ದಿನ ಭವಿಷ್ಯ

13--11-2025

Nov 13, 2025 - 16:54
ದಿನ ಭವಿಷ್ಯ


                 ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ  4

೧. ಮೇಷ: 
 ಆವರಿಸಿದ ಆಲಸ್ಯದಿಂದ ಮುಕ್ತರಾಗುವ ಪ್ರಯತ್ನ. ಸಂಸಾರದ ಆವಶ್ಯಕತೆಗಳತ್ತ ಗಮನ. ಉದ್ಯಮಿಗಳಿಗೆ  ಅಭಿವೃದ್ಧಿಯ ಮಾರ್ಗಗಳ ಚಿಂತೆ. ಕೆಲವು ವರ್ಗದ  ವ್ಯಾಪಾರಿಗಳಿಗೆ  ಲಾಭ. ಪ್ರಮುಖ ವ್ಯಕ್ತಿಗಳ ಭೇಟಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ,ಶನಿಮಹಾತ್ಮೆ ಓದಿ.


೨. ವೃಷಭ:
  ಹಲವು ಬಗೆಯ ಕಾರ್ಯಕ್ರಮಗಳ ಒತ್ತಡ. ಉದ್ಯಮ ವಿಸ್ತರಣೆಗೆ ವಿವಿಧ ಮೂಲಗಳಿಂದ ಸಹಾಯ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ. ಪ್ರಾಪ್ತವಯಸ್ಕರಿಗೆ  ವಿವಾಹ ನಿಶ್ಚಯ. ವ್ಯವಹಾರಾರ್ಥ ಸಣ್ಣ ಪ್ರಯಾಣ ಸಂಭವ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಪಂಚರತ್ನ ಓದಿ.


೩.ಮಿಥುನ:
  ಪತ್ರಕರ್ತರಿಗೆ ತರಾತುರಿಯ ದಿನ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಧನವ್ಯಯ.ಆಸ್ಪತ್ರೆ, ಅನಾಥಾಶ್ರಮಕ್ಕೆ ಭೇಟಿ. ಉದರದ ಆರೋಗ್ಯದ ಕುರಿತು ಎಚ್ಚರ. ಆಪ್ತಸಲಹೆಯ ಮೂಲಕ ಆತ್ಮವಿಶ್ವಾಸ ವೃದ್ಧಿ. ಗಣಪತಿ ಅಥರ್ವಶೀರ್ಷ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

೪.ಕರ್ಕಾಟಕ:
  ಬಾಲ್ಯಕಾಲದ ಗುರುಗಳ ಭೇಟಿ. ಗೃಹಿಣಿಯರಿಗೆ ನೆಮ್ಮದಿಯ ದಿನ.ವ್ಯವಹಾರ ಸಂಬಂಧ   ಸಣ್ಣ  ಪ್ರಯಾಣ. ವಿದ್ಯಾರ್ಥಿಗಳ ಭವಿಷ್ಯ ಚಿಂತನೆ.  ನೊಂದವರಿಗೆ ಸಾಂತ್ವನ ಹೇಳಿ ಸಮಾಧಾನ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೫.ಸಿಂಹ:
 ಎಣಿಸದ ರೀತಿಯ ಸುಖ, ಸಂತೋಷ.  ಮನದಾಳದ ಪ್ರಾರ್ಥನೆಯಿಂದ ಇಷ್ಟಾರ್ಥಸಿದ್ಧಿ.  ವೃತ್ತಿಪರರಿಗೆ ಗುರಿ ಸಾಧನೆಯಲ್ಲಿ ಯಶಸ್ಸು. ಹಿರಿಯರ‌ ಆರೋಗ್ಯ ಸುಧಾರಣೆ. ವಿದ್ಯಾರ್ಥಿಗಳ  ಲೋಕಜ್ಞಾನ ವೃದ್ಧಿಗೆ ಅನುಕೂಲದ ವಾತಾವರಣ.
ಗಣಪತಿ ಅಥರ್ವಶೀರ್ಷ, ಶಿವಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೬. ಕನ್ಯಾ:
   ವ್ಯಾಪಾರಿಗಳಿಗೆ ಹೊಸ ಸಪ್ತಾಹದ ಮಧ್ಯದಲ್ಲಿ ಲಾಭ. .ವಿದ್ಯಾರ್ಥಿಗಳಿಗೆ ಮನೋರಂಜನೆ.. ಕುಶಲ ಕರ್ಮಿಗಳಿಗೆ  ಶೀಘ್ರ ಉದ್ಯೋಗ ಪ್ರಾಪ್ತಿ. .ಉದ್ಯೋಗ ಅರಸುವವರಿಗೆ ಶುಭ ಸಮಾಚಾರ..ಉದ್ಯೋಗಸ್ಥ ಮಹಿಳೆಯರಿಗೆ ವಿರಾಮ..ಗಣೇಶ  ‍ದ್ವಾದಶನಾಮ ಸ್ತೋತ್ರ, ದೇವೀಸ್ತೋತ್ರ, ಗುರುಸ್ತೋತ್ರ ಓದಿ

೭. ತುಲಾ:
  ಒಂದರ ಮೇಲೊಂದರಂತೆ ಬಂದುಬೀಳುವ ಕೆಲಸಗಳು. ಉತ್ಪನ್ನಗಳ ಗುಣಮಟ್ಟ ಸುಧಾರಣೆಯತ್ತ ಗಮನ. ಕ್ರೀಡೆ, ಸಂಗೀತಾದಿ  ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಆಸಕ್ತಿ ವೃದ್ಧಿ .ಕೃಷಿ , ಹೈನುಗಾರಿಕೆ, ಜೇನು ಸಾಕಣೆಯಲ್ಲಿ ಮಗ್ನತೆ. ಹಿರಿಯರ ಮನೆಯಲ್ಲಿ ಕುಟುಂಬಸ್ಥರ ಭೇಟಿ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ಶನಿಸ್ತೋತ್ರ ಓದಿ.
 

೮.ವೃಶ್ಚಿಕ:

 ಉದ್ಯೋಗ, ವ್ಯವಹಾರ ಕ್ಷೇತ್ರಗಳ ಮಿತ್ರರ ಭೇಟಿ. ಹಿರಿಯರ ಮನೆಯಲ್ಲಿ ದೇವತಾಕಾರ್ಯ. ವ್ಯವಹಾರದ ಸಂಬಂಧ ದಕ್ಷಿಣಕ್ಕೆ  ಪ್ರಯಾಣ.  ಪರವೂರಿನಲ್ಲಿರುವ ಮಕ್ಕಳ ಆಗಮನ. ಹಿರಿಯರ ಆರೋಗ್ಯ ಸುಧಾರಣೆ.. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೯.ಧನು:
ದಂಪತಿಗಳ ನಡುವೆ ಅನುರಾಗ ವೃದ್ಧಿ ‌. ಕುಟುಂಬದಲ್ಲಿ ಸಮೃದ್ಧಿಯ ಲಕ್ಷಣಗಳು. ಶಿಕ್ಷಿತರಿಗೆ  ಯೋಗ್ಯ ಉದ್ಯೋಗ ಲಭಿಸುವ ಭರವಸೆ. ಸಣ್ಣ ಗೃಹೋದ್ಯಮ ಅಥವಾ ಹೈನುಗಾರಿಕೆ   ಕೈಗೊಂಡರೆ ಶುಭ. ಅವಿವಾಹಿತರಿಗೆ ವಿವಾಹ ಯೋಗ.ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

೧೦.ಮಕರ:


 ಕುಟುಂಬದಲ್ಲಿ ಪ್ರೀತಿ, ವಾತ್ಸಲ್ಯ ವೃದ್ಧಿ. ಸಣ್ಣ ಉದ್ಯಮಗಳಿಗೆ ಶುಭಕಾಲ . ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ  ಲಾಭ. ದೇವ ಮಂದಿರ ಸಂದರ್ಶನ. ಆಸ್ಪತ್ರೆ ,ಅನಾಥಾಶ್ರಮಗಳಿಗೆ ಭೇಟಿ. 
ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧. ಕುಂಭ:

 ಸದುದ್ದೇಶಕ್ಕೆ ಸಹಾಯ ಮಾಡಿದ ತೃಪ್ತಿ. ಕುಟುಂಬದ ಕ್ಷೇಮಕ್ಕೆ ಹೊಸ ಯೋಜನೆ.  ಸಮಾಜದಲ್ಲಿ ಗೌರವ , ಜನಪ್ರಿಯತೆ ವೃದ್ಧಿ. ಆಸ್ಪತ್ರೆ, ಅನಾಥಾಲಯಕ್ಕೆ ಭೇಟಿ. ಅಪರೂಪದ ಬಂಧುಗಳ ಆಗಮನ,   ಮನೆಮಂದಿಗೆ  ಆನಂದ.ಗಣೇಶ ಸ್ತೋತ್ರ,  ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

೧೨. ಮೀನ: ‌
 ನಾಳೆಯ ಕಾರ್ಯಗಳ ಆಯೋಜನೆ. ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯಯೋಜನೆ. ಹಿಂದಿನ ಸಹಚರರ ಭೇಟಿ. ಕೆಲವರಿಗೆ ರಕ್ತದಾನ ಮಾಡುವ ಅವಕಾಶ. ದಂಪತಿಗೆ ನಡುವೆ ಅನುರಾಗ ವೃದ್ಧಿ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಶನಿಮಹಾತ್ಮೆ ಓದಿ.