ಬಾಲಿವುಡ್ ಚಿತ್ರವನ್ನು ತಿರಸ್ಕರಿಸಿದ್ದ ದಕ್ಷಿಣದ ಹೀರೋಗಳು; ಬಹುತೇಕ ಚಿತ್ರಗಳು ಹಿಟ್
ದಕ್ಷಿಣ ಭಾರತದ ಹಲವು ನಟರುಗಳು ಬಾಲಿವುಡ್ನಲ್ಲಿ ಈಗ ಹೆಸರು ಮಾಡಿದ್ದಾರೆ. ಅವರಿಗೆ ಪರಭಾಷೆಯಿಂದ, ಬಾಲಿವುಡ್ನಿಂದ ಆಫರ್ಗಳು ಬಂದರೆ ಅದನ್ನು ರಿಜೆಕ್ಟ್ ಮಾಡಿದ ಉದಾಹರಣೆ ಸಾಕಷ್ಟಿದೆ. ದಕ್ಷಿಣ ಭಾರತದ ಹೀರೋಗಳಾದ ಅಲ್ಲು ಅರ್ಜುನ್, ಯಶ್ ಸೇರಿದಂತೆ ಅನೇಕರು ಹಿಂದಿ ಆಫರ್ಗಳನ್ನು ತಿರಸ್ಕರಿಸಿದ್ದರು.
ದಕ್ಷಿಣ ಭಾರತದ ಹಲವು ನಟರುಗಳು ಬಾಲಿವುಡ್ನಲ್ಲಿ ಈಗ ಹೆಸರು ಮಾಡಿದ್ದಾರೆ. ಅವರಿಗೆ ಪರಭಾಷೆಯಿಂದ, ಬಾಲಿವುಡ್ನಿಂದ ಆಫರ್ಗಳು ಬಂದರೆ ಅದನ್ನು ರಿಜೆಕ್ಟ್ ಮಾಡಿದ ಉದಾಹರಣೆ ಸಾಕಷ್ಟಿದೆ. ದಕ್ಷಿಣ ಭಾರತದ ಹೀರೋಗಳಾದ ಅಲ್ಲು ಅರ್ಜುನ್, ಯಶ್ ಸೇರಿದಂತೆ ಅನೇಕರು ಹಿಂದಿ ಆಫರ್ಗಳನ್ನು ತಿರಸ್ಕರಿಸಿದ್ದರು. ಆ ಚಿತ್ರಗಳು ಯಶಸ್ಸು ಕಂಡವು ಮತ್ತು ರಿಜೆಕ್ಟ್ ಮಾಡಿದ ಹೀರೋಗಳಿಗೆ ಬೇಸರವನ್ನು ಉಂಟು ಮಾಡಿದವು. ‘ಬಜರಂಗಿ ಭಾಯಿಜಾನ್’ ಸಿನಿಮಾ 2015ರಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು ಹೀರೋ ಆಗಿ ನಟಿಸಿ ಗಮನ ಸೆಳೆದರು. ಮೂಲತಹವಾಗಿ ಈ ಚಿತ್ರದಲ್ಲಿ ನಟಿಸಬೇಕಾಗಿದ್ದು ಸಲ್ಮಾನ್ ಖಾನ್ ಅಲ್ಲ. ಅಲ್ಲು ಅರ್ಜುನ್ ಅವರು ಎನ್ನಲಾಗಿದೆ. ಅಲ್ಲು ಅರ್ಜುನ್ ಅವರಿಗೆ ಮೊದಲು ಈ ಆಫರ್ ಹೋಗಿತ್ತಂತೆ. ಚಿತ್ರದ ನಿರ್ದೇಶಕ ಕಬೀರ್ ಖಾನ್ ಅವರು ಈ ಆಫರ್ನ ಅವರಿಗೆ ನೀಡಿದರು. ನಂತರ ಈ ಆಫರ್ನ ಅವರು ರಿಜೆಕ್ಟ್ ಮಾಡಿದ್ದರು. ನಂತರ ಸಲ್ಮಾನ್ ಖಾನ್ ಅವರು ಮಾಡಿ ಗೆದ್ದರು.ಅನಿಮಲ್’ ಚಿತ್ರವು ಕಳೆದ ವರ್ಷ ರಿಲೀಸ್ ಆದ ಯಶಸ್ವಿ ಸಿನಿಮಾಗಳಲ್ಲಿ ಒಂದು. ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಮೆಚ್ಚುಗೆ ಪಡೆಯಿತು.
ಈ ಚಿತ್ರವನ್ನು ಜನರು ಹೆಚ್ಚು ಇಷ್ಟಪಟ್ಟರು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 900 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಈ ಚಿತ್ರದ ಆಫರ್ ಮೊದಲು ಹೋಗಿದ್ದು ಮಹೇಶ್ ಬಾಬು ಅವರಿಗೆ ಎನ್ನಲಾಗಿದೆ. ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ನಾಗ ಚೈತನ್ಯ ನಟಿಸಿದ್ದರು. ಈ ಸಿನಿಮಾದ ಪಾತ್ರಕ್ಕಾಗಿ ವಿಜಯ್ ಸೇತುಪತಿಗೆ ಆಫರ್ ನೀಡಲಾಗಿತ್ತು. ಆದರೆ, ಅವರು ಇದನ್ನು ರಿಜೆಕ್ಟ್ ಮಾಡಿದ್ದರು ನಂತರ ಈ ಆಫರ್ ನಾಗ ಚೈತನ್ಯ ಕೈ ಸೇರಿತ್ತು.ನವೀನ್ ಪೊಲಿಶೆಟ್ಟಿ ಅವರು ‘ಚಿಚೋರೆ’ ಸಿನಿಮಾ ಮಾಡಬೇಕಿತ್ತು. ಆದದರೆ, ಸಿನಿಮಾದ ಆಫರ್ ಅವರ ಕೈಸೇರಿಲ್ಲ. ಅವರು ರಿಜೆಕ್ಟ್ ಮಾಡಿದ್ದರಿಂದ ಸುಶಾಂತ್ ಸಿಂಗ್ ಅವರು ನಟಿಸಿದ ಕೊನೆಯ ಸಿನಿಮಾ ಇದಾಯಿತು. 2019ರಲ್ಲಿ ರಿಲೀಸ್ ಆದ ಸೈಫ್ ಅಲಿ ಖಾನ್ ನಟನೆಯ ‘ಲಾಲ್ ಕಪ್ತಾನ್’ ಸಿನಿಮಾ ಮೆಚ್ಚುಗೆ ಪಡೆದಿತ್ತು. ಈ ಸಿನಿಮಾದ ಆಫರ್ ಮೊದಲು ಯಶ್ಗೆ ಹೋಗಿತ್ತು. ಆಗಿನ್ನೂ ಅವರು ಬಾಲಿವುಡ್ ಸಿನಿಮಾ ಮಾಡುವ ಉದ್ದೇಶ ಹೊಂದಿರಲಿಲ್ಲ. ಹೀಗಾಗಿ, ಅವರು ಇದನ್ನು ರಿಜೆಕ್ಟ್ ಮಾಡಿದ್ದರು.