ದಿನ ಭವಿಷ್ಯ

17-09-2025

Sep 17, 2025 - 16:19
ದಿನ ಭವಿಷ್ಯ


     ‌    ‌‌‌   ‌ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ 8

೧. ಮೇಷ:


ವ್ಯವಹಾರ ಜ್ಞಾನದ ವೃದ್ಧಿಗೆ ಅನುಕೂಲದ ಸನ್ನಿವೇಶ. ಉದ್ಯೋಗದಲ್ಲಿ ವಿಭಾಗ ಬದಲಾವಣೆ.  ಸರಕಾರಿ ಉದ್ಯೋಗಸ್ಥರ ಸ್ಥಿತಿಗತಿಗಳಲ್ಲಿ ವ್ಯತ್ಯಾಸ ಇಲ್ಲ. ಸಣ್ಣ ಉದ್ಯಮಿಗಳಿಗೆ ಹೊಸ ಸಮಸ್ಯೆಗಳು. ಪಿತೃಕಾರ್ಯದಲ್ಲಿ ಭಾಗಿಯಾಗುವ ಅವಕಾಶ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಗಣೇಶ ಸ್ತೋತ್ರ, ಆದಿತ್ಯ ಹೃದಯ, ಶನಿಮಹಾತ್ಮೆ  ಓದಿ.


೨.ವೃಷಭ:

   ಯೋಜನೆಗಳ  ಅನುಷ್ಠಾನಕ್ಕೆ ಸಕ್ರಿಯ ಸಹಕಾರ.ಉದ್ಯೋಗಸ್ಥರೆದುರು . ವಿಶಿಷ್ಟ ಅವಕಾಶಗಳು. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಲಾಭ.  ವೃತ್ತಿಪರಿಣತರಿಗೆ  ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಾವಕಾಶ. ಕುಟುಂಬದಲ್ಲಿ ಸಾಮರಸ್ಯ ವೃದ್ಧಿ. ಸಂಸಾರದಲ್ಲಿ ಸಾಮರಸ್ಯ, ಪ್ರೀತಿ ವೃದ್ಧಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

೩.ಮಿಥುನ:
  ಹಳೆಯ ಯೋಜನೆಗಳ  ಪುನಶ್ಚೇತನಕ್ಕೆ  ಪ್ರಯತ್ನ. ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ. ಅನವಶ್ಯ ವೈಮನಸ್ಯಕ್ಕೆ  ಎಡೆಗೊಡದಿರಿ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ.  ರಾತ್ರಿ ಪ್ರಯಾಣ ಮಾಡದಿರಿ. ಸಂಸಾರದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.ಗಣೇಶ ಅಷ್ಟಕ,, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


೪. ಕರ್ಕಾಟಕ:

 ಉದ್ಯೋಗಸ್ಥರಿಗೆ  ವೇತನ ಏರಿಕೆಯಲ್ಲಿ ವಿಳಂಬ. ಉದ್ಯಮಗಳಿಗೆ ಸರಕಾರಿ ಸಬ್ಸಿಡಿ ಕೈಸೇರಲು  ಮಧ್ಯವರ್ತಿಗಳ ಅಡ್ಡಿ. ಸರಕಾರಿ   ಸೌಲಭ್ಯಗಳ ಸುಧಾರಣೆಗೆ ವಿಘ್ನ..ಮಹಿಳೆಯರ ಸ್ವೋದ್ಯೋಗ ಯೋಜನೆ  ಉತ್ಪನ್ನಗಳಿಗೆ ಕೀರ್ತಿ.ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೫.ಸಿಂಹ:

ಕಾರ್ಯರಂಗದಲ್ಲಿ ತಡೆಯಿಲ್ಲದೆ ಸಾಗುವ ಪ್ರಯತ್ನ.  ಏಕಕಾಲದಲ್ಲಿ ಹಲವು ವ್ಯವಹಾರಗಳತ್ತ  ಗಮನ ಹರಿಸಲು ಒತ್ತಡ.  ಉದ್ಯೋಗಸ್ಥರಿಗೆ ಮೇಲಿನವರಿಂದ ಕಿರಿಕಿರಿ. ಉದ್ಯಮ ‌ಪುನಶ್ಚೇತನ ಪ್ರಯತ್ನ ಮುಂದುವರಿಕೆ. ಪರಿಣತರ ಸಲಹೆಯಂತೆ ಹೊಸ ಕ್ರಮಗಳು.  ಕುಟುಂಬದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ, ನೆಮ್ಮದಿಯ ಅನುಭವ.ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ದೇವೀಸ್ತೋತ್ರ ಓದಿ.

.

೬. ಕನ್ಯಾ:

ಉದ್ಯೋಗಸ್ಥರಿಗೆ ಕಾರ್ಯ ನಿರ್ವಹಣೆಗೆ ಅನುಕೂಲದ ವಾತಾವರಣ. ಸಂಸ್ಥೆಯ ಪ್ರಮುಖರಿಂದ ನೌಕರರಿಗೆ ಪುರಸ್ಕಾರ. ಕೃಷಿ ಭೂಮಿಯಲ್ಲಿ ಪ್ರಗತಿ ವೀಕ್ಷಣೆ.ಹಿರಿಯರ ಮನೆಗೆ ಭೇಟಿ ಸಂಭವ.   ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಗುರುಸ್ತೋತ್ರ ಓದಿ.


೭.ತುಲಾ:

 ಮರಳಿ ಪ್ರಾಪ್ತವಾದ ಶಾರೀರಿಕ  ಆರೋಗ್ಯ. ಉದ್ಯೋಗಸ್ಥರ ಪಾಲಿಗೆ ನಿಲ್ಲದ ಹಿತಶತ್ರುಗಳ ಕಾಟ.  ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ಶಮನ. ಉದ್ಯೋಗ ಅರಸುವವರಿಗೆ  ಆಶಾದಾಯಕ ವಾತಾವರಣ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಮಕ್ಕಳ ಪರೀಕ್ಷಾ ಸಿದ್ಧತೆಯತ್ತ ಗಮನ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ದೇವೀಕವಚ ಓದಿ.

೮. ವೃಶ್ಚಿಕ:

ಸದ್ಯೋಭವಿಷ್ಯದಲ್ಲಿ ಯಾವುದೇ ಹಾನಿಯಾಗದು. ಉದ್ಯೋಗಸ್ಥರ ಸ್ಥಾನ ಗೌರವ ಭದ್ರ. ಸರಕಾರಿ ಅಧಿಕಾರಿಗಳಿಗೆ ನಿಶ್ಚಿಂತೆ. ರಾಜಕಾರಣಿಗಳ ಹೆಸರು ಕೆಡಿಸುವ ಪ್ರಯತ್ನ ವಿಫಲ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಸಂಸಾರದಲ್ಲಿ ವಿರಸ ಬೆಳೆಸುವ ಪ್ರಯತ್ನ ವಿಫಲ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.

೯. ಧನು:

  ವ್ಯಕ್ತಿತ್ವ ವಿಕಸನಕ್ಕೆ ಪೂರಕ ವಾತಾವರಣ. ಪಟ್ಟು ಬಿಡದ ಪ್ರಯತ್ನದಿಂದ ಘಟಕದ ಕಾರ್ಯ ಸುಧಾರಣೆ. ಉದ್ಯಮದ ವೈವಿಧ್ಯೀಕರಣ ಯೋಜನೆ ಅನುಷ್ಠಾನಕ್ಕೆ ವಿಘ್ನ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ. ಮಕ್ಕಳ ಅಧ್ಯಯನಾಸಕ್ತಿ ಹಾಗೂ ಪ್ರತಿಭೆ ವಿಕಸನಕ್ಕೆ  ಪ್ರೋತ್ಸಾಹ. ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಪಂಚರತ್ನ, ಮಹಿಷಮರ್ದಿನಿ ಸ್ತೋತ್ರ,   ದೇವೀಸ್ತೋತ್ರ ಓದಿ.


೧೦. ಮಕರ:


 ಉದ್ಯೋಗಸ್ಥರ ಕಾರ್ಯಸಾಮರ್ಥ್ಯಕ್ಕೆ ಹೊಸ ಸವಾಲುಗಳು. ಉದ್ಯಮಿಗಳಿಗೆ ಹಠಾತ್ ನಷ್ಟವಾಗುವ ಭೀತಿ. ಯಂತ್ರೋಪಕರಣ ಉದ್ಯಮಿಗಳಿಗೆ ದೊಡ್ಡ ಮೊತ್ತದ ಲಾಭ. ಕುಟುಂಬದ ಮನೆಯಲ್ಲಿ ಪಿತೃಕಾರ್ಯ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೧೧.ಕುಂಭ:

ಸಪ್ತಾಹ ಮುಂದುವರಿಯುತ್ತಿದ್ದಂತೆ ಸರಾಗವಾಗಿ  ಸಾಗುವ  ಕೆಲಸ, ಕಾರ್ಯಗಳು. ಉದ್ಯೋಗಸ್ಥರಿಗೆ ಹಿತಕರವಾದ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭ. ಸಾಹಿತ್ಯ, ಸಂಗೀತ, ನೃತ್ಯಾದಿ ಲಲಿತ ಕಲೆಗಳಲ್ಲಿ ಆಸಕ್ತರಿಗೆ ಹರ್ಷ. ಕೃಷ್ಯುತ್ಪಾದನೆ ವೃದ್ಧಿಯಲ್ಲಿ ಯಶಸ್ಸು.ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಶನಿಮಹಾತ್ಮೆ ಓದಿ.


೧೨. ಮೀನ:

ಅಷ್ಟೊಂದು ಪ್ರೋತ್ಸಾಹಕ ವಾತಾವರಣ ಇಲ್ಲವಾದರೂ  ಕಾರ್ಯದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಸೇವಾ ರೂಪದ ಕಾರ್ಯಗಳು  ಯಶಸ್ವಿ. ನಿಲ್ಲಿಸಿದ್ದ ಉದ್ಯಮ ಮತ್ತೆ ಪ್ರಾರಂಭ. ಪರಿಸರ ಸುಧಾರಣೆಯ ಸಾಮೂಹಿಕ ಕಾರ್ಯಗಳಲ್ಲಿ ಸಕ್ರಿಯ ಪಾತ್ರ..ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ,ಶನಿಮಹಾತ್ಮೆ ಓದಿ.