ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Jan 25, 2025 - 06:47
ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

ದಿನ ಭವಿಷ್ಯ

                 ಜ್ಯೋತಿರ್ಮಯ.

ಅದೃಷ್ಟ ಸಂಖ್ಯೆ  7.

1.ಮೇಷ:
ಸಾಲಾಗಿ ಬರುತ್ತಿರುವ ಕೆಲಸಗಳನ್ನು ಕಂಡು  ಧೃತಿಗೆಡದಿರಿ. ಹೆಚ್ಚುವರಿ ಆದಾಯದ ಮಾರ್ಗ ಗೋಚರ. ವಸ್ತ್ರೋದ್ಯಮ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು. ಸಮಾಜಸೇವಾ ಕಾರ್ಯಗಳಲ್ಲಿ ಆಸಕ್ತಿ. ಪರೋಪಕಾರಕ್ಕಾಗಿ ಪ್ರಯಾಣ. ಗಣೇಶ ಸಹಸ್ರನಾಮ, ರಾಮರಕ್ಷಾ ಸ್ತೋತ್ರ, ನವಗ್ರಹ ಕವಚ ಓದಿ.

2.ವೃಷಭ:
ಹಿತಶತ್ರುಗಳ ಚಿತಾವಣೆಯಿಂದ ಸ್ವಲ್ಪ ಕಿರಿಕಿರಿ. ಸಾಮಾಜಿಕ ಕಾರ್ಯಗಳಿಗೆ  ಉದ್ಯಮಿಗಳ ಪ್ರೋತ್ಸಾಹ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ. ವ್ಯವಹಾರ ಸಂಬಂಧ ಪ್ರಮುಖ ವ್ಯಕ್ತಿಯ ಭೇಟಿ. ಮೂಲಸೌಕರ್ಯ ಅಭಿವೃದ್ದಿ ಕಾರ್ಯಗಳಲ್ಲಿ ಭಾಗಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

3.ಮಿಥುನ:
ಸೋಲು- ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ. ಉದ್ಯೋಗಸ್ಥರಿಗೆ  ಸಂತೃಪ್ತಿ, ಸಮಾಧಾನದ ಅನುಭವ. ಸ್ವಂತ ಉದ್ಯಮಕ್ಕೆ ಮೂಲ ಸೌಲಭ್ಯಗಳ ಸಮಸ್ಯೆ. ಹಿರಿಯರ ಮನೆಯಲ್ಲಿ ದೇವತಾ ಕಾರ್ಯ. ಪಿತ್ರಾರ್ಜಿತ ಕೃಷಿ ಭೂಮಿಯಲ್ಲಿ ಸಾಮಾನ್ಯ ಬೆಳೆ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.

4.ಕರ್ಕಾಟಕ:
ನಿಂದೆ-  ಪ್ರಶಂಸೆ ಇವೆರಡನ್ನೂ  ತಲೆಗೆ ತೆಗೆದುಕೊಳ್ಳಬೇಡಿ. ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಹಿನ್ನಡೆ. ಉದ್ಯಮಗಳಿಗೆ ಕಾನೂನು ತೊಂದರೆ. ಪಾಲುದಾರಿಕೆ ವ್ಯವಹಾರ ವಿಸ್ತರಣೆ. ಸಣ್ಣ ಪ್ರಮಾಣದ ಕೃಷಿಕಾರ್ಯದಲ್ಲಿ ಸಂತೃಪ್ತಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

5.ಸಿಂಹ:
ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಅರ್ಹರಿಗೆ ಸಹಾಯ ಮಾಡುವ ಅವಕಾಶ. ಸಾಮಾಜಿಕ ಪಿಡುಗುಗಳ ನಿವಾರಣೆಗೆ ಸಾಮೂಹಿಕ ಚಿಂತನೆ. ಶಿಕ್ಷಿತರಿಗೆ ಉದ್ಯೋಗ ಅರಸಲು ಸಹಾಯ. ಪಾಲುದಾರಿಕೆ ಪ್ರಸ್ತಾವ ಸ್ವೀಕಾರದಿಂದ ಹಿತ. ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

6.ಕನ್ಯಾ:
ಅಪರಿಚಿತ ವ್ಯಕ್ತಿಗಳಿಂದ ಆಪತ್ತಿನಲ್ಲಿ ಸಹಾಯ. ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ಸಟ್ಟಾ ವ್ಯವಹಾರದಿಂದ ದೂರವಿರಿ. ಸೋದರಿಯ ಮನೆಯಲ್ಲಿ ಧಾರ್ಮಿಕ ಸಮಾರಂಭ. ಪಾಲುದಾರಿಕೆ ವ್ಯವಹಾರ ಸಂಬಂಧ ಪ್ರಯಾಣ. ಗಣೇಶ ಕವಚ, ನರಸಿಂಹ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

7.ತುಲಾ:
ಉದ್ಯೋಗದಲ್ಲಿ ಅನುಭವಸ್ಥರಿಗೆ ಪುರಸ್ಕಾರ. ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ವಸ್ತ್ರ, ಆಭರಣ ಖರೀದಿ. ಮಹಿಳೆಯರ ನೇತೃತ್ವದ  ಉದ್ಯಮಗಳ  ಏಳಿಗೆ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯದ ವಾತಾವರಣ. ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

8.ವೃಶ್ಚಿಕ:
ಉದ್ಯೋಗ  ಸ್ಥಾನದಲ್ಲಿ ಅನುಕೂಲದ ವಾತಾವರಣ. ಅಧಿಕಾರಿಗಳಿಗೆ ಅಪವಾದದ ಭೀತಿ. ಯಂತ್ರೋಪಕರಣ  ವ್ಯಾಪಾರಿಗಳಿಗೆ  ಅದೃಷ್ಟ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ. ಪ್ರಾಚೀನ ವಿದ್ಯೆಗಳನ್ನು ಕಲಿಯುವ ಆಸಕ್ತಿ. ಗಣೇಶ ಸ್ತೋತ್ರ, ರಾಮ ಭುಜಂಗಪ್ರಯಾತ ಸ್ತೋತ್ರ , ನವಗ್ರಹ ಸ್ತೋತ್ರ ಓದಿ.

9.ಧನು:
ಉದ್ಯೋಗಸ್ಥರಿಗೆ ನೆಮ್ಮದಿಯ ಅನುಭವ. ಶಿಕ್ಷಿತರಿಗೆ ಒಳ್ಳೆಯ ಅವಕಾಶಗಳು ಗೋಚರ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳಿಗೆ ಲಾಭ. ಅಸಹಾಯಕ ರೋಗಿಯ ಚಿಕಿತ್ಸೆಗೆ ನೆರವು. ಕುಟುಂಬ ಕಲಹ ಮಾತುಕತೆಯಿಂದ ಪರಿಹಾರ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಓದಿ.

10.ಮಕರ:
ಉದ್ಯೋಗ ಸ್ಥಾನದಲ್ಲಿ ಹೊಸ ವ್ಯವಸ್ಥೆ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಲಭ್ಯ. ಹಿತಶತ್ರುಗಳ ಕುತಂತ್ರಕ್ಕೆ ಸೋಲು. ನ್ಯಾಯವಾದಿಗಳ ಕಾರ್ಯಸಾಮರ್ಥ್ಯಕ್ಕೆ ಸವಾಲು. ಗಣೇಶ ಕವಚ, ನರಸಿಂಹ ಕವಚ, ಶನಿಸ್ತೋತ್ರ ಓದಿ.

11.ಕುಂಭ:
ಉದ್ಯೋಗದಲ್ಲಿ ಹೆಚ್ಚುವರಿ ಹೊಣೆಗಾರಿಕೆಗಳು. ಗ್ರಾಹಕರ ಅಪೇಕ್ಷೆಗೆ ಸರಿಯಾಗಿ ಸ್ಪಂದನ‌. ಸಮಾಜ ಸೇವಾಕಾರ್ಯಗಳಿಗೆ ಮತ್ತಷ್ಟು ಅವಕಾಶಗಳು. ಕುಶಲ ಕರ್ಮಿಗಳಿಗೆ ಉದ್ಯೋಗಾವಕಾಶ. ಸಣ್ಣ ಉಳಿತಾಯ ಏಜೆಂಟರ ವ್ಯವಹಾರ ವೃದ್ಧಿ. ಗಣೇಶ ಕವಚ,ದಕ್ಷಿಣಾಮೂರ್ತಿ ಸ್ತೋತ್ರ, ಶನಿಸ್ತೋತ್ರ ಓದಿ.

12. ಮೀನ:
ಉದ್ಯೋಗ ಸ್ಥಾನದಲ್ಲಿ ಸಹಜ ವಾತಾವರಣ. ವ್ಯವಹಾರ ಕ್ಷೇತ್ರದಲ್ಲಿ ಸ್ವಾಭಾವಿಕ ಪೈಪೋಟಿ. ಸರಕಾರಿ ಕಾರ್ಯಾಲಯಗಳಲ್ಲಿ ವಿಳಂಬಿತ ಸ್ಪಂದನ. ಭವಿಷ್ಯದ ಯೋಜನೆಗಳ ಅನುಷ್ಠಾನಕ್ಕೆ ಪ್ರಯತ್ನ ಆರಂಭ. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ದೇವೀಸ್ತೋತ್ರ ಓದಿ.