದಾಯ.  ಸರಕಾರಿ ನೌಕರರಿಗೆ ಕೆಲಸದ ಹೊರೆ... ಉದ್ಯಮಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ..ನ್ಯಾಯಾಲಯ ವ್ಯವಹಾರದಲ್ಲಿ ಜಯ.. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

12.ಮೀನ:

ಉದ್ಯೋಗ ಸ್ಥಾನದಲ್ಲಿ‌ ಅನುಕೂಲ. ಸರಕಾರಿ ಅಧಿಕಾರಿಗಳಿಗೆ ಜನಗೌರವ. ಬಂಧುವರ್ಗದಲ್ಲಿ ಶುಭಕಾರ್ಯ.. . ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.ತಾಯಿ ಅಥವಾ ಮಾತೃಸಮಾನರ ಆರೋಗ್ಯ ಸುಧಾರಣೆ.ಗಣೇಶ ಕವಚ, ದೇವೀಸ್ತೋತ್ರ, ಶನಿಸ್ತೋತ್ರ ಓದಿ.