ದಿನ ಭವಿಷ್ಯ

12-10-2025

Oct 13, 2025 - 16:05
Oct 11, 2025 - 17:14
ದಿನ ಭವಿಷ್ಯ

ಅದೃಷ್ಟ ಸಂಖ್ಯೆ2

೧. ಮೇಷ:

 ವಿರಾಮದ ದಿನ  ಹಿನ್ನೋಟ ತಂದ ತೃಪ್ತಿ. ಸಾಂಸಾರಿಕ ರಂಗದಲ್ಲಿ ಬಹಳಷ್ಟು ಸಮಾಧಾನ. ಉದ್ಯಮಿಗಳಿಗೆ ಕೆಲವು ವಿಭಾಗಗಳಲ್ಲಿ ಅನಿರೀಕ್ಷಿತ ಲಾಭ‌. ದೇವತಾ ಕಾರ್ಯಗಳಲ್ಲಿ ಮಗ್ನತೆ.ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

     


೨. ವೃಷಭ:

   ಸರಕಾರಿ ಉದ್ಯೋಗಸ್ಶನಿಮಹಾಠಪ ಮುಂದುವರಿದ ಪೀಡೆ.  ಉದ್ಯಮಗಳ  ಬೆಳವಣಿಗೆ ಸ್ಥಿರ.  ವಸ್ತ್ರ,  ಸಿದ್ಧ ಉಡುಪುಗಳು ಹಾಗೂ ಪಾದರಕ್ಷೆ ವ್ಯಾಪಾರಿಗಳಿಗೆ  ನಿರೀಕ್ಷಿತ ಲಾಭ. ಎಲ್ಲರ ಆರೋಗ್ಯ ಉತ್ತಮ ಸಂಸಾರದಲ್ಲಿ, ಪ್ರೀತಿ, ವಿಶ್ವಾಸ , ಸಾಮರಸ್ಯವೃದ್ಧಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೩. ಮಿಥುನ:

  ಉದ್ಯೋಗದಲ್ಲಿ  ಪ್ರತಿಭೆಗೆ ತಕ್ಕ ಗೌರವ ಲಭಿಸಿದ ಸಮಾಧಾನ. ಕೃಷಿ ಕ್ಷೇತ್ರದಲ್ಲಿ ನೂತನ ಪ್ರಯೋಗಗಳು ಯಶಸ್ವಿ.   ಉದ್ಯಮಿಗಳಿಗೆ ಹಳೆಯ ಸಮಸ್ಯೆಗಳಿಂದ ಬಿಡುಗಡೆ. ಧಾರ್ಮಿಕ‌ ಸಾಹಿತ್ಯ ಅಧ್ಯಯನ. ಮನೆಯವರ ಆರೋಗ್ಯ ಉತ್ತಮ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಆದಿತ್ಯ ಹೃದಯ ಓದಿ.

೪. ಕರ್ಕಾಟಕ:


 ವಿಶೇಷ  ಪ್ರಯತ್ನದಿಂದ ವೃದ್ಧಿಯಾದ  ಕಾರ್ಯಸಾಮರ್ಥ್ಯ. ಒಡೆಯರು ಮತ್ತು ನೌಕರರ ನಡುವೆ ಸಾಮರಸ್ಯ ವೃದ್ಧಿ. ವಸ್ತ್ರ,, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ  ಪ್ರಮಾಣದಲ್ಲಿ ಲಾಭ. ಪ್ರಾಪ್ತ ವಯಸ್ಕರಿಗೆ ಕಂಕಣ ಭಾಗ್ಯದ ಭರವಸೆ. ವ್ಯವಹಾರದ ಸಂಬಂಧ  ಸಣ್ಣ ಪ್ರಯಾಣ ಸಂಭವ. ಸಂಕಷ್ಟನಾಶನ ಗಣೇಶ ಸ್ತೋತ್ರ, ನರಸಿಂಹ ಸ್ತೋತ್ರ, ನವಗ್ರಹ ಮಂಗಲಾಷ್ಟಕ‌ ಓದಿ.


೫. ಸಿಂಹ:

 ಹೊಸ ಖಾತೆ ನಿರ್ವಹಣೆಗೆ ಸಿದ್ಧತೆ. ಸರಕಾರಿ ನೌಕರರಿಗೆ ಸರಕಾರದಿಂದ‌ ಪೀಡನೆ. ಸ್ವೋದ್ಯೋಗಿ ಮಹಿಳೆಯರಿಗೆ  ಸರ್ವತೋಮುಖ ಯಶಸ್ಸು. ಕೃಷಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ‌. ಕುಟುಂಬದಲ್ಲಿ ಸರ್ವರಿಗೂ ಆರೋಗ್ಯ ವೃದ್ಧಿ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.


೬. ಕನ್ಯಾ:

  ಸಂಸಾರದ ಆವಶ್ಯಕತೆಗಳ ಕಡೆಗೆ ಗಮನ. ಸರಕಾರಿ ಅಧಿಕಾರಿಗಳಿಗೆ ಅನವಶ್ಯ ಕಿರಿಕಿರಿ. ಬಂಧುಗಳ ಮನೆಯಲ್ಲಿ ವಿಶೇಷ ದೇವತಾ ಕಾರ್ಯ. ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ. ಸಂಸಾರದಲ್ಲಿ. ಎಲ್ಲರ ಆರೋಗ್ಯ ಉತ್ತಮ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೭. ತುಲಾ:

 ದೇಹಕ್ಕೆ ಎರಗಿದ ಹಠಾತ್ ತೊಂದರೆಯಿಂದ ಮುಕ್ತಿ. ಹೊಸಬರಿಗೆ ಕೆಲಸದಲ್ಲಿಮಾರ್ಗದರ್ಶನ  ಮಾಡುವ ಅವಕಾಶ‌  ಪ್ರಾಪ್ತಿ. ವಿವಾಹಾಸಕ್ತರಿಗೆ ಸಮರ್ಪಕ‌ ಜೋಡಿ ಲಭಿಸುವ ಸಾಧ್ಯತೆ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ.  ಉಳಿದವರ ಆರೋಗ್ಯ ತಕ್ಕಮಟ್ಟಿಗೆ ಉತ್ತಮ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.


೮. ವೃಶ್ಚಿಕ:

  ಉದ್ಯೋಗ,ಉದ್ಯಮದಲ್ಲಿ ಸಾಧಿಸಿದ ಯಶಸ್ಸಿಗೆ ಪುರಸ್ಕಾರ.  ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಲಾಭ. ಲೇವಾದೇವಿ ಹಾಗೂ ಸಟ್ಟಾ ವ್ಯವಹಾರದಲ್ಲಿ ನಷ್ಟ. ಸಂಗೀತ ಶ್ರವಣಕ್ಕೆ ಸಮಯ ಹೊಂದಾಣಿಕೆ. ಹಿರಿಯರ,  ಗೃಹಿಣಿಯರ,ಮಕ್ಕಳ‌ ಆರೋಗ್ಯ ಉತ್ತಮ.‌ ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಆದಿತ್ಯ ಹೃದಯ ಓದಿ


೯. ಧನು:

 ಜೀವನಕ್ಕೆ‌ ಭದ್ರತೆ ಪ್ರಾಪ್ತಿಯಿಂದ ಸಮಾಧಾನ‌  ಉದ್ಯೋಗ ಸ್ಥಾನದಲ್ಲಿ ನಿಯೋಜಿತ ಕಾರ್ಯಗಳು ಸಕಾಲದಲ್ಲಿ ಮುಕ್ತಾಯ. ಕೃಷಿ ಕ್ಷೇತ್ರದಲ್ಲಿ ಹೊಸ ಬಗೆಯ ಬೆಳೆಗಳ ಪ್ರಯೋಗ ತೃಪ್ತಿಕರ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಆದಾಯ ಹೆಚ್ಚಳ. ಅಪರೂಪದ ಬಂಧುಗಳ ಆಗಮನ. ಗಣೇಶ ಕವಚ, ಶಿವ ಕವಚ, ನವಗ್ರಹ ಮಂಗಲಾಷ್ಟಕ ಓದಿ.


೧೦. ಮಕರ:

 ಎಣಿಸಿದ್ದಕ್ಕಿಂತ ಸುಲಭವಾಗಿ  ಕಾರ್ಯ ಮುಕ್ತಾಯ. ಉದ್ಯೋಗ ಸ್ಥಾನದಲ್ಲಿ ಮುಂದುವರಿದ ಒತ್ತಡ. ವೃತ್ತಿಪರರಿಗೆ‌ ನಿಗದಿತ ಸಮಯಕ್ಕೆ ಕಾರ್ಯ ಮುಗಿಸುವ ತರಾತುರಿ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಲಾಭ.  ವಿದ್ಯುತ್ ಸಾಧನಗಳ ದುರಸ್ತಿಯವರಿಗೆ ಒಳ್ಳೆಯ ಆದಾಯ. ಗಣೇಶ ಕವಚ, ದಾರಿದ್ರ್ಯದಹನ ಶಿವಸ್ತೋತ್ರ, ಹನುಮಾನ್ ಚಾಲೀಸಾ ಓದಿ


೧೧. ಕುಂಭ:

 ಉದ್ಯಮದ ಉತ್ಪನ್ನಗಳಿಗೆ ಹೆಚ್ಚಿದ. ಯಂತ್ರೋಪಕರಣಗಳ ಖರೀದಿ ಗೃಹೋತ್ಪನ್ನಗಳಿಗೆ  ಗ್ರಾಹಕರ‌ ಮೆಚ್ಚುಗೆ.  ಸಂಸಾರದಲ್ಲಿ ಎಲ್ಲರ‌ ನಡುವೆ ಪ್ರೀತಿ, ವಾತ್ಸಲ್ಯ, ಸಾಮರಸ್ಯ ವೃದ್ಧಿ. ವಿದೇಶವಾಸಿ ಬಂಧುಗಳಿಂದ ಶುಭ ಸಮಾಚಾರ. ಗಣೇಶ ಕವಚ, ಸುಬ್ರಹ್ಮಣ್ಯ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಶನಿಮಹಾತ್ಮೆ ಓದಿ.

೧೨. ಮೀನ
 ನಿಯೋಜಿತ ಕಾರ್ಯಗಳು  ಅವಧಿಗೆ ಮೊದಲೇ ಮುಕ್ತಾಯ.  ಸರಕಾರಿ ನೌಕರರಿಗೆ ಮೇಲಿನವರ ಒತ್ತಡ. ಸಾಮಾಜಿಕ ರಂಗದಲ್ಲಿ ಹೊಸ ಜವಾಬ್ದಾರಿ ನಿರೀಕ್ಷೆ.  ಕೃಷಿ ಕ್ಷೇತ್ರದಲ್ಲಿ  ಹೊಸ ಪ್ರಯೋಗಗಳಿಗೆ ಸಿದ್ಧತೆ.  ಸಂಸಾರದಲ್ಲಿ ನೆಮ್ಮದಿಯ ಅನುಭವ.  
ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.