ದಿನ ಭವಿಷ್ಯ
12-11-2025
ಜ್ಯೋತಿರ್ಮಯ.
ಅದೃಷ್ಟ ಸಂಖ್ಯೆ 3
೧.ಮೇಷ:
ದೈಹಿಕ,.ಮಾನಸಿಕ ಆರೋಗ್ಯ ಉತ್ತಮ ಸ್ಥಿತಿಯಲ್ಲಿ. ಕಾರ್ಯರಂಗದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಚುರುಕಿನ ವಾತಾವರಣ. ಪಾಲುದಾರಿಕೆಯಲ್ಲಿ ಪಾರದರ್ಶಕತೆಯೇ ಪ್ರಧಾನ. ಹಿತೈಷಿಗಳಿಂದ ಸಕಾಲಿಕ ನೆರವು ಲಭ್ಯ. ಮಹಿಳೆಯರ ಆರೋಗ್ಯದ ಕಡೆಗೆ ಗಮನ ಇರಲಿ. ಮನೆಗೆ ಅತಿಥಿಗಳ ಆಗಮನ. ಗಣೇಶ ಕವಚ, ಶಿವ ಸಹಸ್ರನಾಮ, ಶನಿಮಹಾತ್ಮೆ ಓದಿ.
೨.ವೃಷಭ:
ಉದ್ಯೋಗ ಕ್ಷೇತ್ರದಲ್ಲಿ ವಿಶೇಷ ಗೌರವ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ವರ್ಗಾವಣೆ. ಖಾಸಗಿ ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ. ಶೇರು ವ್ಯವಹಾರದಲ್ಲಿ ಕೊಂಚ ಲಾಭ. ಧರ್ಮಗ್ರಂಥಗಳ ಅಧ್ಯಯನದಲ್ಲಿ ಆಸಕ್ತಿ. ಸಂಗೀತ ಶ್ರವಣದ ಅವಕಾಶ. ಹಿರಿಯರು, ಗೃಹಿಣಿಯರು ಮತ್ತು ಮಕ್ಕಳಿಗೆ ಉಲ್ಲಾಸದ ವಾತಾವರಣ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಆಂಜನೇಯ ಸ್ತೋತ್ರ ಓದಿ
೩. ಮಿಥುನ:
ಮಾನಸಿಕ ಸಮತೋಲನ ಕಾಯ್ದುಕೊಳ್ಳಿ. ಉದ್ಯೋಗ ಸ್ಥಾನದಲ್ಲಿ ಸುಮಾರಾಗಿ ನೆಮ್ಮದಿಯ ವಾತಾವರಣ. ಸ್ವಂತ ಉದ್ಯಮದಲ್ಲಿ ಪ್ರಗತಿ ತೃಪ್ತಿಕರ. ಕೃಷಿ ಸಾಮಗ್ರಿಗಳ ಮಾರಾಟಗಾರರಿಗೆ ಆದಾಯ ವೃದ್ಧಿ. ವ್ಯವಹಾರ ನಿಮಿತ್ತ ಅನಿವಾರ್ಯ ಪ್ರಯಾಣ. ಮಕ್ಕಳ ವ್ಯಾಸಂಗದ ಕಡೆಗೆ ಗಮನ ಇರಲಿ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ಸುಬ್ರಹ್ಮಣ್ಯ ಸ್ತೋತ್ರ ಓದಿ.
೪.ಕರ್ಕಾಟಕ:
ಕಾರ್ಯಕ್ಷಮತೆಗೆ ಗೌರವ ಪ್ರಾಪ್ತಿ. ಉದ್ಯಮದ ಉತ್ಪಾದನೆಗಳಲ್ಲಿ ವೈವಿಧ್ಯ ಪಾಲನೆಯಿಂದ ಆಕರ್ಷಣೆ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ದೀರ್ಘಾವಧಿ ಹೂಡಿಕೆಯಲ್ಲಿ ಲಾಭ. ಎಲ್ಲ ಮನೆಮಂದಿಗೂ ಉಲ್ಲಾಸದ ವಾತಾವರಣ. ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ಅನ್ನಪೂರ್ಣಾ ಸ್ತೋತ್ರ ಓದಿ.
೫_ಸಿಂಹ:
ಸ್ಥಿರವಾದ ಪ್ರಗತಿ, ಮುನ್ನಡೆ ನಿರಾತಂಕ. ಉದ್ಯೋಗಸ್ಥರಿಗೆ ವೇತನ ಏರಿಕೆ. ಬಾಯ್ದೆರೆ ಪ್ರಚಾರದಿಂದ ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಉತ್ತೇಜನ. ನಿವೇಶನ ಖರೀದಿ- ಮಾರಾಟದಲ್ಲಿ ಲಾಭ. ಮನೆಯಲ್ಲಿ ಹಿರಿಯರಿಗೆ ಗೌರವ ಸಲ್ಲಿಕೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಗಣೇಶ ಕವಚ, ಶಿವ ಕವಚ, ನವಗ್ರಹ ಸ್ತೋತ್ರ ಓದಿ.
೬.ಕನ್ಯಾ:
ಆನಂದದ ಘಟನೆಗಳ ಸರಮಾಲೆ. ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ಸ್ವಂತ ಉದ್ಯಮದಲ್ಲಿ ಗಣನಾರ್ಹ ಪ್ರಗತಿ. ಬಂಧುವರ್ಗದೊಡನೆ ಸಾಮರಸ್ಯ. ಅರಸಿ ಬರುವ ಉದ್ಯೋಗಾವಕಾಶಗಳು. ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣೇಶ ಪಂಚರತ್ನ, ಮಹಾಲಕ್ಷ್ಮಿ ಅಷ್ಟಕ, ನವಗ್ರಹ ಸ್ತೋತ್ರ ಓದಿ.
೭ತುಲಾ:
ಆರಂಭದಲ್ಲೇ ಪರಿಹಾರಗೊಂಡ ಸಮಸ್ಯೆಗಳು. ಉದ್ಯೋಗದಲ್ಲಿ ಅನುಭವಕ್ಕೆ ತಕ್ಕ ಪ್ರತಿಫಲ ಪ್ರಾಪ್ತಿ. ಅಕಸ್ಮಾತ್ ಧನಾಗಮ ಯೋಗ. ಉದ್ಯಮ ವಿಸ್ತರಣೆ ಯೋಜನೆ ಮುಂದಕ್ಕೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಕೀರ್ತನೆ, ಭಜನೆ, ಸತ್ಸಂಗಗಳಲ್ಲಿ ಆಸಕ್ತಿ.ಗಣೇಶ ಕವಚ, ಕಾಳೀಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೮.ವೃಶ್ಚಿಕ:
ಸಕಲ ಬಗೆಯ ಸಂಕಟಗಳಿಂದ ವಿಮೋಚನೆ. ಉದ್ಯೋಗ ಸ್ಥಾನದಲ್ಲಿ ಸ್ವಯಂ ಯೋಗ್ಯತೆಯಿಂದ ಗೌರವ. ತೊಂದರೆ ಕೊಟ್ಟವರ ವಿರುದ್ಧ ದ್ವೇಷ ಬೇಡ. ಉತ್ಪನ್ನಗಳ ಗುಣಮಟ್ಟಕ್ಕೆ ಸಾಮಾಜಿಕರ ಶ್ಲಾಘನೆ. ದೂರದಲ್ಲಿರುವ ಕಿರಿಯ ಬಂಧುವಿನ ಭೇಟಿ. ಹತ್ತಿರದ ದೇವತಾ ಕ್ಷೇತ್ರ ದರ್ಶನ. ಗೃಹೋದ್ಯಮ ಉತ್ಪನ್ನಗಳ ಜನಪ್ರಿಯತೆ ವಿಸ್ತರಣೆ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಕವಚ, ಹನುಮಾನ್ ಚಾಲೀಸಾ ಓದಿ.
೯. ಧನು:
ಹಿತೈಷಿಗಳ ನೆರವಿನಿಂದ ಕುಟುಂಬ ಸಮಸ್ಯೆ ಪರಿಹಾರ. ಉದ್ಯೋಗ ಸ್ಥಾನದಲ್ಲಿ ಸದ್ಭಾವನೆಗೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ. ಕೃಷ್ಯುತ್ಪಾದನೆ ಲಾಭದಾಯಕ ಸ್ಥಿತಿಯಲ್ಲಿ ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಆಸಕ್ತಿ. ಎಲ್ಲರ ಆರೋಗ್ಯ ಉತ್ತಮ. ಗಣೇಶ ಕವಚ, ಮಹಿಷ ಮರ್ದಿನಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೧೦. ಮಕರ:
ಉದ್ಯೋಗ ಸ್ಥಾನದಲ್ಲಿ ನೆಮ್ಮದಿ. ಉದ್ಯಮಿಗಳಿಗೆ ಶುಭದಿನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ವಾಹನ ವ್ಯವಹಾರದಲ್ಲಿ ಲಾಭ. ಪ್ರಕೃತಿಯ ರಕ್ಷಣೆಯಿಂದ ಶಾಂತಿ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ. ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೧೧.ಕುಂಭ:
ದೂರದೂರಿಗೆ ವರ್ಗಾವಣೆಯಿಂದ ಅನುಕೂಲ. ಉದ್ಯಮಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಮನೆಯಲ್ಲಿ ಮಂಗಲ ಕಾರ್ಯದ ಮಾತುಕತೆ. ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಮನೆಮಂದಿಯ ಸಹಕಾರ. ಮುದ್ರಣ ಸಾಮಗ್ರಿ, ಸ್ಟೇಶನರಿ ವಿತರಕರ ವ್ಯಾಪಾರ ವೃದ್ಧಿ. ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಶನಿಮಹಾತ್ಮೆ ಓದಿ.
೧೨.ಮೀನ:
ಕರ್ಮಕಾರಕ ಶನಿಯಿಂದ ಸತ್ಕಾರ್ಯಕ್ಕೆ ಪ್ರೇರಣೆ. ಉದ್ಯೋಗ ಸ್ಥಾನದ ಆತಂಕ ದೂರ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ. ಬಂಧು ವರ್ಗದಲ್ಲಿ ಹರ್ಷದ ಸನ್ನಿವೇಶ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಹಿರಿಯರ, ಗೃಹಿಣಿಯರ ಆರೋಗ್ಯ ಉತ್ತಮ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.


