ಪಿಎಂ ಇಂಟರ್ನ್​ಶಿಪ್ ಸ್ಕೀಮ್; ಕಂಪನಿಗಳಿಗೆ ನೊಂದಣಿ ಮುಕ್ತಾಯ

ಪ್ರಧಾನಮಂತ್ರಿ ಇಂಟರ್ನ್​ಶಿಪ್ ಸ್ಕೀಮ್​ನಲ್ಲಿ 280 ಕಂಪನಿಗಳು ಪಾಲ್ಗೊಂಡಿವೆ. ಇದೀಗ ಕಂಪನಿಗಳಿಗೆ ವಿಂಡೋ ಮುಕ್ತಾಯವಾಗಿದೆ. 1.27 ಲಕ್ಷ ಯುವಜನರು ಈ ಸ್ಕೀಮ್​ನಲ್ಲಿ ಇಂಟರ್ನ್​ಶಿಪ್​ಗೆ ಅರ್ಜಿ ಸಲ್ಲಿಸಿದ್ದಾರೆ.

Oct 23, 2024 - 13:07
ಪಿಎಂ ಇಂಟರ್ನ್​ಶಿಪ್ ಸ್ಕೀಮ್; ಕಂಪನಿಗಳಿಗೆ ನೊಂದಣಿ ಮುಕ್ತಾಯ

ನವದೆಹಲಿ, ಅಕ್ಟೋಬರ್ 23: ಯುವಕರಿಗೆ ನೈಜ ಕೆಲಸದ ಕೌಶಲ್ಯ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿರುವ ಪಿಎಂ ಇಂಟರ್ನ್​ಶಿಪ್ ಯೋಜನೆಯಲ್ಲಿ ಈವರೆಗೆ 280 ಕಂಪನಿಗಳು ಪಾಲ್ಗೊಂಡಿವೆ. ಇದೀಗ ಸ್ಕೀಮ್​ನ ಪೋರ್ಟಲ್​ನಲ್ಲಿ ಕಂಪನಿಗಳ ನೊಂದಣಿ ನಿಲ್ಲಿಸಲಾಗಿದೆ. ಆದರೆ, ಯುವಜನರು ಇಂಟರ್ನ್​ಶಿಪ್​ಗೆ ಅರ್ಜಿ ಸಲ್ಲಿಸುವುದನ್ನು ಮುಂದುವರಿಸಬಹುದು. ಇದು ನವೆಂಬರ್ ಒಂದು ಅಥವಾ ಎರಡನೇ ವಾರದವರೆಗೂ ಮುಂದುವರಿಯಬಹುದು.ಈವರೆಗೆ ಇಂಟರ್ನ್​ಶಿಪ್ ಬಯಸಿ ಅರ್ಜಿ ಸಲ್ಲಿಸಿದ ಯುವಕ, ಯುವತಿಯರ ಸಂಖ್ಯೆ 1,27,046 ಇದೆ. ಒಟ್ಟು 280 ಕಂಪನಿಗಳು ಈ ಪೋರ್ಟಲ್​ನಲ್ಲಿ ಇಂಟರ್ನ್​ಶಿಪ್ ಆಫರ್ ಮಾಡಿವೆ.ಪಿಎಂ ಇಂಟರ್ನ್​ಶಿಪ್ ಸ್ಕೀಮ್​ಗೆಂದು ರೂಪಿತವಾಗಿರುವ ಪೋರ್ಟಲ್​ನಲ್ಲಿ ಅಕ್ಟೋಬರ್ 3ಕ್ಕೆ ಕಾರ್ಪೊರೇಟ್ ಕಂಪನಿಗಳನ್ನು ಆಹ್ವಾನಿಸಲಾಗಿತ್ತು. ಅಕ್ಟೋಬರ್ 22ಕ್ಕೆ ಈ ವಿಂಡೋ ಮುಕ್ತಾಯವಾಗಿದೆ. ಇಂಟರ್ನ್​ಶಿಪ್ ಬಯಸುವ ಸಂಭಾವ್ಯ ಅಭರ್ಥಿಗಳಿಗೆ ಅಕ್ಟೋಬರ್ 12ರಿಂದ ನೊಂದಣಿ ಅವಕಾಶ ನೀಡಲಾಗಿದೆ.



ಕೆಲಸ ಹೊಂದಿಲ್ಲದ ದೇಶದ ಯುವಕರಿಗೆ ನೈಜ ಉದ್ಯೋಗದ ಕೌಶಲ್ಯ ಮತ್ತು ತರಬೇತಿ ನೀಡಿ, ಉದ್ಯೋಗಾವಕಾಶ ಹೆಚ್ಚಿಸಲು ಕೇಂದ್ರ ಸರ್ಕಾರ ಪಿಎಂ ಇಂಟರ್ನ್​ಶಿಪ್ ಯೋಜನೆ ಆರಂಭಿಸಿದೆ. ಅಗ್ರ ಕಾರ್ಪೊರೇಟ್ ಕಂಪನಿಗಳು ತಮ್ಮಲ್ಲಿ ಯುವಕರಿಗೆ ತರಬೇತಿ ಕಂ ಇಂಟರ್ನ್​ಶಿಪ್ ಅವಕಾಶ ನೀಡಬಹುದು. 21ರಿಂದ 24 ವರ್ಷದೊಳಗಿನ ವಯಸ್ಸಿನ ಯುವಕ ಮತ್ತು ಯುವತಿಯರು ಇಂಟರ್ನ್​ಶಿಪ್ ಪಡೆಯಬಹುದು.ಒಂದು ವರ್ಷದ ಇಂಟರ್ನ್​ಶಿಪ್ ಅವಕಾಶ ಕೊಡುವ ಈ ಸ್ಕೀಮ್​ನಲ್ಲಿ ಆಯ್ಕೆಯಾದ ಪ್ರತಿಯೊಬ್ಬ ಅಭ್ಯರ್ಥಿಗೂ ವರ್ಷಕ್ಕೆ 66,000 ರೂವರೆಗೆ ಧನಸಹಾಯ ಸಿಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರ ಮಾಸಿಕವಾಗಿ 4,500 ರೂ ಹಣವನ್ನು ಸ್ಟೈಪೆಂಡ್ ಆಗಿ ನೀಡುತ್ತದೆ. ಕಂಪನಿಯೂ ಕೂಡ ತಿಂಗಳಿಗೆ 500 ರೂ ಹಣ ನೀಡುತ್ತದೆ. ಜೊತೆಗೆ ತರಬೇತಿ ವೆಚ್ಚ ಎಲ್ಲವನ್ನೂ ಕಂಪನಿಯೇ ಭರಿಸುತ್ತದೆ.