ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Jan 31, 2025 - 05:32
ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

ದಿನ ಭವಿಷ್ಯ
              ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ 4

1.ಮೇಷ:
ಸಂದಿಗ್ಧ ಪರಿಸ್ಥಿತಿ ಬಂದಾಗ ಸಮಯ ಪ್ರಜ್ಞೆ ಮೇಲುಗೈ ಸಾಧಿಸಲಿ. ಉದ್ಯೋಗದಲ್ಲಿ ಜವಾಬ್ದಾರಿಗಳ ಬದಲಾವಣೆ. ಸರಕಾರಿ ಉದ್ಯೋಗಸ್ಥರಿಗೆ ಒಂದು ಬಗೆಯ ಕಳವಳ. ಸಣ್ಣ ಉದ್ಯಮಿಗಳ ಸಮಸ್ಯೆಗಳು ಪರಿಹಾರ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಗಣೇಶ ಕವಚ, ಆದಿತ್ಯ ಹೃದಯ, ಗುರುಸ್ತೋತ್ರ ಓದಿ.


2.ವೃಷಭ:
ದಿನದಿಂದ ದಿನಕ್ಕೆ ವ್ಯತ್ಯಾಸವಾಗುವ ಪರಿಸ್ಥಿತಿ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳ ಶೋಧನೆ. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಲಾಭ. ವೃತ್ತಿಪರಿಣತರಿಗೆ ಉದ್ಯೋಗಾವಕಾಶ. ಕುಟುಂಬದಲ್ಲಿ ಸಾಮರಸ್ಯ ವೃದ್ಧಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

3.ಮಿಥುನ:
ಮನೋಬಲ ವೃದ್ಧಿಯಿಂದ ಅನುಕೂಲ ಪರಿಸ್ಥಿತಿ‌ ಹೊಸದಾಗಿ ಸೇರ್ಪಡೆಗೊಂಡವರ ತರಬೇತಿಯ ಹೊಣೆ. ಸರಕಾರಿ ನೌಕರರಿಗೆ ಕೊಂಚ ಆತಂಕ. ಮಿತ್ರರೊಂದಿಗೆ ಅನವಶ್ಯ ವೈಮನಸ್ಯದ ಸಾಧ್ಯತೆ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ. ಗಣೇಶ ದ್ವಾದಶನಾಮ ಸ್ತೋತ್ರ, ದೇವೀಕವಚ, ನವಗ್ರಹ ಮಂಗಲಾಷ್ಟಕ ಓದಿ.


4. ಕರ್ಕಾಟಕ:
ಪ್ರಾಮಾಣಿಕತೆ, ದಕ್ಷತೆಗಳೇ ಕೀರ್ತಿ ತರುವ ಸಾಧನಗಳು. ಉದ್ಯೋಗಸ್ಥರಿಗೆ  ತಕ್ಕಮಟ್ಟಿಗೆ ಅನುಕೂಲದ ಸನ್ನಿವೇಶ. ಉದ್ಯಮಗಳಿಗೆ ಸರಕಾರಿ ನೆರವು ಲಭ್ಯ. ನಿಸ್ವಾರ್ಥಿ ಜನಸೇವಕರ ಹೆಸರು ಕೆಡಿಸುವ ಹುನ್ನಾರ ವಿಫಲ. ಮಹಿಳೆಯರ ಸ್ವೋದ್ಯೋಗ ಯೋಜನೆ  ಉತ್ಪನ್ನಗಳಿಗೆ ಕೀರ್ತಿ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.


5.ಸಿಂಹ:
ಧೈರ್ಯ, ಸಾಹಸಗಳೇ ನಿಮ್ಮ ಸಾಧನಗಳು. ಉದ್ಯೋಗಸ್ಥರಿಗೆ ಆರ್ಥಿಕ ಲಾಭ ನೀಡದ ಪದೋನ್ನತಿ. ಉದ್ಯಮಕ್ಕೆ ಹೊಸರೂಪದೊಂದಿಗೆ ಕಾಯಕಲ್ಪ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ‌. ವಾಹನ ಚಾಲನೆಯಲ್ಲಿ ಎಚ್ಚರ. ಗಣೇಶ ಕವಚ, ನರಸಿಂಹ ಕವಚ, ಮಹಾಲಕ್ಷ್ಮಿ ಅಷ್ಟಕ ಓದಿ.

6. ಕನ್ಯಾ:
ವ್ಯವಹಾರ, ಉದ್ಯೋಗ ಎರಡಲ್ಲೂ ಸ್ಥೈರ್ಯ ವರ್ಧನೆ. ಸಂಸ್ಥೆಯ ಪ್ರಮುಖರಿಂದ ನೌಕರರಿಗೆ ಪುರಸ್ಕಾರ. ಹಿರಿಯರ ಆಸ್ತಿಯಲ್ಲಿ ಕೃಷಿಕಾರ್ಯ ವಿಸ್ತರಣೆ. ಹಳೆಯ ವಿದ್ಯಾಲಯ ಅಭಿವೃದ್ಧಿಯ ನೇತೃತ್ವ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ  ಭರವಸೆ. ಗಣಪತಿ ಅಥರ್ವಶೀರ್ಷ, ಮಹಾಲಕ್ಷ್ಮಿ ಅಷ್ಟಕ, ಸೂರ್ಯಮಂಡಲ ಸ್ತೋತ್ರ ಓದಿ.


7.ತುಲಾ:
ಉದ್ಯೋಗಸ್ಥರಿಗೆ ಮುಂದುವರಿದ ಹಿತಶತ್ರುಗಳ ಕಾಟ. ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ಶಮನ. ವಧೂವರಾನ್ವೇಷಣೆಯಲ್ಲಿ ಪ್ರಗತಿ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ‌. ಗಣೇಶ ಸ್ತೋತ್ರ, ದತ್ತಾತ್ರೇಯ ಕವಚ,ಸುಬ್ರಹ್ಮಣ್ಯ ಸ್ತೋತ್ರ ಓದಿ.

8.ವೃಶ್ಚಿಕ:
ದೈವಬಲ, ಧನಬಲದ ಜೊತೆಗೆ ಮನೋಬಲವೂ ವೃದ್ಧಿ. ಉದ್ಯೋಗಸ್ಥರ ಸ್ಥಾನ ಗೌರವ ಭದ್ರ. ಸರಕಾರಿ ಅಧಿಕಾರಿಗಳಿಗೆ ನಿಶ್ಚಿಂತೆ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಸಂಸಾರದ ಕ್ಷೇಮಕ್ಕಾಗಿ ದೇವತಾರಾಧನೆ. ಗಣೇಶ ಪಂಚರತ್ನ, ದೇವೀಕವಚ, ನವಗ್ರಹ ಸ್ತೋತ್ರ ಓದಿ.

9.ಧನು:
ಆತ್ಮವಿಶ್ವಾಸದೊಂದಿಗೆ ದೈವವಿಶ್ವಾಸವನ್ನೂ ಬೆಳೆಸಿಕೊಳ್ಳುವ ಪ್ರಯತ್ನ. ಉದ್ಯಮದ ವೈವಿಧ್ಯೀಕರಣ ಯೋಜನೆ ಸಫಲ. ಹಿರಿಯ ನಾಗರಿಕರಿಗೆ ಸರಕಾರಿ ಸವಲತ್ತುಗಳು ಲಭ್ಯ. ಮಕ್ಕಳ ಪ್ರತಿಭೆ ವಿಕಸನಕ್ಕೆ  ಪ್ರೋತ್ಸಾಹ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ. ಗಣೇಶ ಅಷ್ಟಕ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


10. ಮಕರ:
ಕಾಲಚಕ್ರ ಉರುಳಿದಂತೆ ಕಷ್ಟ, ಸುಖಗಳ ಅನುಭವ. ಉದ್ಯೋಗಸ್ಥರಿಗೆ ಸತ್ವಪರೀಕ್ಷೆಯಲ್ಲಿ ವಿಜಯ. ಹಿತಶತ್ರುಗಳ ಮಸಲತ್ತಿಗೆ ಸೋಲು. ನಷ್ಟದಿಂದ ಚೇತರಿಸಲು ಉದ್ಯಮಿಗಳ ಪ್ರಯತ್ನ. ಕರಕುಶಲ ಸಾಮಗ್ರಿ ಉದ್ಯಮಿಗಳಿಗೆ ಅನುಕೂಲದ ವಾತಾವರಣ.ಗಣೇಶ ಕವಚ, ಹನುಮಾನ್ ಚಾಲೀಸಾ, ಶನಿಸ್ತೋತ್ರ ಓದಿ.

11.ಕುಂಭ:
ನಿರಂತರ ಶ್ರಮ, ದೈವಾನುಗ್ರಹದಿಂದ ಅನುಕೂಲ. ಕೆಲಸ, ಕಾರ್ಯಗಳಲ್ಲಿ ಮುನ್ನಡೆ. ಉದ್ಯೋಗಸ್ಥರಿಗೆ ಅನುಕೂಲ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭ. ಸಾಹಿತ್ಯ, ಕಲೋಪಾಸನೆಯಲ್ಲಿ ಆಸಕ್ತರಿಗೆ ಹರ್ಷ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಶನಿಸ್ತೋತ್ರ ಓದಿ.

12. ಮೀನ:
ವಾತಾವರಣ ಮಧ್ಯಮವಾಗಿದ್ದರೂ, ಕಾರ್ಯದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಸೇವಾ ರೂಪದ ಕಾರ್ಯಗಳು  ಯಶಸ್ವಿ. ಜನಹಿತ ಕಾರ್ಯಗಳಲ್ಲಿ ಸಕ್ರಿಯ ಪಾತ್ರ. ಗೃಹೋಪಯೋಗಿ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ. ಗಣೇಶ ಕವಚ, ದತ್ತಪಂಜರ ಸ್ತೋತ್ರ, ಶನಿಸ್ತೋತ್ರ ಓದಿ.