ಸಾಧನೆಯ ಮೂಲಕ ಸಮಾಜಕ್ಕೆ ಸಂದೇಶ : ವೊಲ್ಗ ಮೆಡಿಕಲ್ ಇಕ್ವೆಪ್‌ಮೆಂಟ್ ಸರ್ಜಿಕಲ್ಸ್ ಬೆಳ್ಳಿಹಬ್ಬದಲ್ಲಿ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ

ಮಂಗಳೂರು ನಗರದ ವೊಲ್ಗ ಮೆಡಿಕಲ್ ಈಕ್ವಿಪ್‌ಮೆಂಟ್ ಆ್ಯಂಡ್ ಸರ್ಜಿಕಲ್ಸ್ ಇದರ ಬೆಳ್ಳಿಹಬ್ಬ ಸಂಭ್ರಮಾಚರಣೆ ಹಾಗೂ ಮಂಗಳೂರು ಹಂಪನಕಟ್ಟೆಯ ಬ್ಯೂಟಿ ಪ್ಲಾಜದ ಕಟ್ಟಡದಲ್ಲಿರುವ ಸಂಸ್ಥೆಯ ಪೂರ್ಣ ಪ್ರಮಾಣದ ಮಳಿಗೆಯನ್ನು ಭಾನುವಾರ ಬೆಳಗ್ಗೆ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಅವರು ಉದ್ಘಾಟಿಸಿದರು.

Oct 28, 2024 - 16:05
Oct 28, 2024 - 17:04
ಸಾಧನೆಯ ಮೂಲಕ ಸಮಾಜಕ್ಕೆ ಸಂದೇಶ  : ವೊಲ್ಗ ಮೆಡಿಕಲ್ ಇಕ್ವೆಪ್‌ಮೆಂಟ್ ಸರ್ಜಿಕಲ್ಸ್ ಬೆಳ್ಳಿಹಬ್ಬದಲ್ಲಿ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ
Silver Jubilee Celebration for Volga Medical Equipment and Surgical Institute

ಮಂಗಳೂರು: ನಗರದ ವೊಲ್ಗ ಮೆಡಿಕಲ್ ಈಕ್ವಿಪ್‌ಮೆಂಟ್ ಆ್ಯಂಡ್ ಸರ್ಜಿಕಲ್ಸ್ ಇದರ ಬೆಳ್ಳಿಹಬ್ಬ ಸಂಭ್ರಮಾಚರಣೆ ಹಾಗೂ ಮಂಗಳೂರು ಹಂಪನಕಟ್ಟೆಯ ಬ್ಯೂಟಿ ಪ್ಲಾಜದ ಕಟ್ಟಡದಲ್ಲಿರುವ ಸಂಸ್ಥೆಯ ಪೂರ್ಣ ಪ್ರಮಾಣದ ಮಳಿಗೆಯನ್ನು ಭಾನುವಾರ ಬೆಳಗ್ಗೆ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಅವರು ಉದ್ಘಾಟಿಸಿದರು.
ಈ ಸಂದರ್ಭ ಆಶೀರ್ವಚನ ನೀಡಿದ ಶ್ರೀಗಳು, ಗುಣಮಟ್ಟದ ವಸ್ತುಗಳ ಪೂರೈಕೆ, ಸೇವೆ, ಪ್ರಾಮಾಣಿಕತೆ, ಶಿಸ್ತಿನ ಜೀವನ, ಧರ್ಮ ಶ್ರದ್ಧೆಯ ಮೂಲಕ ಉದ್ಯಮದಲ್ಲಿ ಯಶಸು ಕಂಡ ಸಂಸ್ಥೆಯ ಮಾಲೀಕರಾದ ಎ ಲೋಕೇಶ್ ಆಚಾರ್ಯ ಅವರು ಶೂನ್ಯದಿಂದ ಎತ್ತರಕ್ಕೆ ಬೆಳೆದು ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿದ್ದಾರೆ ಎಂದರು.
ಬೆಳ್ಳಿಹಬ್ಬದ ಸಂಭ್ರಮದ ಸಂದರ್ಭ ಸಂಸ್ಥೆಯ ನೌಕರರನ್ನು ಸನ್ಮಾನಿಸುವ ಮೂಲಕ ಸಂಸ್ಥೆಯ ಬೆಳವಣಿಗೆಯಲ್ಲಿ ಜತೆಯಾಗಿ ನಿಂತವರನ್ನು ಸನ್ಮಾನಿಸುವ ಮೂಲಕ ಮಾಲೀಕರ ಗುಣ ಅನುಕರಣೀಯ. ಅವರಿಂದ ಸಮಾಜಕ್ಕೆ ಇನ್ನಷ್ಟು ಹೆಚ್ಚಿನ ಸೇವೆ ಒದಗಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಅವರು ಆಶೀರ್ವದಿಸಿದರು.


ಅಪರೂಪದ ಬದ್ದತೆ, ಬೆಂಬಲ ,ವಿನಯ ಆಸ್ಪತ್ರೆಯ ನಿರ್ದೇಶಕ ಡಾ.ಹಂಸರಾಜ ಆಳ್ವ ಅವರು ಮಾತನಾಡಿ, ಕಳೆದ ಹಲವು ವರ್ಷಗಳಿಂದ ತಮ್ಮ ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಪೂರೈಸುತ್ತಿರುವ ವೊಲ್ಗ ಸಂಸ್ಥೆಯ ಸೇವೆ, ಬದ್ದತೆ ಮತ್ತು ಬೆಂಬಲ ಅಪರೂಪ. ಕರೊನಾ ದಿಂದ ದೇಶ ತತ್ತರಿಸುತ್ತಿದ್ದ ಸಂದರ್ಭದಲ್ಲಿ ಸಂಸ್ಥೆಯು ನೀಡಿದ ಸಹಕಾರವನ್ನು ಮರೆಯಲು ಸಾಧ್ಯವೇ ಇಲ್ಲ. ಆ ಸಂದರ್ಭ ಆಕ್ಸಿಜನ್ ವ್ಯವಸ್ಥೆಯನ್ನು ಸಕಾಲದಲ್ಲಿ ಪೂರೈಸಲು ಲೋಕೇಶ್ ಅವರು ಸಹಕರಿಸಿದ ಕಾರಣ ಆರೋಗ್ಯ ಸಮಸ್ಯೆಯಿಂದ ಸಂಕಷ್ಟ ಅನುಭವಿಸಿದ ತುಂಬಾ ಜನರನ್ನು ರಕ್ಷಿಸಲು ಸಾಧ್ಯವಾಯಿತು ಎಂದು ಹೆಳಿದರು.


ವಿಭಿನ್ನ ಕ್ಷೇತ್ರ ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ.ಎಸ್.ಆರ್.ಹರೀಶ್ ಆಚಾರ್ಯ ಅವರು ಮಾತನಾಡಿ, ದೇಶದಲ್ಲಿ ಮೆಡಿಕಲ್ ಹಬ್ ಎಂದೇ ಗುರುತಿಸಿಕೊಂಡಿರುವ ಮಂಗಳೂರಿನಲ್ಲಿ ವೈದ್ಯಕೀಯ ಕ್ಷೇತ್ರದ ವಿಭಿನ್ನ ಕ್ಷೇತ್ರದಲ್ಲಿ ಮಾಲೀಕರು ನಿಖರ ಮುನ್ನೋಟ ಮತ್ತು ಮನೋಸ್ಥೈರ್ಯದಿಂದ ಕಾಲದ ಅಗತ್ಯಕ್ಕೆ ಪೂರಕವಾಗಿ ಅತ್ಯುತ್ತಮ ಜನೋಪಯೋಗಿ ಸಂಸ್ಥೆಯನ್ನು ಕಟ್ಟಿ ಬೆಳೆದಿದ್ದಾರೆ. ವೊಲ್ಗ ಸಂಸ್ಥೆಯ ಎರಡೂವರೆ ದಶಕಗಳ ಪಯಣ, ಬೆಳವಣಿಗೆ ಹೊಸ ಕ್ಷೇತ್ರದಲ್ಲಿ ಉದ್ಯಮ ಅವಕಾಶ ಹುಡುಕುವವರಿಗೆ ಪ್ರೇರಣೆ ನೀಡುವಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಎಂ ಸುಬ್ರಮಣ್ಯ ಭಟ್, ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಕೆ.ಉಮೇಶ್ ಆಚಾರ್ಯ ಪಾಂಡೇಶ್ವರ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಕೆ ಕೇಶವ ಆಚಾರ್ಯ, ಡಾ.ಮನೋಹರ್ ಆಚಾರ್ಯ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಆರಂಭದಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಗೌರವಿಸಲಾಯಿತು. ಸಂಸ್ಥೆಯ ಮಾಲೀಕ ಲೋಕೇಶ್ ಆಚಾರ್ಯ ದಂಪತಿ, ಮಕ್ಕಳು ಆರಂಭದಲ್ಲಿ ಗುರುಗಳ ಆಶೀರ್ವಾದ ಪಡೆದರು.


ಬೈಕಾಡಿ ಪ್ರತಿಷ್ಠಾನದ ಭರತ್‌ರಾಜ್ ಬೈಕಾಡಿ ಸ್ವಾಗತಿಸಿದರು. ಮಾಲೀಕ ಲೋಕೇಶ್ ಆಚಾರ್ಯ ಪ್ರಸ್ತಾವನೆಗೈದರು. ಸುಜೀರ್ ವಿನೋದ್ ಅವರು ನೌಕರರನ್ನು ಗೌರವಿಸುವ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಪುರೋಹಿತ ವೇಲಾಪುರೀ ವಿಶ್ವನಾಥ ಶರ್ಮ ಕಾರ್ಯಕ್ರಮ ನಿರ್ವಹಿಸಿದರು.