ದಿನ ಭವಿಷ್ಯ

02-11-2025

Nov 2, 2025 - 20:04
ದಿನ ಭವಿಷ್ಯ


               ಜ್ಯೋತಿರ್ಮಯ.

ಅದೃಷ್ಟ ಸಂಖ್ಯೆ 2

೧.ಮೇಷ: 

 ತಿಂಗಳ ಮೊದಲ ರವಿವಾರದ ಸಂಭ್ರಮ. ವ್ಯವಹಾರದ ಒತ್ತಡಗಳಿಂದ ಬಿಡುಗಡೆ ಇಲ್ಲ. ಮನೆಯಲ್ಲಿ‌ ಸಂಭ್ರಮದ ವಾತಾವರಣ.ಹತ್ತಿರದ ದೇವಾಲಯಕ್ಕೆ  ಭೇಟಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಮಾಧಾನದ ದಿನ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಶನಿಮಹಾತ್ಮೆ ಓದಿ.


 

೨. ವೃಷಭ:

 ಅನೇಕ  ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವವರಿಗೆ  ಲಾಭ. ವ್ಯವಹಾರ ಕ್ಷೇತ್ರ ವಿಸ್ತರಣೆಯಲ್ಲಿ ತೀವ್ರ ಆಸಕ್ತಿ. ಶಾಲೆ, ಕಚೇರಿಗಳಲ್ಲಿ ಹಬ್ಬದ ವಾತಾವರಣ. ಹಿರಿಯರು, ಗೃಹಿಣಿಯರಿಗೆ ನೆಮ್ಮದಿ. ಮಕ್ಕಳ ವ್ಯಾಸಂಗಾಸಕ್ತಿ ವೃದ್ಧಿಗೆ ಪ್ರಯತ್ನ ಅವಶ್ಯ. ಗಣೇಶ ಪಂಚರತ್ನ, ಕಾರ್ತಿಕೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೩.ಮಿಥುನ:

 ನಿಧಾನವಾಗಿ ಯೋಚಿಸಿ ಕೆಲಸಕ್ಕೆ ಇಳಿಯಿರಿ.   ಧಾರ್ಮಿಕ ಕಾರ್ಯದಲ್ಲಿ ಮನಸ್ಸು ತಲ್ಲೀನ.  ಬಾಕಿಯುಳಿದಿರುವ ಕಾರ್ಯಗಳನ್ನು ಮುಗಿಸುವ ಚಿಂತೆ. ವ್ಯವಹಾರಸ್ಥರಿಗೆ ಹೊಸ ಸವಾಲುಗಳು ಎದುರು.  ಅವಿವಾಹಿತರಿಗೆ ಸರಿಯಾದ ಜೋಡಿ ಲಭಿಸುವ ಸಾಧ್ಯತೆ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ,ಆದಿತ್ಯ ಹೃದಯ ಓದಿ.


೪.ಕರ್ಕಾಟಕ:
  ಆರೋಗ್ಯದ ಮೇಲೆ ವಾತಾವರಣ ಪರಿವರ್ತನೆಯ ಪರಿಣಾಮ. ದೇವತಾರಾಧನೆಯಿಂದ  ಮನೆಯಲ್ಲಿ ಶಾಂತಿ. ಪರಿಸರದಲ್ಲಿ ನಡೆಯುವ  ಧಾರ್ಮಿಕ ಸಭೆಯ ಸಂಭ್ರಮದಲ್ಲಿ ಭಾಗಿ. ಧ್ಯಾನ, ಯೋಗಾಭ್ಯಾಸದಲ್ಲಿ ಆಸಕ್ತಿ. ಉತ್ತರದ ಕಡೆಗೆ ಸಣ್ಣ ಪ್ರಯಾಣ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
 

೫.ಸಿಂಹ:

  ವ್ಯವಹಾರ ಸುಧಾರಣೆ ಮತ್ತು ಕಾರ್ಯರಂಗ ವಿಸ್ತರಣೆಯ ಚಿಂತೆ. ಕಟ್ಟಡ ನಿರ್ಮಾಪಕರಿಗೆ ಕೆಲಸದ ಒತ್ತಡ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಮೊತ್ತದ ಲಾಭ.  ವೃತ್ತಿಪರರಿಗೆ ನಿಗದಿತ ಅವಧಿಯಲ್ಲಿ  ಕಾರ್ಯ ಮುಗಿಸುವ  ಒತ್ತಡ. ಗೃಹಿಣಿಯರ ಆದಾಯ  ಹೆಚ್ಚಳ. ಗಣೇಶ ದ್ವಾದಶನಾಮ ಸ್ತೋತ್ರ, ನರಸಿಂಹ ಕವಚ, ಮಹಿಷಮರ್ದಿನಿ ಸ್ತೋತ್ರ ಓದಿ.

೬. ಕನ್ಯಾ:

ಯೋಗ್ಯತೆಯನ್ನರಿತು ದಾನ ಮಾಡಿರಿ. ದೇಹಾರೋಗ್ಯ ಉತ್ತಮ. ದೈವಾನುಗ್ರಹ ಪ್ರಾಪ್ತಿಗೆ ವಿಶೇಷ ಪ್ರಯತ್ನ. ವ್ಯಾಪಾರ ಕ್ಷೇತ್ರದಲ್ಲಿ ಮಂದಗತಿಯ, ಆದರೆ ಸ್ಥಿರವಾದ ಪ್ರಗತಿ. ಉದ್ಯೋಗ ಅರಸುತ್ರಿರುವವರಿಗೆ ಒಳ್ಳೆಯ ಸುದ್ದಿ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.


೭.ತುಲಾ:

 ಮನಸ್ಸು ಸ್ಥಿರವಾದರೆ ಮುಂದಿನ ಮಾರ್ಗ ಗೋಚರ.  ದೇಹಾರೋಗ್ಯ ಸಮಾಧಾನಕರ. ಬಂಧುವಿನ ಭರವಸೆ ತುಂಬುವ ಮಾತುಗಳಿಂದ ಧೈರ್ಯ.  ಬಾಲ್ಯಕಾಲದ ಒಡನಾಡಿಯ ಅಕಸ್ಮಾತ್ ಬೇಟಿಯ ಸಾಧ್ಯತೆ. ಮಕ್ಕಳ ಭವಿಷ್ಯ ಭದ್ರವೆಂಬ ಭರವಸೆ ಇರಲಿ. ಗಣಪತಿ ಅಥರ್ವಶೀರ್ಷ, ರಾಮ ಭುಜಂಗಪ್ರಯಾತ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

೮.ವೃಶ್ಚಿಕ:

ಯಾವುದೇ ಕೊರತೆಯಿಲ್ಲದ ಸುಖಜೀವನ. ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಲಾಭ.  ದೇವತಾರಾಧನೆಯಲ್ಲಿ ಆಸಕ್ತಿ. ಗೃಹಿಣಿಯರಿಗೆ, ಮಕ್ಕಳಿಗೆ ಸಂಭ್ರಮದ ದಿನ. ಮಹಿಳಾ ಉದ್ಯಮಿಗಳಿಗೆ ಅನುಕೂಲದ ದಿನ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ



೯. ಧನು:

ಗೃಹಸಂಬಂಧಿ ಕಾರ್ಯಗಳಲ್ಲಿ ತಲ್ಲೀನರಾಗುವಿರಿ. ಮಕ್ಕಳ ಮದುವೆಯ ಮಾತುಕತೆ.   ಪಾಲುದಾರಿಕೆ ವ್ಯವಹಾರಗಳಲ್ಲಿ ಮಂದಗತಿಯ  ಪ್ರಗತಿ ಗೃಹಾಲಂಕಾರದ ಕೆಲಸಗಾರರಿಗೆ ಕೈತುಂಬಾ ಕೆಲಸ. ಹಿರಿಯರ, ಮಕ್ಕಳ ಆರೋಗ್ಯ ಉತ್ತಮ. ಗಣಪತಿ ಅಥರ್ವಶೀರ್ಷ, ದತ್ತಪಂಜರ ಸ್ತೋತ್ರ,ಕನಕಧಾರಾ ಸ್ತೋತ್ರ ಓದಿ.


೧೦.ಮಕರ:

ತಾಳ್ಮೆ, ಜಾಣ್ಮೆಗಳೇ ನಿಮ್ಮ‌ಯಶಸ್ಸಿನ  ಪ್ರಮುಖ ಸಾಧನಗಳು‌. ಕಾರ್ಯಕೌಶಲಕ್ಕೆ ಒಡನಾಡಿಗಳ ಹರ್ಷ. ಸಾಧನೆಯ ಮಾರ್ಗದಲ್ಲಿ ಅಚಲವಾಗಿ ನಿಲ್ಲುವುದರಿಂದ  ಇಷ್ಟಾರ್ಧ ಸಿದ್ಧಿ. ನಿಗದಿತ ಸಮಯದಲ್ಲಿ ಕಾರ್ಯ ಪೂರ್ತಿಗೆ  ಮೇಲಿನವರ ಒತ್ತಡ. ಮಕ್ಕಳ ವ್ಯಾಸಂಗದಲ್ಲಿ ಮುನ್ನಡೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧. ಕುಂಭ:

ಧಾರ್ಮಿಕ ಚಿಂತನೆಯೊಂದಿಗೆ ಜನಸೇವೆಯಲ್ಲಿ ಆಸಕ್ತಿ. ಹೊಸ ಅವಕಾಶಗಳ ಅನ್ವೇಷಣೆ. ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ. ಹಿರಿಯರಿಗೆ ಸ್ವಾವಲಂಬಿ ಬದುಕು. ಗೃಹಿಣಿಯರಿಗೆ ಸ್ವೋದ್ಯೋಗದಲ್ಲಿ ‌ ಪ್ರಗತಿ.
ಗಣಪತು ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.


೧೨.ಮೀನ:
  ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ.  ಗಳಿಕೆಯ ಮಾರ್ಗಗಳು ಸುಲಭದಲ್ಲಿ ಗೋಚರ. ಭಗವದಾರಾಧನೆಯಲ್ಲಿ ಮನಸ್ಸು ಲೀನ. ಹಿರಿಯರ ಆರೋಗ್ಯ ಉತ್ತಮ. ಸಂಗಾತಿ, ಮಕ್ಕಳಿಂದ  ವ್ಯವಹಾರದಲ್ಲಿ ಸಕ್ರಿಯ ಸಹಕಾರ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.