ದಿನ ಭವಿಷ್ಯ

18-09-2025

Sep 18, 2025 - 16:18
ದಿನ ಭವಿಷ್ಯ


                  ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ  9


೧. ಮೇಷ:
  ಶನಿಯ ಪ್ರಭಾವದಿಂದ ಕೊಂಚ ಬೇಗುದಿ. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಕೆಲಸದ  ಒತ್ತಡ.  ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಸಾಮಾನ್ಯ ಲಾಭ. ಅಧ್ಯಾಪಕ ವೃಂದಕ್ಕೆ ಹೆಚ್ಚು ಒತ್ತಡ. ಗಣೇಶ ಕವಚ, ಶಿವಸಹಸ್ರನಾಮ, ಶನಿಮಹಾತ್ಮೆಓದಿ.


೨.ವೃಷಭ:
  ಚಂಚಲವಾಗಿರುವ ಮಾನಸಿಕ ಸ್ಥಿತಿ. ಸಹಕಾರಿ ಕ್ಷೇತ್ರದವರಿಗೆ ಜವಾಬ್ದಾರಿ ಹೆಚ್ಚಳ. ಮುದ್ರಣ ವ್ಯವಹಾರಸ್ಥರಿಗೆ ಸಮಯದೊಂದಿಗೆ ಸ್ಪರ್ಧೆ. ಗೃಹಿಣಿಯರ ಸ್ವಾವಲಂಬನೆ  ಯೋಜನೆಗಳ ಮುನ್ನಡೆ. ಆಪತ್ತಿನಲ್ಲಿ ಸಿಲುಕಿರುವವರಿಗೆ ಸಹಾಯ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಓದಿ.


೩ಮಿಥುನ:

 ನೇರ ನಡೆನುಡಿಯವರಿಗೆ ಸತ್ವಪರೀಕ್ಷೆ. ಕೃಷಿ ಸಾಧನಗಳು, ಕೃಷ್ಯುತ್ನನ್ನಗಳು, ರಸಗೊಬ್ಬರಗಳು ಇತ್ಯಾದಿಗಳ  ವಿತರಕರಿಗೆ ಲಾಭ. ಉಳಿತಾಯ ಯೋಜನೆ ಏಜೆಂಟರಿಗೆ ಶುಭದಿನ. ಸಂಜೆ ಶಿವಾಲಯಕ್ಕೆ ಭೇಟಿ. ಎಲ್ಲರ ಆರೋಗ್ಯ ಉತ್ತಮ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ಸುಬ್ರಹ್ಮಣ್ಯ ಕವಚ ಓದಿ.

೪.ಕರ್ಕಾಟಕ:

 ಮನಸ್ಸು ಗಟ್ಟಿಯಾದಷ್ಟೂ ಆರೋಗ್ಯಕ್ಕೆ ಕ್ಷೇಮ. ಉದ್ಯೋಗ ಕ್ಷೇತ್ರದಲ್ಲಿ‌  ಸ್ಥಿರ ವಾತಾವರಣ. ತಾಂತ್ರಿಕ ವಿಭಾಗಗಳಲ್ಲಿ ದುಡಿಯುವವರಿಗೆ  ಕೆಲಸದ ಒತ್ತಡ ಸ್ವಂತ ವ್ಯವಹಾರಸ್ಥರಿಗೆ ಸಮಯದೊಂದಿಗೆ ಸೆಣಸಾಟ.  ಪಿತೃಕಾರ್ಯದಲ್ಲಿ ಭಾಗಿಯಾಗಿ ಮನಶ್ಶಾಂತಿ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೫.ಸಿಂಹ:

 ಕಾರ್ಯ ಸಾಧನೆಗಾಗಿ ಸರ್ವತ್ರ ಶ್ಲಾಘನೆ. ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಮುನ್ನಡೆ. ಸಮಾಜದಲ್ಲಿ ಸ್ಥಾನಮಾನ ವೃದ್ಧಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಸಂಸಾರ ಸುಖ ಉತ್ತಮ. ಉದ್ಯೋಗಾಸಕ್ತರಿಗೆ ತಾಳ್ಮೆ ಅವಶ್ಯ. ಸಂಕಷ್ಟನಾಶನ ಗಣೇಶ ಸ್ತೋತ್ರ, ನರಸಿಂಹ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.


 


೬.ಕನ್ಯಾ:

ಆಪ್ತರಿಂದ ನಿರೀಕ್ಷಿತ ಸಹಾಯ ಪ್ರಾಪ್ತಿ. ದೇವಾಲಯದ ಉತ್ಸವದಲ್ಲಿ ಭಾಗಿ. ಅಪರೂಪದ ಗೆಳೆಯರ ಆಗಮನ. ವಿದೇಶದಿಂದ ಶುಭ ವಾರ್ತೆ. ದುಷ್ಟರ ಅಟ್ಟಹಾಸ ಭಂಗ. ಗಣೇಶ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


೭. ತುಲಾ:

   ಜವಾಬ್ದಾರಿ ನಿರ್ವಹಣೆಯಲ್ಲಿ ಯಶಸ್ವಿ.  ಸ್ವಂತ ವ್ಯವಹಾರಸ್ಥರಿಗೆ ಕೀರ್ತಿ. ಮಹಾಪುರುಷರ ದರ್ಶನ ಯೋಗ. ಪರಿಸರ ಅಭಿವೃದ್ಧಿಯಲ್ಲಿ ಆಸಕ್ತಿ.ಅಪರೂಪದ ಬಂಧುಗಳ ಭೇಟಿ. ಪರಿಚಿತರಿಂದ ಪಾಲುದಾರಿಕೆ ವ್ಯವಹಾರ ಪ್ರಸ್ತಾವ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ  ಓದಿ.

೮.ವೃಶ್ಚಿಕ:
  ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಅನುಕೂಲ. ಕೆಲವು ವರ್ಗದ  ವ್ಯಾಪಾರಿಗಳಿಗೆ  ಲಾಭ. ಪೀಠೋಪಕರಣ ನಿರ್ಮಾಪಕರಿಗೆ  ಉತ್ತಮ ಬೇಡಿಕೆ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ.  ಪಿತೃಕಾರ್ಯದಲ್ಲಿ ಭಾಗಿಯಾಗುವ  ಅವಕಾಶ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಮಹಾಲಕ್ಷ್ಮಿ ಅಷ್ಟಕ ಓದಿ.

೯.ಧನು:

ಸಂಗಾತಿಯ ಅನಾರೋಗ್ಯ ನಿವಾರಣೆ. ಪೀಠೋಪಕರಣ ತಯಾರಿ, ಉಡುಪು ತಯಾರಿ ಕಸಬುದಾರರಿಗೆ  ಕೈತುಂಬಾ ಕೆಲಸ. ಬೌದ್ಧಿಕ ಕಾರ್ಯಗಳಲ್ಲಿ ತೊಡಗಿರುವವರ ಮೇಲೆ  ಒತ್ತಡ. ಮನೆಯಲ್ಲಿ ನೆಮ್ಮದಿಯ ವಾತಾವರಣ. ರಾಜಕಾರಣಿಗಳಿಗೆ ಅಪವಾದ ಬರುವ ಸಾಧ್ಯತೆ. ಗಣೇಶ ಪಂಚರತ್ನ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.


೧೦.ಮಕರ:

  ಸಾಮಾಜಿಕ ಕಾರ್ಯಗಳಲ್ಲಿ ಮುನ್ನಡೆ. ಸವಾಲಿನ ಕೆಲಸಗಳಲ್ಲಿ ಯಶಸ್ಸು. ಸಹಕಾರಿಗಳ ಸಕಾಲಿಕ ನೆರವು. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ರೂಪದರ್ಶಿಗಳ ವ್ಯವಹಾರದಲ್ಲಿ ಹಿನ್ನಡೆ. ದೀರ್ಘ ಕಾಲದ ಹೂಡಿಕೆಗಳಲ್ಲಿ ಲಾಭ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

 
೧೧. ಕುಂಭ:
  ಆಯ್ದ ಕ್ಷೇತ್ರಗಳಲ್ಲಿ ಸುಧಾರಣೆಯ ಪ್ರಕ್ರಿಯೆ. ಸರಕಾರಿ ನೌಕರರಿಗೆ  ವರ್ಗಾವಣೆಯ ಚಿಂತೆ. ಹಿರಿಯ ಅಧಿಕಾರಿಗಳಿಗೆ ರಾಜಕಾರಣಿಗಳ ಕಾಟ. ಮುದ್ರಣ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ ಮಧ್ಯಮ. ವ್ಯವಹಾರ ಸಂಬಂಧ ಹತ್ತಿರದ ಸ್ಥಳಕ್ಕೆ ಪ್ರಯಾಣ. ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ಶನಿಮಹಾತ್ಮೆ ಓದಿ.

೧೨. ಮೀನ:

  ಉದ್ಯೋಗಸ್ಥರಿಗೆ ನೆಮ್ಮದಿಯ ವಾತಾವರಣ. ವ್ಯವಹಾರಸ್ಥರಿಗೆ ಸಂಬಂಧಪಟ್ಟವರಿಂದ ಅನುಕೂಲದ ಸ್ಪಂದನ. ಕೆಲವು ವರ್ಗಗಳ ವ್ಯವಹಾರಸ್ಥರಿಗೆ ಅನಿರೀಕ್ಷಿತ  ಪ್ರಗತಿ. ಹಿರಿಯರ ಮನೆಯ ಪಿತೃಕಾರ್ಯದಲ್ಲಿ ಸಂಸಾರ ಸಹಿತ ಭಾಗಿ‌. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.