ಬೋಳಂತೂರು ದರೋಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ !
ಬೋಳಂತೂರು ಹಾತ್ತಿರದ ನಾಶ೯ದ ಉದ್ಯಮಿ ಸುಲೈಮಾನ್ ಹಾಜಿ ಮನೆಯಲ್ಲಿ ಜಾರಿ ನಿದೇ೯ಶಾನಾಲಾಯ ಅಧಿಕಾರಿಗಳ ಸೋಗಿನಲ್ಲಿ ಒಂದು ಹಣ ಲೂಟಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನೊಬ್ಬ ಇದಕ್ಕೆಲ್ಲಾ ಸೂತ್ರಧಾರಿ ಎಂಬುದು ಖಚಿತವಾಗಿದೆ.
ಮಂಗಳೂರು : ಬೋಳಂತೂರು ಹಾತ್ತಿರದ ನಾಶ೯ದ ಉದ್ಯಮಿ ಸುಲೈಮಾನ್ ಹಾಜಿ ಮನೆಯಲ್ಲಿ ಜಾರಿ ನಿದೇ೯ಶಾನಾಲಾಯ ಅಧಿಕಾರಿಗಳ ಸೋಗಿನಲ್ಲಿ ಒಂದು ಹಣ ಲೂಟಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನೊಬ್ಬ ಇದಕ್ಕೆಲ್ಲಾ ಸೂತ್ರಧಾರಿ ಎಂಬುದು ಖಚಿತವಾಗಿದೆ.ಪೋಲಿಸರು ತನಿಖೆ ಚುರುಕುಗೊಳಿಸಿದ್ದಾರೆ.ತಮಿಳುನಾಡು ನೊಂದಣಿಗೆ ಸಂಬಂಧಪಟ್ಟ ಕಾರಿನಲ್ಲಿ ಆರು ಮಂದಿಗಳು ನಾವು ಇ.ಡಿ. ಅಧಿಕಾರಿಗಳು ಎಂದು ಸುಲೈಮಾನ್ ಮನೆಗೆ ಧಾವಿಸಿ ಏಕಾಏಕಿ ಹಣವನ್ನ ಲೂಟಿ ಮಾಡಿ ಅಲ್ಲಿಂದ ಓಡಿ ಹೋಗಿದ್ದಾರೆ.ವಿಚಿತ್ರವೆಂದರೆ ಕಾರಿನ ಚಾಲಕ ಬಿಟ್ಟರೆ ಉಳಿದವರು ಕನ್ನಡ ಮಾತಾನಾಡುತ್ತಿರಲ್ಲಿಲ್ಲ.ಅವರು ಬೇರೆ ಬೇರೆ ಭಾಷೆಯಲ್ಲಿ ಮಾತಾನಾಡುತ್ತ ಇದ್ದರಿಂದ ಕಾರು ಚಾಲಕನೆ ಸುಲೈಮಾನ್ರವರಿಗೆ ಭಾಷೆಯ ನಿದೆ೯ಶನ ನೀಡುತ್ತಿದ್ದ.
ಸುಲೈಮಾನ್ರವರು ಮೊದಲಿಗೆ ಬೀಡಿ ಕಾಮಿ೯ಕರಿಗೆ ಕೊಡಬೇಕೆಂದು ಇಟ್ಟಿದ್ದ ಹಣವನ್ನು ತೋರಿಸುತ್ತಾರೆ.ಆಗ ತಂಡದಲ್ಲಿದ್ದ ಒಬ್ಬ ಬೇರೆ ಹಣವನ್ನ ಇಟ್ಟಿರುವ ಬಗ್ಗೆ ವಿಚಾರಿಸುತ್ತಾನೆ. ಮತ್ತು ಚಾಲಕನು ಸಹಾ ಸುಲೈಮಾನ್ರವರ ಎಲ್ಲಾ ವ್ಯವಹಾರಗಳ ಮಾಹಿತಿ ಸಿಗುವಂತೆಯೇ ಪ್ರಶ್ನೆಗಳನ್ನೂ ಕೇಳುತ್ತಿದ್ದ.ಆಗಾಗಿ ಕಾರು ಚಾಲಕನಿಗೆ ಅವರ ಎಲ್ಲಾ ವ್ಯವಹಾರಗಳು ತಿಳಿದಿವೆ .ಆಗಾಗಿ ಈತನ ನೇತೃತ್ವದಲ್ಲಿಯೇ ಈ ಸಂಚು ನೆದೆದಿದೆ ಎಂಬುದು ಪೋಲಿಸರ ಸಂಶಯವಾಗಿದೆ.ಇದನ್ನೆಲ್ಲಾ ತಿಳಿದಾಗ ದರೋಡೆಕಾರರ ಗುಂಪಿನಲ್ಲಿದ್ದವರು ಬೇರೆ ಬೇರೆ ರಾಜ್ಯಕ್ಕೇ ಸಂಬಂಧಿಸಿದವರಾಗಿದ್ದು ಸ್ಥಳೀಯ ಭಾಷೆ ಅವರಿಗೆ ಗೊತ್ತಿರಲ್ಲಿಲ್ಲ . ಕಾರು ಚಾಲಕ ಸ್ವಲ್ಪ ಮಟ್ಟಿಗೆ ದಕ್ಷಿಣ ಭಾರತದ ಭಾಷೆಗಳಾದ ಮಲಯಾಳ, ತಮಿಳನ್ನ ಮಾತಾನಾಡುವ ಕೌಶಲ್ಯ ಹೊಂದಿಂದ್ದರಿಂದ ಅವರೊಟ್ಟಿಗೆ ಕೈ ಜೋಡಿಸಲು ಸುಲಭವಾಗಿದೆ .ಆದ್ದರಿಂದ ಹೊರ ರಾಜ್ಯದವರನ್ನ ಈ ಸಂಚಿಗೆ ಬಳಸಿಕೊಂದಿರುವುದರಿಂದ ಅವರು ಕನಾ೯ಟಕವನ್ನು ಬಿಟ್ಟು ಹೊರ ಹೋಗಿರುವ ಸಾಧ್ಯತೆ ಇದ್ದು, ಪೋಲೀಸರು ಬೇರೆ ರಾಜ್ಯಕ್ಕೆ ತನಿಖೆಯನ್ನ ವಿಸ್ತರಣೆ ಮಾಡಿದ್ದಾರೆ.
ಸುಲೈಮಾನ್ರವರು ಬಿ.ಸಿ.ರೋಡ್ನಲ್ಲಿದ್ದ ತಮ್ಮ ಮನೆಯನ್ನು ಮಾರಿದ್ದ ಬಗೆ ತಿಳಿದವರೇ ಈ ಕೃತ್ಯ ಮಾಡಿದ್ದಾರೆಂದು ಶಂಕೆಯಿದ್ದು, ಈ ಮಾಹಿತಿ ಮತ್ತೆ ಯಾರಿಗೆ ತಿಳಿದಿರಬಹುದೆಂದು ಪೋಲೀಸರು ವಿಷಯ ಕಲೆ ಹಾಕುತ್ತಿದ್ದು, ಈಗಾಗಲೆ ದೂರು ನೀಡಿರುವಂತೆ ಮೂವತ್ತು ಲಕ್ಷ ರೂ. ಲೂಟಿ ಆಗಿದೆ ಎಂಬ ವರದಿ ಬಂದಿದ್ದು ,ಇನ್ನೂ ಭಾರಿ ದೊಡ್ಡ ಮೊತ್ತ ಅಲ್ಲಿ ಇತ್ತು ಎಂಬ ಮಾಹಿತಿ ಇದೆ.ಹಾಗೇ ಕೆಲವು ಆರೋಪಿಯರು ಕೇರಳಕ್ಕೆ ತೆರೆಳಿದ್ದಾರೆಂದು ಅನುಮಾನವಿದ್ದು,ಇನ್ನೂ ಯಾವುದೆ ನಿದಿ೯ಷ್ಟ ಮಾಹಿತಿಗಳು ಸಿಕ್ಕಿಲ್ಲವೆಂಬುದು ಪೋಲೀಸರ ಹೇಳಿಕೆಯಾಗಿದೆ