ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ
ದಿನ ಭವಿಷ್ಯ
ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 4
1.ಮೇಷ:
ದೈವಾನುಗ್ರಹವಿದ್ದರೆ ಎಲ್ಲವೂ ಸುಲಭಸಾಧ್ಯ. ಉದ್ಯೋಗಸ್ಥಾನದಲ್ಲಿ ಪ್ರೋತ್ಸಾಹದ ಮಾತುಗಳು. ಅಪರೂಪದ ನೆಂಟರೊಂದಿಗೆ ಸಮಾಗಮ. ಮುಂದಿನ ಯೋಜನೆಗಳ ಬಗೆಗೆ ಪಾಲುದಾರರೊಂದಿಗೆ ವಿಚಾರ ವಿನಿಮಯ. ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣಪತಿ ಅಥರ್ವಶೀರ್ಷ, ದೇವೀಸ್ತೋತ್ರ, ಆದಿತ್ಯ ಹೃದಯ ಓದಿ.
2.ವೃಷಭ:
ಕಾರ್ಯಕ್ಷೇತ್ರ ವಿಸ್ತರಣೆ ಸಂಬಂಧ ವಿಚಾರ ವಿನಿಮಯ. ಉದ್ಯೋಗ, ವ್ಯವಹಾರದಲ್ಲಿ ಆನಂದ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ. ಕೃಷಿ ಕ್ಷೇತ್ರದಲ್ಲಿ ಸಮಾರಂಭ ಆಯೋಜನೆ. ವಾಹನ ವ್ಯಾಪಾರಿಗಳಿಗೆ ಅಪಾರ ಲಾಭ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
3.ಮಿಥುನ:
ಹುರುಪಿನಿಂದ ಕಾರ್ಯಕ್ಷೇತ್ರಕ್ಕೆ ಪ್ರವೇಶ. ಹೊಸ ವಿಭಾಗದ ನೇತೃತ್ವ. ಚರ್ಮೋದ್ಯಮಿಗಳಿಗೆ ವಿಶೇಷ ಲಾಭ. ಕುಟುಂಬದಲ್ಲಿ ಕಿರಿಯರ ವಿವಾಹ ಸಿದ್ಧತೆ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರ ವಿಸ್ತರಿಸಲು ಉಪಕ್ರಮ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
4.ಕರ್ಕಾಟಕ:
ಕ್ಯಾಲೆಂಡರ್ ವರ್ಷದ ಕೊನೆಯ ದಿನ ಶುಭದಾಯಕ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿಗಳ ಮಾರಾಟಗಾರರಿಗೆ ವ್ಯಾಪಾರದ ಭರಾಟೆ. ಆಧ್ಯಾತ್ಮಿಕ ಮಾರ್ಗದರ್ಶಕರ ಭೇಟಿ. ಅವಿವಾಹಿತರಿಗೆ ವಿವಾಹದ ಪ್ರಸ್ತಾವ. ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಕವಚ, ನವಗ್ರಹ ಸ್ತೋತ್ರ ಓದಿ.
5.ಸಿಂಹ:
ಉದ್ಯೋಗದ ಸ್ಥಾನದಲ್ಲಿ ಕಾರ್ಯಕ್ರಮಗಳ ನೇತೃತ್ವ. ಉದ್ಯಮದ ನೌಕರರಿಗೆ ಆರ್ಥಿಕ ಪ್ರೋತ್ಸಾಹ. ವ್ಯವಹಾರ ಅಭಿವೃದ್ಧಿಗೆ ವಿಚಾರ ವಿನಿಮಯ. ಕುಟುಂಬದ ಹಿರಿಯರ ಮನೆಯಲ್ಲಿ ದೇವತಾ ಕಾರ್ಯಕ್ರಮ. ಉತ್ತರ ದಿಕ್ಕಿನಿಂದ ಕುಟುಂಬಕ್ಕೆ ಸಂಬಂಧಪಟ್ಟಂತೆ ಶುಭವಾರ್ತೆ. ಗಣೇಶ ಅಷ್ಟಕ, ನರಸಿಂಹ ಸ್ತೋತ್ರ, ಗುರುಸ್ತೋತ್ರ ಓದಿ.
6.ಕನ್ಯಾ:
ಮುಂದಿನ ವ್ಯಾವಹಾರಿಕ ವರ್ಷದ ಸ್ವಾಗತಕ್ಕೆ ಸಿದ್ಧತೆ. ಬಂಧುಗಳೊಂದಿಗಿನ ವ್ಯಾಜ್ಯ ರಾಜಿಯಲ್ಲಿ ಪರಿಹಾರ. ಗೃಹೋಪಯೋಗಿ ಸಾಮಗ್ರಿ ಖರೀದಿಗೆ ಧನವ್ಯಯ. ಅಧ್ಯಾಪಕ ವೃಂದಕ್ಕೆ ಕೆಲಸದ ಒತ್ತಡ. ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
7.ತುಲಾ:
ಪಂಚಮ ಶನಿಯ ಕಾಟವಿದ್ದರೂ ಶೀಘ್ರ ಚೇತರಿಕೆ. ಅಪರೂಪದಲ್ಲಿ ಅತಿಥಿ ಸತ್ಕಾರ ಯೋಗ. ಉದ್ಯೋಗ ಅರಸುತ್ತಿರುವವರಿಗೆ ಒಳ್ಳೆಯ ಅವಕಾಶಗಳು ಲಭ್ಯ. ಆಧ್ಯಾತ್ಮಿಕ ಚಿಂತನೆ, ಸದ್ಗ್ರಂಥ ಪಾರಾಯಣ, ಸಂಗೀತ ಶ್ರವಣ, ಭಜನೆ, ಕೀರ್ತನೆಗಳಲ್ಲಿ ಕಾಲಯಾಪನೆ. ಸಂಕಷ್ಟನಾಶನ ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ಮಹಿಷಮರ್ದಿನಿ ಸ್ತೋತ್ರ ಓದಿ.
8.ವೃಶ್ಚಿಕ:
ಉದ್ಯೋಗ ಸ್ಥಾನದಲ್ಲಿ ಹೊಸ ಆವಿಷ್ಕಾರಗಳು. ಸ್ವಂತ ಉದ್ಯಮದ ಸ್ಥಾನದಲ್ಲಿ ಸಂತೋಷಕೂಟ ಆಯೋಜನೆ. ಧಾರ್ಮಿಕ ಸ್ವರೂಪದ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಚಿಂತನೆಗೆ ಅವಕಾಶ ಕಲ್ಪನೆ. ನೊಂದವರ ಸಾಂತ್ವನಕ್ಕೆ ಸಂದರ್ಭದ ಸದುಪಯೋಗ. ಸಮಾಜದಲ್ಲಿ ಎಲ್ಲರಿಗೂ ಹರ್ಷ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
9.ಧನು:
ಮುಂದಿನ ಕಾರ್ಯಯೋಜನೆಗಳ ವಿಮರ್ಶೆ. ಉದ್ಯೋಗಾರ್ಥಿಗಳಿಗೆ ನೆರವು. ಕೇಟರಿಂಗ್ ವ್ಯವಹಾರಸ್ಥರಿಗೆ ಹೊಸ ಅವಕಾಶಗಳು. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಹಳೆಯ ಒಡನಾಡಿಯ ಅನಿರೀಕ್ಷಿತ ಭೇಟಿಯ ಆನಂದ. ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಆದಿತ್ಯ ಹೃದಯ ಓದಿ.
10.ಮಕರ:
ಉದ್ಯೋಗ ಸ್ಥಾನದಲ್ಲಿ ಕಡಿಮೆಯಾದ ಒತ್ತಡ. ದೇವತಾ ಸನ್ನಿಧಿಗೆ ಸಂದರ್ಶನ. ಇಷ್ಟದೇವರ ಅನುಗ್ರಹದಿಂದ ಸಂಕಲ್ಪ ಸಿದ್ಧಿ. ಮಕ್ಕಳ ಆನಂದಕ್ಕಾಗಿ ಸಂಭ್ರಮದಲ್ಲಿ ಭಾಗಿಯಾಗುವ ಅನಿವಾರ್ಯತೆ. ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಚೆ ಮೀರಿದ ಲಾಭ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.
11.ಕುಂಭ:
ಉದ್ಯೋಗಸ್ಥರಿಗೆ ಹೊಸ ಯೋಜನೆ ಅನುಷ್ಠಾನದ ಜವಾಬ್ದಾರಿ. ತಂದೆಯ ಊರಿನ ಬಂಧುಗಳ ಆಗಮನ. ಹತ್ತಿರದ ದೇವಾಲಯಕ್ಕೆ ಭೇಟಿ. ಮುದ್ರಣ ಕ್ಷೇತ್ರದವರಿಗೆ ಸಮಯಪಾಲನೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವ ಸವಾಲು. ಸಮಾಜ ಸೇವೆಯ ಕಾರ್ಯಕ್ಷೇತ್ರ ವಿಸ್ತರಿಸುವ ಕುರಿತು ಚಿಂತನೆ. ಗಣೇಶ ಕವಚ, ದೇವೀಸ್ತೋತ್ರ, ಶನಿಸ್ತೋತ್ರ ಓದಿ.
12.ಮೀನ:
ಕುಟುಂಬದ ಸದಸ್ಯರ ಸಮ್ಮಿಲನ. ತಾಯಿಗೆ ಅಥವಾ ತಾಯಿಯ ಸ್ಥಾನದಲ್ಲಿರುವ ವ್ಯಕ್ತಿಗೆ ಗೌರವಾರ್ಪಣೆ. ಉದ್ಯೋಗ ಸ್ಥಾನದಲ್ಲಿರುವ ಸಹಯೋಗಿಗಳಿಗೆ ಸತ್ಕಾರ. ಆಭರಣ ವ್ಯಾಪಾರಿಗಳಿಗೆ ಶುಭದಿನ. ಧಾರ್ಮಿಕ ಕ್ಷೇತ್ರದ ಕಾರ್ಯಕ್ರಮದಲ್ಲಿ ಪಾಲುಗೊಳ್ಳುವ ಅವಕಾಶ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.