ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Jan 19, 2025 - 05:04
ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

ದಿನ ಭವಿಷ್ಯ
        ‌‌‌‌‌          ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ 1

1.ಮೇಷ: 
ಕುಟುಂಬದ ಆವಶ್ಯಕತೆಗಳನ್ನು ಗಮನಿಸುವ ದಿನ. ಬಂಧುಮಿತ್ರರ ಸೌಹಾರ್ದ ಭೇಟಿ. ಉದ್ಯಮಿಗಳಿಗೆ ವ್ಯವಹಾರ ಸುಧಾರಣೆಯ ಚಿಂತೆ. ಕೆಲವು ವರ್ಗದ ವ್ಯಾಪಾರಿಗಳಿಗೆ ಲಾಭ. ಕೆಲವರಿಗೆ, ರಕ್ತದಾನ ಮಾಡುವ ಅವಕಾಶ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕವಚ, ಆದಿತ್ಯ ಹೃದಯ ಓದಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

2.ವೃಷಭ:
ರವಿವಾರದ ರಜೆಯ ಆನಂದ. ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ. ವಿವಾಹಾದಿ ಸಂಭ್ರಮಗಳಲ್ಲಿ ಭಾಗಿ. ಅನಾಥಾಶ್ರಮ, ವೃದ್ಧಾಶ್ರಮಕ್ಕೆ ಭೇಟಿ. ಭಜನೆ, ಸತ್ಸಂಗಗಳಲ್ಲಿ ಕಾಲಯಾಪನೆ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

3.ಮಿಥುನ:
ಹೊಸ ಪರಿಚಯದ ಗೆಳೆಯರೊಡನೆ ಸಂವಾದ. ಗೃಹೋತ್ಪನ್ನ ತಿನಿಸುಗಳ ಜನಪ್ರಿಯತೆ ವೃದ್ಧಿ. ವಿದ್ಯಾರ್ಥಿಗಳಿಗೆ ಆಲಸ್ಯ. ಇಷ್ಟದೇವರ ಸ್ಥಳಕ್ಕೆ ಸಂದರ್ಶನ. ಅನಾಥಾಶ್ರಮ, ವೃದ್ಧಾಶ್ರಮಕ್ಕೆ ಭೇಟಿ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.

4.ಕರ್ಕಾಟಕ:
ಸರ್ವಜನ ಹಿತದೊಂದಿಗೆ ಸ್ವಹಿತ ರಕ್ಷಣೆಯ ಕುರಿತೂ ಯೋಚನೆ ಇರಲಿ. ವ್ಯವಹಾರ ಸಂಬಂಧ ಉತ್ತರ ದಿಕ್ಕಿಗೆ ಪ್ರಯಾಣ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ‌ಲಾಭ‌. ಛಲದಿಂದ ಉನ್ನತಿ ಸಾಧಿಸಿದ ವ್ಯಕ್ತಿಯ ಭೇಟಿ. ದಿನವಿಡೀ ಮಿಶ್ರ ಫಲಗಳ ಅನುಭವ. ಗಣೇಶ ಕವಚ, ವೆಂಕಟೇಶ್ವರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

5.ಸಿಂಹ:
ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ. ವೃತ್ತಿಪರರಿಗೆ ಕೆಲಸದ ಒತ್ತಡ ಆರಂಭ. ಸಂಗಾತಿಯ ಸ್ವಾಸ್ಥ್ಯದ ಕಡೆಗೆ ಗಮನ ಇರಲಿ. ಮನೆಮಂದಿಯೊಂದಿಗೆ ಸಣ್ಣ ಪ್ರವಾಸ. ವೈದ್ಯರ‌ ಭೇಟಿಯಿಂದ ಸಂಶಯ ಪರಿಹಾರ.ಗಣೇಶ ದ್ವಾದಶನಾಮ ಸ್ತೋತ್ರ, ಶಿವಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಓದಿ.

6.ಕನ್ಯಾ:
ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ‌. ಕುಶಲ ಕರ್ಮಿಗಳಿಗೆ  ಶೀಘ್ರ ಉದ್ಯೋಗ ಪ್ರಾಪ್ತಿ. ಉದ್ಯೋಗಸ್ಥ ಮಹಿಳೆಯರಿಗೆ ವಿರಾಮ. ಬಂಧುಗಳ ಮನೆಯಲ್ಲಿ ದೇವತಾರಾಧನೆ. ವಿವಾಹಾಸಕ್ತರಿಗೆ ಶುಭಸಮಾಚಾರ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಕವಚ ಓದಿ.

7.ತುಲಾ:
ರವಿವಾರವಾದರೂ ಬಿಡುವಿಲ್ಲದಷ್ಟು ಕೆಲಸಗಳು. ವ್ಯವಹಾರ ಸುಧಾರಣೆಯತ್ತ ಗಮನ. ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಆಸಕ್ತಿ ವೃದ್ಧಿ. ಕೃಷಿ , ಹೈನುಗಾರಿಕೆ, ಜೇನು ಸಾಕಣೆಯಲ್ಲಿ ಮಗ್ನತೆ. ಟೈಲರಿಂಗ್ ಬಲ್ಲವರಿಗೆ ಶುಭದಿನ. ಗಣೇಶ ಕವಚ, ದಾರಿದ್ರ್ಯದಹನ ಶಿವಸ್ತೋತ್ಶ, ಶನಿಸ್ತೋತ್ರ ಓದಿ. 

8.ವೃಶ್ಚಿಕ:
ಬಂಧುಗಳ ಮನೆಯಲ್ಲಿ ಶುಭಕಾರ್ಯ. ಉದ್ಯೋಗ, ವ್ಯವಹಾರ ಕ್ಷೇತ್ರಗಳ ಮಿತ್ರರ ಭೇಟಿ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ. ದೂರದಲ್ಲಿರುವ ಮಕ್ಕಳ ಆಗಮನ. ಧಾರ್ಮಿಕ ಉಪನ್ಯಾಸ ,ಹರಿಕಥೆ ಶ್ರವಣ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಗುರುಸ್ತೋತ್ರ ಓದಿ.

9.ಧನು:
ಕುಟುಂಬದಲ್ಲಿ ಸಮೃದ್ಧಿಯ ಲಕ್ಷಣಗಳು. ದಂಪತಿಗಳ ನಡುವೆ ಅನುರಾಗ ವೃದ್ಧಿ ‌ಗೆಳೆಯನ ವ್ಯಾಪಾರ ವೃದ್ಧಿಗೆ ಸಹಾಯ. ಸಣ್ಣ ಗೃಹೋದ್ಯಮ ಅಥವಾ ಹೈನುಗಾರಿಕೆ ಆಸಕ್ತರಿಗೆ ಅನುಕೂಲ. ನೊಂದವರ ಬದುಕಿನಲ್ಲಿ ಆಶಾಕಿರಣ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

10.ಮಕರ:
ಬಂಧುಗಳ ಸಂತೋಷದಲ್ಲಿ ಭಾಗಿ. ಸಣ್ಣ ಉದ್ಯಮಗಳಿಗೆ ಶುಭಕಾಲ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ  ಲಾಭ. ಗೃಹೋತ್ಪನ್ನಗಳಿಗೆ ಅಧಿಕ‌ ಬೇಡಿಕೆ. ಇಷ್ಟದೇವತಾ ಮಂದಿರ ಸಂದರ್ಶನ. ಸಂಕಷ್ಟನಾಶನ ಗಣೇಶ ಸ್ತೋತ್ರ, ದತ್ತಪಂಜರ ಸ್ತೋತ್ರ,ಶನಿಸ್ತೋತ್ರ ಓದಿ.

11.ಕುಂಭ:
ಸತ್ಕಾರ್ಯಗಳಿಗೆ ಪ್ರತ್ಯಕ್ಷ ನೆರವು.ವೈದ್ಯಕೀಯ ವೃತ್ತಿಯವರಿಗೆ ಕೀರ್ತಿ. ಸಮಾಜದಲ್ಲಿ ಗೌರವ, ಜನಪ್ರಿಯತೆ ವೃದ್ಧಿ. ಆಸ್ಪತ್ರೆ, ಅನಾಥಾಲಯಕ್ಕೆ ಭೇಟಿ. ಅಪರೂಪದ ಬಂಧುಗಳ ಆಗಮನ, ಸಣ್ಣ ಪ್ರವಾಸ ಸಂಭವ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

12.ಮೀನ: ‌
ಮುಖ್ಯ ಕೆಲಸಗಳಿಗೆ ಪೂರ್ವಸಿದ್ಧತೆ. ಧಾರ್ಮಿಕ ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಭಾಗಿ. ಹಳೆಯ ಸಹಚರರ ಭೇಟಿ. ಬಂಧುಗಳ ಮನೆಯಲ್ಲಿ ಶುಭಕಾರ್ಯ. ದಂಪತಿಗಳ ನಡುವೆ ಅನುರಾಗ, ವಿಶ್ವಾಸ ವೃದ್ಧಿ. ಗಣೇಶ ದ್ವಾದಶನಾಮ ಸ್ತೋತ್ರ, ದಕ್ಚಿಣಾಮೂರ್ತಿ ಸ್ತೋತ್ರ, ಶನಿಸ್ತೋತ್ರ ಓದಿ.