ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Jan 17, 2025 - 06:52
ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

ದಿನ ಭವಿಷ್ಯ:
      
              ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ 8

1.ಮೇಷ:
ಜೀವನಕ್ಕೊಂದು ಉದ್ಯೋಗ ಅರಸಿ ಬಂದವರಿಗೆ ಯಥೋಚಿತ ಮಾರ್ಗದರ್ಶನ. ಸತ್ಪಾತ್ರರಿಗೆ ದಾನ ಮಾಡುವ ಅವಕಾಶ. ವ್ಯವಹಾರ ನಿಮಿತ್ತ ಪ್ರಮುಖರ ಭೇಟಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಂತಸ. ಎಲ್ಲ ವ್ಯವಹಾರಗಳಲ್ಲಿ ಮುನ್ನಡೆ. ಗಣೇಶ ಅಷ್ಟಕ, ನರಸಿಂಹ ಸ್ತೋತ್ರ ನವಗ್ರಹ ಕವಚ ಓದಿ.

2.ವೃಷಭ:
ಈ ದಿನ ನಿಮಗೆ ಸರ್ವತ್ರ ಯಶಶ್ಸು. ಬೌದ್ಧಿಕ ಕೆಲಸಕ್ಕೆ ಯೋಗ್ಯ ಗೌರವ. ವಸ್ತ್ರ, ಆಭರಣ, ಯಂತ್ರೋಪಕರಣ ವ್ಯಾಪಾರಿಗಳಿಗೆ ಶುಭ. ಸಂಪಾದನೆಯ ಹೊಸ ಮಾರ್ಗ  ಅನ್ವೇಷಣೆ ದೇವತಾರಾಧನೆಯಿಂದ‌ ಶುಭಫಲ ನಿರೀಕ್ಷೆ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

3.ಮಿಥುನ:
ಸಂಕಲ್ಪಕ್ಕೆ ಸರಿಯಾಗಿ ಪರಿಸರದಲ್ಲಿ ವ್ಯತ್ಯಾಸ. ಹೊಸ ಅವಕಾಶಗಳು  ಅಯಾಚಿತವಾಗಿ ಲಭಿಸುವ  ಸಾಧ್ಯತೆ. ವಧೂವರಾನ್ವೇಷಿಗಳಿಗೆ ಅನುಕೂಲ. ಗೃಹಾಲಂಕಾರ ವಸ್ತುಗಳ ಖರೀದಿಗೆ ಧನವ್ಯಯ. ಸತ್ಪಾತ್ರರಿಗೆ ದಾನ ಮಾಡಿ ಸಾರ್ಥಕ ಭಾವ ಹೊಂದುವಿರಿ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

4.ಕರ್ಕಾಟಕ:
ಯೋಗ್ಯತೆಗೆ ತಕ್ಕ ಜವಾಬ್ದಾರಿ ನಿಯೋಜನೆ. ನಿರೀಕ್ಷಿತ ಧನ ಕೈಸೇರಿ ನೆಮ್ಮದಿ. ನೊಂದವರಿಗೆ ಸಾಂತ್ವನ‌ ಹೇಳುವ ಅವಕಾಶ‌. ಕೃಷಿಕರಿಗೆ ನೆಮ್ಮದಿ, ಸಮಾಧಾನದ ಸನ್ನಿವೇಶ .ಸಂಸಾರದಲ್ಲಿ  ಸಾಮರಸ್ಯ, ಪ್ರೀತಿ ವೃದ್ಧಿ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.


5.ಸಿಂಹ:
ಎಲ್ಲಿಂದಲೋ ಬಂದ ಅಡಚಣೆ  ತಾನಾಗಿ ದೂರ. ಪತಿ- ಪತ್ನಿಯರಿಂದ ಪರಸ್ಪರ ಸಕಾಲಿಕ ಸಹಾಯ. ಹಿರಿಯರ ಆರೋಗ್ಯ ತೃಪ್ತಿಕರ. ಗೆಳೆಯನ ಸಂಸಾರದ ವಿವಾಹ ಸಮಸ್ಯೆ ಪರಿಹಾರಕ್ಕೆ ಸಹಾಯ‌.ವ್ಯವಹಾರ ಸಂಬಂಧ ಸಣ್ಣಪ್ರಯಾಣ ಸಂಭವ. ಗಣೇಶ ಪಂಚರತ್ನ, ಶಿವ ಕವಚ, ಅನ್ನಪೂರ್ಣಾ ಸ್ತೋತ್ರ ಓದಿ.

6.ಕನ್ಯಾ:
ಲೌಕಿಕ ಸಮಸ್ಯೆಗೆ ಅಧ್ಯಾತ್ಮ ಮಾರ್ಗದಲ್ಲಿ ಪರಿಹಾರ. ವೃತ್ತಿಪರ ಉದ್ಯೋಗಸ್ಥರಿಗೆ ಸಮಾಧಾನ. ಬಂಧುವರ್ಗದವರಿಗೆ ಸಹಾಯ ಮಾಡುವ ಸಂದರ್ಭ. ದಂಪತಿಗಳ ನಡುವೆ   ಅನುರಾಗ ವೃದ್ಧಿ. ವಿದೇಶದಲ್ಲಿರುವ ಮಿತ್ರನ ಆಗಮನ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

7.ತುಲಾ
ದೀರ್ಘಕಾಲದ ಸಮಸ್ಯೆಗೆ ಸಮಾಧಾನ‌. ವೃತ್ತಿರಂಗದಲ್ಲಿ ಯೋಗ್ಯತೆಗೆ ಗೌರವ. ಗೃಹೋಪಕರಣ  ದುರಸ್ತಿಗೆ ಧನವ್ಯಯ. ಗೃಹೋದ್ಯಮಗಳಿಗೆ  ಅನುಕೂಲದ ವಾತಾವರಣ.‌ ಆತ್ಮಬಲ ವೃದ್ಧಿಗಾಗಿ ಯೋಗ, ಧ್ಯಾನ, ಜಪಾದಿಗಳಿಗೆ ಸಮಯ ನೀಡಿಕೆ ವಿಹಿತ. ಗಣೇಶ ಕವಚ, ಶಿವನಾಮಾವಲ್ಯಷ್ಟಕ, ಶನಿಸ್ತೋತ್ರ ಓದಿ.

8.ವೃಶ್ಚಿಕ:
ಉದ್ಯೋಗ ರಂಗದಲ್ಲಿ ಅಪರಿಮಿತ ಸಾಧನೆ. ವ್ಯಾಪಾರಿಗಳಿಗೆ  ನಿರೀಕ್ಷೆ ಮೀರಿದ ಲಾಭ. ಹಿರಿಯರ ಆರೋಗ್ಯ ಸ್ಥಿರ. ಗೃಹಿಣಿಯರಿಗೆ ಸಣ್ಣ ಉದ್ಯಮ ಬೆಳೆಸಲು  ಆಸಕ್ತಿ. ಮಕ್ಕಳಿಂದ ಮಹತ್ಸಾಧನೆ ನಿರೀಕ್ಷೆ. ಸಂಕಷ್ಟನಾಶನ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

9.ಧನು:
ಪರಿಚಿತರಿಂದ ಅಯಾಚಿತ ಸಹಾಯ .ದೇವತಾರಾಧನೆಯತ್ತ ವಿಶೇಷ ಒಲವು. ವ್ಯವಹಾರಸ್ಥರಿಂದ ಹೊಸ ಸಾಧ್ಯತೆಗಳ ಹುಡುಕಾಟ. ಕಾರ್ಯ ಸಾಧನೆಗೆ ಹರ್ಷಾಚರಣೆ. ಸರಕಾರಿ ಉದ್ಯೋಗಸ್ಥರಿಗೆ ದಿಢೀರ್ ಸಮಸ್ಯೆ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಆಂಜನೇಯ ಸ್ತೋತ್ರ ಓದಿ.

10.ಮಕರ: 
ಸಂದರ್ಭಕ್ಕೆ ಸರಿಯಾದ ಕಾರ್ಯನೀತಿಯಿಂದ ಜಯ. ವಿಳಂಬಿತ ಕಾರ್ಯ ಪೂರ್ಣವಾಗಿ ಸಮಾಧಾನ. ಹೊಸ ಜವಾಬ್ದಾರಿಗಳು ಬರುವ ಸಂಭವ. ನಿರೀಕ್ಷಿತ ಫಲ ಪ್ರಾಪ್ತಿ. ಸಂಸಾರದ ಕೆಲಸಕ್ಕಾಗಿ ಸಣ್ಣ ಪ್ರವಾಸ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಶನಿಸ್ತೋತ್ರ ಓದಿ.

11.ಕುಂಭ:
ಧಾರ್ಮಿಕ ಕಾರ್ಯಗಳಿಗೆ, ಜನೋಪಯೋಗಿ ಯೋಜನೆಗಳಿಗೆ ನೆರವು. ಸಹೋದ್ಯೋಗಿಗಳ ಸಹಕಾರ, ಪ್ರೋತ್ಸಾಹ ಲಭ್ಯ. ಅನಿರೀಕ್ಷಿತ ಧನಾಗಮ ಯೋಗವಿದೆ. ಕ್ರೀಡಾಳುಗಳಿಗೆ ಹುಮ್ಮಸ್ಸಿನ ವಾತಾವರಣ. ವಿದ್ಯಾರ್ಥಿಗಳಿಗೆ ಹಿರಿಯರ ಪ್ರೋತ್ಸಾಹ ಲಭ್ಯ. ಗಣೇಶ ಕವಚ, ದೇವೀಸ್ತೋತ್ರ, ಶನಿಸ್ತೋತ್ರ ಓದಿ.

12.ಮೀನ:
ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ನಿರೀಕ್ಷಿತ ಫಲ. ಭೂ ವ್ಯವಹಾರ, ಕಟ್ಟಡ ನಿರ್ಮಾಪಕರಿಗೆ ಹೊಸ ಕೆಲಸ. ಕಾರ್ಮಿಕ ವರ್ಗದವರ ತೊಂದರೆ ನಿವಾರಣೆ. ಉದ್ಯೋಗ ಅರಸುವವರಿಗೆ ಶುಭಸೂಚನೆ. ಸಂಸಾರದಲ್ಲಿ ಸಹಕಾರ, ಸಂತೃಪ್ತಿಯ ವಾತಾವರಣ. ಗಣೇಶ ಸ್ತೋತ್ರ, ದೇವೀಸ್ತೋತ್ರ, ಶನಿಸ್ತೋತ್ರ ಓದಿ.