ದಿನ ಭವಿಷ್ಯ
14-09-2025

ಅದೃಷ್ಟ ಸಂಖ್ಯೆ 5
೧. ಮೇಷ:
ಶನಿಪ್ರಭಾವವಿದ್ದರೂ ಗೃಹದಲ್ಲಿ ಶಾಂತಿ. ಉದ್ಯೋಗಸ್ಥರಿಗೆ ಸಹವರ್ತಿಗಳಿಂದ ಸಕಾಲಿಕ ನೆರವು. ವ್ಯವಹಾರಸ್ಥರಿಗೆ ಕ್ಷಿಪ್ರವಾಗಿ ದೈವಾನುಗ್ರಹ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಹರ್ಷದ ಸನ್ನಿವೇಶ. ಆಸ್ಪತ್ರೆ, ವೃದ್ಧಾಶ್ರಮಗಳಿಗೆ ಭೇಟಿ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಶನಿ ಮಹಾತ್ಮೆ ಓದಿ.
೨. ವೃಷಭ:
ಜನೋಪಯೋಗಿ ಯೋಜನೆಗಳ ಅನುಷ್ಠಾನ ಆರಂಭ. ದೀರ್ಘಾವಧಿ ಹೂಡಿಕೆಗಳಲ್ಲಿ ವಿಶೇಷ ಆಸಕ್ತಿ. ಹಿರಿಯರ ಮನೆಯಲ್ಲಿ ಪಿತೃಕಾರ್ಯ. ಉಳಿತಾಯ ಯೋಜನೆಗಳ ಏಜೆಂಟರಿಗೆ ಒಳ್ಳೆಯ ದಿನ. ಮಕ್ಕಳಿಗೆ ಏಕಾಗ್ರತೆ ಸಾಧಿಸಲು ಪ್ರೋತ್ಸಾಹ. ಗಣಪತಿ ಅಥರ್ವಶೀರ್ಷ, ಗಜೇಂದ್ರಮೋಕ್ಷ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೩ಮಿಥುನ:
ದೈವಚಿಂತನೆಯಿಂದ ಮನೋಬಲ ವೃದ್ಧಿ. ಮನೆವಾರ್ತೆ ನಿರ್ವಹಣೆಯಲ್ಲಿ ಹೆಚ್ಚಿನ ಜವಾಬ್ದಾರಿ. ಕರಕುಶಲ ಸಾಮಗ್ರಿಗಳ ನಿರ್ಮಾಪಕರಿಗೆ ಏಳಿಗೆಯ ಕಾಲ. ಗೃಹಿಣಿಯರಿಗೆ ಸ್ವಂತ ಆದಾಯ ಗಳಿಕೆಯಲ್ಲಿ ಆಸಕ್ತಿ. ಪರಿಸರದ ಏರುಪೇರುಗಳನ್ನು ಗಮನಿಸುತ್ತಿರಿ. ಗಣೇಶ ಪಂಚರತ್ನ, ವೇದಸಾರ ಶಿವಸ್ತೋತ್ರ, ಆದಿತ್ಯ ಹೃದಯ ಓದಿ.
೪. ಕರ್ಕಾಟಕ:
ಉಳಿತಾಯ ಯೋಜನೆಗಳಲ್ಲಿ ಹೂಡಿಕೆ. ಕಟ್ಟಡ ನಿರ್ಮಾಣ, ಆಸ್ತಿ ಖರೀದಿ- ಮಾರಾಟ ವ್ಯವಹಾರ ನಿಧಾನ ಪ್ರಗತಿ. ವೈದ್ಯರ ಕೀರ್ತಿ ವರ್ಧನೆ.ಉದ್ಯೋಗ ಅರಸುತ್ತಿರುವವರಿಗೆ ಸದವಕಾಶ. ಪಶ್ಚಿಮ ದಿಕ್ಕಿನಿಂದ ಶುಭಸಮಾಚಾರ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಆಂಜನೇಯ ಸ್ತೋತ್ರ ಓದಿ.
೫.ಸಿಂಹ:
ಉದ್ಯೋಗ, ವ್ಯವಹಾರಗಳ ಬಾಧೆ ನಿವಾರಣೆ. ಪಾರದರ್ಶಕ ನಡೆಯಿಂದ ವಿಶ್ವಾಸ ವೃದ್ಧಿ. ವ್ಯವಹಾರ ಕ್ಷೇತ್ರ ವಿಸ್ತರಣೆಯ ಕುರಿತು ವಿಮರ್ಶೆ. ಮಕ್ಕಳಿಗೆ ವ್ಯಾಸಂಗ, ಮನೋರಂಜನೆ ಎರಡರಲ್ಲೂ ಆಸಕ್ತಿ. ಸಂಜೆ ಊರಿನ ದೇವಾಲಯಕ್ಕೆ ಭೇಟಿ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೬. ಕನ್ಯಾ:
ಮನೋರಂಜನೆ ಕೇಂದ್ರಿತ ಉದ್ಯಮಗಳಿಗೆ ಪ್ರಗತಿ. ಕ್ರೀಡಾ ಸಾಮಗ್ರಿ ಉತ್ಪಾದಕರಿಗೆ ಆರ್ಥಿಕ ಲಾಭ. ಸಂಗೀತ, ಹರಿಕಥಾ ಶ್ರವಣಕ್ಕೆ ಸಮಯ ಮೀಸಲು. ಗೃಹೋಪಕರಣಗಳ ಖರೀದಿಗೆ ಧನವ್ಯಯ. ವ್ಯವಹಾರ ಸಂಬಂಧ ಉತ್ತರಕ್ಕೆ ಪ್ರಯಾಣ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
೭. ತುಲಾ:
ಪಿತೃಕಾರ್ಯದಲ್ಲಿ ಭಾಗಿಯಾಗಿ ಆನಂದ. ಬಂಧುವರ್ಗದವರೊಡನೆ ದೇವಾಲಯ ದರ್ಶನ. ಲೇವಾದೇವಿ ವ್ಯವಹಾರಸ್ಥರಿಗೆ ಹಿನ್ನಡೆ. ವೈದ್ಯರೊಂದಿಗೆ ಸಮಾಲೋಚನೆಯಿಂದ ಸಂಶಯ ನಿವಾರಣೆ. ಭಾಷಾ ಜ್ಞಾನ ವೃದ್ಧಿಗೆ ವಿಶೇಷ ಸಾಧನೆ. ಗಣೇಶ ದ್ವಾದಶನಾಮ ಸ್ತೋತ್ರ, ವೆಂಕಟೇಶ್ವರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೮.ವೃಶ್ಚಿಕ:
ಅರ್ಹರಿಗೆ ಉಪಕಾರ ಮಾಡುವ ಅವಕಾಶ ಪ್ರಾಪ್ತಿ. ಮಕ್ಕಳ ಹೊಸ ಉದ್ಯಮ ಮುನ್ನಡೆ. ವಸ್ತ್ರ ಆಭರಣ, ಶೋಕಿ ಸಾಮಗ್ರಿ ವ್ಯಾಪಾರಿಗಳ ಆದಾಯ ವೃದ್ಧಿ. ಕರಕುಶಲ ಸಾಮಗ್ರಿ ತಯಾರಕರಿಗೆ ಉದ್ಯೋಗಾವಕಾಶ. ವಿದೇಶದಲ್ಲಿರುವ ಬಂಧುಗಳ ಭೇಟಿ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೯ ಧನು:
ಸಂಗಾತಿಯ ಆರೋಗ್ಯದಲ್ಲಿ ತೊಂದರೆ. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ವೀಕ್ಷಣೆ. ಬಂಧುಗಳ ಮನೆಯ ಪಿತೃಕಾರ್ಯದಲ್ಲಿ ಭಾಗಿ.ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆಗೆ ಪ್ರಾಶಸ್ತ್ಯ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಅನುಕೂಲ. ಗಣೇಶ ಕವಚ, ಕಾರ್ತಿಕೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೧೦.ಮಕರ:
ನಿಗದಿತ ಸಮಯದಲ್ಲಿ ಕೆಲಸ ಮುಗಿಸಿದ ಸಮಾಧಾನ. ಮಕ್ಕಳ ಶೈಕ್ಷಣಿಕ ಪ್ರಗತಿಯ ಚಿಂತೆ. ಸಿವಿಲ್ ಎಂಜಿನಿಯರರು, ಕಂಟ್ರಾಕ್ಟರುಗಳಿಗೆ ಹೊಸ ಕೆಲಸಕ್ಕೆ ಆಹ್ವಾನ. ಲೇವಾದೇವಿ ವ್ಯವಹಾರದಲ್ಲಿ ಕಿಂಚಿತ್ ಲಾಭ. ಬ್ಯೂಟಿ ಪಾರ್ಲರ್ ನಿರ್ವಾಹಕರಿಗೆ ಲಾಭ ವೃದ್ಧಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:
ನಿತ್ಯದ ವ್ಯವಹಾರಗಳಲ್ಲಿ ಕೊಂಚ ಕಿರಿಕಿರಿ. ಉದ್ಯೋಗಸ್ಥರಿಗೆ ಹಿತಶತ್ರುಗಳಿಂದ ತೊಂದರೆ. ಸಾಮಾಜಿಕ ಕ್ಷೇತ್ರದಲ್ಲಿ ಶುಭಸೂಚನೆಯ ವಿದ್ಯಮಾನಗಳು. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಬೇಡಿಕೆ ಹೆಚ್ಚಳ. ಪಿತೃಕಾರ್ಯದಲ್ಲಿ ಪಾಲುಗೊಳ್ಳುವ ಅವಕಾಶ. ಸಂಕಷ್ಟನಾಶನ ಗಣೇಶ ಸ್ತೋತ್ರ, ದಾರಿದ್ರ್ಯ ದಹನ ಶಿವಸ್ತೋತ್ರ, ಶನಿ ಮಹಾತ್ಮೆ ಓದಿ.
೧೨. ಮೀನ:
ದಿನನಿತ್ಯದ ವ್ಯವಹಾರಗಳಲ್ಲಿ ಯಶಸ್ಸು. ಹಣಕಾಸು ವ್ಯವಹಾರ ನಡೆಸುವವರಿಗೆ ಕೊಂಚ ಹಿನ್ನಡೆ. ಕೃಷ್ಯುತ್ಪನ್ನ ಮಾರಾಟದಿಂದ ಮಧ್ಯಮ ಲಾಭ. ಸಾಮಾಜಿಕ ರಂಗದಲ್ಲಿ ಗೌರವ ವೃದ್ಧಿ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿಯಿಂದ ನೆಮ್ಮದಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.