ದಿನ ಭವಿಷ್ಯ

10-10-2025

Oct 10, 2025 - 16:05
ದಿನ ಭವಿಷ್ಯ


                   
                  ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ  1

೧. ಮೇಷ:
   ಖಾಸಗಿ ರಂಗದ ಉದ್ಯೋಗಸ್ಥರಿಗೆ ಸಮಾಧಾನ. ಉದ್ಯಮರಂಗದಲ್ಲಿ ಹೊಸ ವ್ಯವಸ್ಥೆಗಳು. ಅವಿವಾಹಿತ ಹುಡುಗರಿಗೆ ವಿವಾಹ ಯೋಗ. ವ್ಯವಹಾರ ಸಂಬಂಧ ತಿರುಗಾಟ. ಹಿರಿಯರು ಮತ್ತು ಗೃಹಿಣಿಯರಿಗೆ ಉಲ್ಲಾಸ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

೨.ವೃಷಭ:

  ಅಧ್ಯಾಪಕರಿಗೆ ಮುಂದುವರಿದ ಕಿರಿಕಿರಿ.  ಹಿರಿಯರ ಆರೋಗ್ಯ ಕ್ಷಿಪ್ರ ಸುಧಾರಣೆ ಎಂಜಿನಿಯರ್, ಲೆಕ್ಕ ಪರಿಶೋಧಕರು ಮೊದಲಾದ  ವೃತ್ತಿಪರರ ಕ್ಷೇತ್ರ ವಿಸ್ತರಣೆ. ಗೃಹಿಣಿಯರ ಉದ್ಯಮಗಳ ಆದಾಯ ವೃದ್ಧಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಅಧಿಕ ಲಾಭ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ಗುರುಸ್ತೋತ್ರ ಓದಿ.

೩ಮಿಥುನ:

 ಸಾಧ್ಯವಾದಷ್ಟು ನಿರ್ಲಿಪ್ತರಾಗಿರಿ. ಸ್ವತಂತ್ರ  ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ.  ಸದ್ಗ್ರಂಥ ಅಧ್ಯಯನದಲ್ಲಿ ಆಸಕ್ತಿ. ಸಂಗೀತ ಶ್ರವಣ, ಸತ್ಸಂಗಗಳಲ್ಲಿ ಕಾಲಯಾಪನೆ. ಹಿರಿಯ ಸಾಧಕರ ಪರಿಚಯದಿಂದ ಲಾಭ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಆದಿತ್ಯ ಹೃದಯ ಓದಿ

೪. ಕರ್ಕಾಟಕ:
  ನಿರಾಶಾವಾದಿಗಳ ಸಹವಾಸದಿಂದ ದೂರವಿರಿ. ಶಿಕ್ಷಿತರ ನಿರುದ್ಯೋಗ ಸಮಸ್ಯೆ ನಿವಾರಣೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಉದ್ಯೋಗ, ಉದ್ಯಮ ಕ್ಷೇತ್ರಗಳಲ್ಲಿ ಅನುಕೂಲ. ಯುವಜನರಿಗೆ ಕೃಷಿಯಿಂದ ಅನುಕೂಲ. ಸಂಕಷ್ಟನಾಶನ ಗಣೇಶ ಸ್ತೋತ್ರ, ವಿಷ್ಷು ಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಸ್ತೋತ್ರ ಓದಿ.

೫.ಸಿಂಹ:
 ಕೆಲವೇ ಕ್ಷೇತ್ರಗಳಲ್ಲಿ  ಯಶಸ್ಸಿನ ಅನುಭವ. ಶೇರು  ವ್ಯವಹಾರದಲ್ಲಿ ಉತ್ತಮ ಲಾಭ. ಸಕಾಲಿಕ ಸ್ಪಂದನದಿಂದ  ಕಾರ್ಯಗಳು ಶೀಘ್ರ ಮುಕ್ತಾಯ. ಯಂತ್ರೋಪಕರಣ ವ್ಯಾಪಾರಿಗಳಿಗೆ ಹೆಚ್ವಿನ‌ ಲಾಭ‌. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ. ಗಣೇಶ ಕವಚ, ಶಿವಕವಚ, ನವಗ್ರಹ ಮಂಗಲಾಷ್ಟಕ ಓದಿ.


೬.ಕನ್ಯಾ:

 ಸಹೋದ್ಯೋಗಿಗಳ ಗೌರವಕ್ಕೆ ಪಾತ್ರರಾಗುವಿರಿ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ  ಮುನ್ನಡೆ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಲೇಖನ ವ್ಯವಸಾಯ, ಸ್ವಾಧ್ಯಾಯದಲ್ಲಿ ಹೆಚ್ಚು ಆಸಕ್ತಿ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣುಸಹಸ್ರನಾಮ, ಮಹಾಲಕ್ಷ್ಮಿ ಅಷ್ಟಕ ಓದಿ.

೭. ತುಲಾ:

 ಗ್ರಹಾನುಕೂಲದಿಂದ ಶುಭ ಫಲ ಪ್ರಾಪ್ತಿ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ‌ ಲಾಭ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಮಾಧಾನದ ದಿನ. ಇಷ್ಟದೇವರ ಆಲಯಕ್ಕೆ ಭೇಟಿ. ಒತ್ತಾಯದ ದೇಹಶ್ರಮದಿಂದ ದೂರವಿರಿ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.

೮.ವೃಶ್ಚಿಕ:

  ನೌಕರ ವರ್ಗಕ್ಕೆ ಸಾಧಾರಣ ಸಂತೃಪ್ತಿ. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮಧ್ಯಮ ಲಾಭ.  ಹಿರಿಯರ  ಆರೋಗ್ಯ ಸುಧಾರಣೆ. ಗೃಹಿಣಿಯರಿಗೆ ಹರ್ಷ, ಉಲ್ಲಾಸಗಳ ದಿನ. ವಿದ್ಯಾರ್ಥಿಗಳ ಅಧ್ಯಯನಾಸಕ್ತಿ ವೃದ್ಧಿಗೆ ಅನುಕೂಲ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ , ಲಕ್ಷ್ಮೀಸ್ತೋತ್ರ ಓದಿ.


೯.ಧನು:

  ದುರುಳ ರಾಜಕಾರಣಿಗಳಿಗೆ ಕೇಡುಗಾಲ. ಉಳಿತಾಯ  ಯೋಜನೆಗಳ‌ ಏಜೆಂಟರಿಗೆ ಆದಾಯ  ವೃದ್ಧಿ. ಸಹೋದ್ಯಮದಲ್ಲಿ ನಿರೀಕ್ಷಿತ ಲಾಭ. ಗೃಹಿಣಿಯರ ಸ್ವೋದ್ಯೋಗ  ಯೋಜನೆಗಳಿಗೆ ಶುಭಕಾಲ. ಕೌಟುಂಬಿಕ ವಿಚಾರಕ್ಕಾಗಿ ಪ್ರಯಾಣ. ಗಣೇಶ ಅಷ್ಟಕ, ರಾಮ ಭುಜಂಗಪ್ರಯಾತ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೧೦.ಮಕರ:

  ಕಾರ್ಯರಂಗದಲ್ಲಿ ಗೌರವಾದರ ವೃದ್ಧಿ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ಅಧ್ಯಾಪಕರಿಗೆ ಕೀರ್ತಿ. ಶಸ್ತ್ರವೈದ್ಯರಿಗೆ ವೃತ್ತಿಪರತೆಯಿಂದ ಕೀರ್ತಿ. ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

 

೧೧. ಕುಂಭ:

  ಕಾರ್ಯವೈಖರಿಗೆ ಸರ್ವರ ಮೆಚ್ಚುಗೆ.  ಸಮಾಜ ಸೇವೆಯಿಂದ  ಜನಪ್ರಿಯತೆ ವೃದ್ಧಿ. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಲಾಭ. ನಿಸ್ವಾರ್ಥ ಸೇವೆಗೆ ಬಂದ ವಿಘ್ನ ನಿವಾರಣೆ  ವ್ಯವಹಾರ ಸಂಬಂಧ ಉತ್ತರಕ್ಕೆ ಪ್ರಯಾಣ. ಗಣೇಶ ಸ್ತೋತ್ರ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಶನಿಮಹಾತ್ಮೆ  ಓದಿ.


೧೨. ಮೀನ:

 ಸತ್ಕಾರ್ಯಗಳಲ್ಲಿ ಪಾಲುಗೊಳ್ಳಲು ಆಹ್ವಾನ. ಮರಳಿಬಂದ ಸುಸಂದರ್ಭ ಸದುಪಯೋಗ. ಎಲ್ಲೆಡೆ ಸಕಾರಾತ್ಮಕ ಸ್ಪಂದನ. ದ್ರವ ವ್ಯಾಪಾರಿಗಳಿಗೆ ಶುಭಕಾಲ.ಗುರು, ಹಿರಿಯರ ದರ್ಶನದಿಂದ ಶುಭ. ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನರಸಿಂಹ ಸ್ತೋತ್ರ, ಶನಿಮಹಾತ್ಮೆ ಓದಿ.