ಇನ್ನುಮುಂದೆ ಸ್ಪ್ಯಾಮ್ ಕರೆಗಳ ಬಗ್ಗೆ ಆತಂಕ ಬೇಡ; ಏರ್‌ಟೆಲ್ ಜಾರಿಗೆ ತಂದಿದೆ ಎಐ ಆಧಾರಿತ ಸ್ಪ್ಯಾಮ್ ಕರೆ-ಎಸ್‌ಎಂಎಸ್ ನಿಯಂತ್ರಣ ವ್ಯವಸ್ಥೆ
ಏರ್‌ಟೆಲ್‌ನ ಈ ಹೊಸ ಕೃತ ಬುದ್ಧಿಮತ್ತೆ(ಎಐ) ತಂತ್ರಜ್ಞಾನ ವ್ಯವಸ್ಥೆಯಲ್ಲಿ 63 ದಿನಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 682 ಮಿಲಿಯನ್ ಸಂಭಾವ್ಯ ಸ್ಪ್ಯಾಮ್ ಕರೆಗಳು ಮತ್ತು 46 ಮಿಲಿಯನ್ ಸ್ಪ್ಯಾಮ್ SMS ಸಂದೇಶಗಳನ್ನು ಯಶಸ್ವಿಯಾಗಿ ಟ್ರ್ಯಾಕ್ ಮಾಡಿದೆ. ಅದರಂತೆ ಕರ್ನಾಟಕದಲ್ಲಿನ ಎಲ್ಲಾ ಏರ್‌ಟೆಲ್ ಮೊಬೈಲ್ ಗ್ರಾಹಕರು ಈಗ ಸೇವೆಯನ್ನು ವಿನಂತಿಸುವ ಅಥವಾ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳದೆಯೇ ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ.
ಮಂಗಳೂರು: ಸಾಮಾನ್ಯವಾಗಿ ಮೊಬೈಲ್‌ಗೆ ಬರುವ ಸ್ಪ್ಯಾಮ್ ಕರೆಗಳಿಂದ ದಿನನಿತ್ಯ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತದೆ. ಅಷ್ಟೇಅಲ್ಲ ಈ ರೀತಿ ಸ್ಪ್ಯಾಮ್ ಕರೆಗಳ ಮೂಲಕ ಸೈಬರ್ ಕಳ್ಳರು ಕೂಡ ನಮ್ಮ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದುಕೊಂಡು ಕೋಟ್ಯಂತರ ರೂಪಾಯಿ ವಂಚಿಸುವ ಪ್ರಕರಣಗಳು ಕೂಡ ದಿನೇದಿನೆ ಹೆಚ್ಚಾಗುತ್ತಿವೆ. ಇಂಥಹ ಸ್ಪ್ಯಾಮ್ ಕರೆಗಳು ಕೇವಲ ಮೊಬೈಲ್ ಗ್ರಾಹಕರನ್ನಷ್ಟೇ ಅಲ್ಲ, ಮೊಬೈಲ್ ಸೇವೆ ಒದಗಿಸುವ ಕಂಪೆನಿಗಳಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನಲೆಯಲ್ಲಿ ಇದೀಗ ಭಾರತದ ಮುಂಚೂಣಿಯ ಮೊಬೈಲ್ ನೆಟ್‌ವರ್ಕ್ ಕಂಪೆನಿಯಾಗಿರುವ ಏರ್‌ಟೆಲ್ ಗ್ರಾಹಕರ ಅನುಕೂಲಕ್ಕಾಗಿ ಎಐ ಆಧಾರಿಯ ಸ್ಪ್ಯಾಮ್ ಕರೆಗಳಿಗೆ ಮಾಸ್ಟರ್ ಸ್ಟ್ರೋಕ್ ನೀಡುವ ವಿನೂತನ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಏರ್‌ಟೆಲ್‌ನ ಈ ಹೊಸ AI(ಕೃತಕ ಬುದ್ಧಿಮತ್ತೆ)
ಚಾಲಿತ ಸ್ಪ್ಯಾಮ್ ಪತ್ತೆ ಮಾಡುವ ವ್ಯವಸ್ಥೆಯು ಕರ್ನಾಟಕದ ಲಕ್ಷಾಂತರ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ. ಏರ್‌ಟೆಲ್‌ನ ಈ ಹೊಸ ತಂತ್ರಜ್ಞಾನ ವ್ಯವಸ್ಥೆಯಲ್ಲಿ 63 ದಿನಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 682 ಮಿಲಿಯನ್ ಸಂಭಾವ್ಯ ಸ್ಪ್ಯಾಮ್ ಕರೆಗಳು ಮತ್ತು 46 ಮಿಲಿಯನ್ ಸ್ಪ್ಯಾಮ್ SMS ಸಂದೇಶಗಳನ್ನು ಯಶಸ್ವಿಯಾಗಿ ಟ್ರ್ಯಾಕ್ ಮಾಡಿದೆ. ಅದರಂತೆ ಕರ್ನಾಟಕದಲ್ಲಿನ ಎಲ್ಲಾ ಏರ್‌ಟೆಲ್ ಮೊಬೈಲ್ ಗ್ರಾಹಕರು ಈಗ ಸೇವೆಯನ್ನು ವಿನಂತಿಸುವ ಅಥವಾ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳದೆಯೇ ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ.
ಈ ಬಗ್ಗೆ ತಿಕ್ರಿಯಿಸಿರುವ ಭಾರ್ತಿ ಏರ್‌ಟೆಲ್‌ನ ಕರ್ನಾಟಕದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಜನೀಶ್ ವರ್ಮಾ “ಗ್ರಾಹಕರು ಹೆಚ್ಚು ಹೆಚ್ಚು ತಂತ್ರಜ್ಞಾನವನ್ನು ಅವಲಂಬಿಸುತ್ತಿರುವ ಸಂದರ್ಭದಲ್ಲಿ ಈ ರೀತಿಯ ಸ್ಪ್ಯಾಮ್ ಕಾಲ್‌ಗಳಿಂದಾಗಿ ಆನ್‌ಲೈನ್ ವಂಚನೆಗೆ ಒಳಗಾಗುತ್ತಿರುವ ಪ್ರಕರಣಗಳು ದಿನನಿತ್ಯವೂ ಬೆಳಕಿಗೆ ಬರುತ್ತಿವೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಏರ್‌ಟೆಲ್ ಶಂಕಿತ ಸ್ಪ್ಯಾಮ್ ಕರೆಗಳು ಮತ್ತು ಸಂದೇಶಗಳನ್ನು ಪೂರ್ವಭಾವಿಯಾಗಿ ಗುರುತಿಸಲು AI ಆಧಾರಿತ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಏರ್‌ಟೆಲ್, ಕರ್ನಾಟಕದಲ್ಲಿರುವ ತನ್ನ 50 ಮಿಲಿಯನ್ ಗ್ರಾಹಕರಿಗೆ ಸುರಕ್ಷಿತ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಒದಗಿಸುವ ಮೂಲಕ ಈ ರೀತಿಯ ಸ್ಪ್ಯಾಮ್ ಕರೆಗಳಿಗೆ ಕಡಿವಾಣ ಹಾಕುತ್ತಿದೆ. ಹೀಗಿರುವಾಗ, ಏರ್‌ಟೆಲ್ ಗ್ರಾಹಕರು ಇನ್ನುಮುಂದೆ ಸ್ಪ್ಯಾಮ್ ಕರೆಗಳ ಬಗ್ಗೆ ಹೆಚ್ಚು ಆತಂಕಪಡುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.
ಈ ಸ್ಪ್ಯಾಮ್ ಕರೆಗಳ ನಿಯಂತ್ರಣ ವ್ಯವಸ್ಥೆಯನ್ನು ಏರ್‌ಟೆಲ್‌ನ ಡೇಟಾ ವಿಜ್ಞಾನಿಗಳಿಂದ ಆಂತರಿಕವಾಗಿ ಅಭಿವೃದ್ಧಿಪಡಿಸಲಾಗಿದ್ದು, AI-ಚಾಲಿತ ಪರಿಹಾರವು ಕರೆಗಳು ಮತ್ತು SMS ಗಳನ್ನು "ಶಂಕಿತ ಸ್ಪ್ಯಾಮ್" ಎಂದು ಗುರುತಿಸಲು ಹಾಗೂ ವರ್ಗೀಕರಿಸಲು ಸ್ವಾಮ್ಯತೆಯ ಅಲ್ಗಾರಿದಮ್ ಅನ್ನು ಬಳಸಿಕೊಳ್ಳುತ್ತದೆ. ಅತ್ಯಾಧುನಿಕ AI ಅಲ್ಗಾರಿದಮ್‌ನಿಂದ ನಡೆಸಲ್ಪಡುವ ನೆಟ್‌ವರ್ಕ್, ಕರೆ ಮಾಡುವವರ ಅಥವಾ ಕಳುಹಿಸುವವರ ಬಳಕೆಯ ಮಾದರಿಗಳು, ಕರೆ/SMS ಗಳನ್ನು ಪತ್ತೆ ಮಾಡುತ್ತವೆ. ಡ್ಯುಯಲ್-ಲೇಯರ್ಡ್ ರಕ್ಷಣೆ ಇದಾಗಿದ್ದು, ಪರಿಹಾರವು ಎರಡು ಫಿಲ್ಟರ್‌ಗಳನ್ನು ಹೊಂದಿದ್ದು, ಒಂದು ನೆಟ್‌ವರ್ಕ್ ಲೇಯರ್‌ನಲ್ಲಿ ಮತ್ತು ಎರಡನೆಯದು ಐಟಿ ಸಿಸ್ಟಮ್ಸ್ ಲೇಯರ್‌ನಲ್ಲಿ ನಿಯಂತ್ರಿಸುತ್ತದೆ. ಪ್ರತಿ ಕರೆ ಮತ್ತು SMS ಡ್ಯುಯಲ್-ಲೇಯರ್ಡ್ AI ಶೀಲ್ಡ್ ಮೂಲಕ ಹಾದುಹೋಗುತ್ತದೆ. ಎರಡು ಮಿಲಿ ಸೆಕೆಂಡುಗಳಲ್ಲಿ ಪರಿಹಾರವು 1.5 ಬಿಲಿಯನ್ ಸಂದೇಶಗಳನ್ನು ಮತ್ತು 2.5 ಬಿಲಿಯನ್ ಕರೆಗಳನ್ನು ಟ್ರ್ಯಾಕ್ ಮಾಡುತ್ತದೆ ಎನ್ನುತ್ತಾರೆ.
ಇನ್ನೊಂದೆಡೆ SMS ಮೂಲಕ ಸ್ವೀಕರಿಸಿದ ದುರುದ್ದೇಶಪೂರಿತ ಲಿಂಕ್‌ಗಳ ಬಗ್ಗೆ ಗ್ರಾಹಕರನ್ನು ಎಚ್ಚರಿಸುತ್ತದೆ. ಇದಕ್ಕಾಗಿ, ಏರ್‌ಟೆಲ್ ಬ್ಲ್ಯಾಕ್ ಲಿಸ್ಟ್ ಮಾಡಲಾದ URLಗಳ ಕೇಂದ್ರೀಕೃತ ಡೇಟಾಬೇಸ್ ಅನ್ನು ನಿರ್ಮಿಸಿದೆ ಮತ್ತು ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಆಕಸ್ಮಿಕವಾಗಿ ಕ್ಲಿಕ್ ಮಾಡದಂತೆ ಬಳಕೆದಾರರನ್ನು ಎಚ್ಚರಿಸಲು ಅತ್ಯಾಧುನಿಕ AI ಅಲ್ಗಾರಿದಮ್‌ನಿಂದ ಪ್ರತಿ SMS ಅನ್ನು ನೈಜ ಸಮಯದಲ್ಲಿ ಸ್ಕ್ಯಾನ್ ಮಾಡಲಾಗುತ್ತದೆ. ಆ ಮೂಲಕ ಯಾವುದೇ ಸ್ಪ್ಯಾಮ್ ಅಥವಾ ವಂಚನೆ ಆಧಾರಿಯ ಎಸ್‌ಎಂಎಸ್‌ಗಳನ್ನು ನಿಯಂತ್ರಿಸುತ್ತದೆ ಎಂದು ರಜನೀಶ್ ವರ್ಮಾ ವಿವರಿಸಿದ್ದಾರೆ.