ತ್ರಿವೇಣಿ ಸಂಗಮದಲ್ಲಿ ಕೋಟ್ಯಂತರ ಭಕ್ತರ ಸಮಾಗಮ!

ತ್ರಿವೇಣಿ ಸಂಗಮದಲ್ಲಿ ಕೋಟ್ಯಂತರ ಭಕ್ತರ ಸಮಾಗಮ!

Jan 13, 2025 - 13:23
ತ್ರಿವೇಣಿ ಸಂಗಮದಲ್ಲಿ ಕೋಟ್ಯಂತರ ಭಕ್ತರ ಸಮಾಗಮ!
Millions of devotees gather in Triveni Sangam!

ಪ್ರಯಾಗ್​​ರಾಜ್: 144 ವರ್ಷಗಳ ನಂತರ ನಡೆಯುತ್ತಿರುವ 45 ದಿನಗಳ ಮಹಾಕುಂಭ ಮೇಳವು ಈ ಬಾರಿ 2025 ರಲ್ಲಿ ಪ್ರಯಾಗರಾಜ್ ನಲ್ಲಿ ಪ್ರಾರಂಭವಾಗಿದೆ. ಈ ಮಹಾ ಕುಂಭಕ್ಕೆ ವಿದೇಶಿ ರಾಷ್ಟ್ರಗಳಿಂದ ಸುಮಾರು 15 ಲಕ್ಷ ಸೇರಿದಂತೆ 45 ಕೋಟಿ ಭಕ್ತರು ಭಾಗವಹಿಸುತ್ತಾರೆ. ಪೌರ ಪೂರ್ಣಿಮೆಯ ಮೊದಲ ಶಾಹಿ ಸ್ನಾನದಂದು ಗಂಗಾ ನದಿಯಲ್ಲಿ ಅಪಾರ ಸಂಖ್ಯೆಯ ಭಕ್ತರು ಸ್ನಾನ ಮಾಡಿದ್ದರಿಂದ ವಿಶ್ವದ ಅತಿ ದೊಡ್ಡ ಸಭೆಯಾದ ಮಾಹ ಕುಂಭ ಮೇಳವು ಉತ್ತರಪ್ರದೇಶದ ಪ್ರಯಾಗ ರಾಜ್ ನಲ್ಲಿ ಸೋಮವಾರ ಚಾಲನೆ ಪಡೆದುಕೊಂಡಿದೆ. 
ತ್ರಿವೇಣಿ ಸಂಗಮವಾದ ಯಮುನಾ ಗಂಗಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮದಲ್ಲಿ ಲಕ್ಷಾಂತರ ಸಾಧು ಸಂತರು ಪುಣ್ಯ ನದಿಯಲ್ಲಿ ಸ್ನಾನ ಮಾಡಿ ಧನ್ಯತೆ ಮೆರೆದರು.
ಭಾರತದಿಂದ ಮಾತ್ರವಲದೇ ಪ್ರಪಂಚದಾದ್ಯಂತ ಜನರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಪ್ರಾಯಾಗರಾಜ್ ಆಗಮಿಸುತ್ತಿದ್ದಾರೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಯವರು ಭಾರತೀಯ ಮೌಲ್ಯಗಳು ಮತ್ತು ಸಾಂಸ್ಕೃತಿಯನ್ನು ಪಾಲಿಸುವ ಕೋಟಿ ಗಟ್ಟಲೆ ಜನಗಳಿಗೆ ಬಹಳ ವಿಶೇಷವಾದ ದಿನ ಮಹಾಕುಂಬ 2025 ಪ್ರಯಾಗರಾಜ್ ನಲ್ಲಿ ಪ್ರಾರಂಭ ವಾಗುತ್ತಿದೆ ನಂಬಿಕೆ ಭಕ್ತಿ ಮತ್ತು ಸಾಂಸ್ಕೃತಿಯ ಮಹಾಕುಂಬವು ಭಾರತದ ಕಾಲಾತೀತ ಅಧ್ಯಾಮಿಕತೆ ಪರಂಪರೆಯನ್ನು ಸಕರಗೊಳಿಸುತ್ತದೆ ಹಾಗೂ ನಂಬಿಕೆ ಮತ್ತು ಸಾಮರಸ್ಯವನ್ನು ಆಚರಿಸುತ್ತವೆಂದು x ನಲ್ಲಿ ಪೋಸ್ಟ್  ಮಾಡಿದ್ದಾರೆ. 


ಇದೇ ಮೊದಲ ಭಾರಿಗೆ ನೀರಿನ ಅಡಿಯಲ್ಲಿ ಡ್ರೋನ್ ನನ್ನು ಭಕ್ತರ ಸುರಕ್ಷತೆಗಾಗಿ ಅಳವಡಿಸಿದ್ದಾರೆ ಹಾಗೆಯೇ ಇದು ದಿನದ 24 ಗಂಟೆ ನೀರಿನಡಿಯಲ್ಲಿ ಪ್ರತಿ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೇ ಭಕ್ತರ ಸುರಕ್ಷತೆಯ ಸಲುವಾಗಿ 700 ಫ್ಲ್ಯಾಗ್ ಬೋಟ್ ಗಳಲ್ಲಿ Ai ಆಧಾರಿತ ಕ್ಯಾಮರಾಗಳನ್ನು PAC, NDRF ಮತ್ತು SDRF ತಂಡಗಳನ್ನು ನಿಯೋಜಿಸಲಾಗಿದೆ.ಪ್ರಖ್ಯಾತ ಗಾಯಕರಾದ ಶಂಕರ್ ಮಹಾದೇವನ್, ಮೋಹಿತ್ ಚೌಹಣ್, ಕೈಲಾಶ್ ಖೇರ್, ಹನ್ಸ್ ರಾಜ್ ಹನ್ಸ್ ಹರಿಹರನ್, ಕವಿತಾ ಕೃಷ್ಣಮೂರ್ತಿ ಮತ್ತು ಮೈದಿಲಿ ಠಾಕೂರ್ ಇವರಿಂದ ಭಕ್ತಿರಸಸಂಜೆ ನಡೆಯಲಿದೆ.