ದಿನ ಭವಿಷ್ಯ

15-10-2025

Oct 15, 2025 - 15:52
ದಿನ ಭವಿಷ್ಯ


          ‌  ‌‌   ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ  6

೧.ಮೇಷ:

 ಧನಾತ್ಮಕ ಚಿಂತನೆ, ಧ್ಯಾನದ ಮೂಲಕ ಆರೋಗ್ಯ ರಕ್ಷಣೆ. ಉದ್ಯೋಗಸ್ಥರ  ಬುದ್ಧಿಮತ್ತೆಗೆ ಸವಾಲು.   ಉದ್ಯಮಗಳ ಬೆಳವಣಿಗೆಗೆ ಪೈಪೋಟಿಯ ಬಾಧೆ.  ಗುಣಮಟ್ಟ ಇಲ್ಲದ ಕೇಟರಿಂಗ್ ವ್ಯವಹಾರಸ್ಥರಿಗೆ ಸೋಲು. ಮಕ್ಕಳಲ್ಲಿ ಸದ್ಗುಣ ವೃದ್ಧಿಗೆ ಪ್ರಯತ್ನ. ಗಣೇಶ ಪಂಚರತ್ನ, ಶಿವಪಂಚಾಕ್ಷರ ಸ್ತೋತ್ತ, ಶನಿಮಹಾತ್ಮೆ ಓದಿ.

೨.ವೃಷಭ:

ಇರುವ ಉದ್ಯೋಗದಲ್ಲೇ ಉನ್ನತಿಗೆ ಪ್ರಯತ್ನ. ಸರಕಾರಿ ಅಧಿಕಾರಿಗಳಿಗೆ ಸ್ಥಳಾಂತರ ಯೋಗ. ಖಾಸಗಿ ಉದ್ಯಮಗಳ ಸ್ಥಿತಿ ಸುಧಾರಣೆ. ಶೇರು ವ್ಯವಹಾರದಲ್ಲಿ  ಲಾಭ. ದೇವತಾ ಸಾನ್ನಿಧ್ಯಕ್ಕೆ  ಭೇಟಿ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ  ಉಲ್ಲಾಸ. ಗಣಪತಿ ಅಥರ್ವಶೀರ್ಷ, ದುರ್ಗಾಸ್ತೋತ್ರ, ಆದಿತ್ಯ ಹೃದಯ ಓದಿ.


೩. ಮಿಥುನ:

 ಬಣ್ಣದ ವೇಷಗಳಿಗೆ ಹೆದರುವುದು ಬೇಡ. ಉದ್ಯೋಗದಲ್ಲಿ ಯಶಸ್ಸಿನ ಭರವಸೆ. ಸ್ವಂತ ಉದ್ಯಮದಲ್ಲಿ ಪ್ರಗತಿ ತೃಪ್ತಿಕರ. ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ. ವ್ಯವಹಾರ ಮಾತುಕತೆಯ ಮಧ್ಯಸ್ಥಿಕೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ತ, ನವಗ್ರಹ ಮಂಗಲಾಷ್ಟಕ ಓದಿ.


೪.ಕರ್ಕಾಟಕ:

  ಉದ್ಯೋಗಸ್ಥರಿಗೆ ಉನ್ನತರಿಂದ ಮಾನಸಿಕ ಪೀಡೆ. ಉದ್ಯಮದ ಉತ್ಪಾದನೆಗಳಲ್ಲಿ   ವೈವಿಧ್ಯ ಪಾಲನೆ.  ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳಿಗೆ ಅಧಿಕ‌ ಬೇಡಿಕೆ. ದೀರ್ಘಾವಧಿ ಹೂಡಿಕೆಯಲ್ಲಿ ಲಾಭ. ಎಲ್ಲ ಮನೆಮಂದಿಗೂ ಉಲ್ಲಾಸ. ಸಂಕಷ್ಟನಾಶನ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೫_ಸಿಂಹ:
  ತಾತ್ಕಾಲಿಕ ತಡೆಯಿದ್ದರೂ ನಿಲ್ಲದ ಪ್ರಗತಿ. ಉದ್ಯೋಗಸ್ಥರಿಗೆ ಹೆಚ್ಚು ದುಡಿಯಲು ಉತ್ತೇಜನ. ಬಾಯ್ದೆರೆ ಪ್ರಚಾರದಿಂದ  ವ್ಯಾಪಾರ ವೃದ್ಧಿ. ನಿರ್ಮಾಣ ಕಾಮಗಾರಿಗಳ ವೇಗ ವರ್ಧನೆ.  ಮನೆಯಲ್ಲಿ ಮಂಗಲಕಾರ್ಯದ ಸಿದ್ಧತೆ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.


೬.ಕನ್ಯಾ:

  ಹೆಚ್ಚಿನ ಮಟ್ಟಿಗೆ ಅನುಕೂಲದ  ದಿನ. ಉದ್ಯೋಗ ಸ್ಥಾನದಲ್ಲಿ ಕೆಲಸಕ್ಕೆ ಉತ್ತೇಜನ. ಉದ್ಯಮದಲ್ಲಿ ಶೀಘ್ರ ಪ್ರಗತಿ . ಉದ್ಯೋಗಾಸಕ್ತರನ್ನು ಅರಸಿಬರುವ  ಅವಕಾಶಗಳು. ಗುಣಮಟ್ಟ ಕಾಯ್ದುಕೊಳ್ಳದ ಹೋಟೆಲುಗಳಿಗೆ ನಷ್ಟ. ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.


೭ತುಲಾ:

   ಎಚ್ಚರ ಒಳ್ಳೆಯದು, ಆದರೆ ನಿಧಾನಗತಿ ಬೇಡ. ಅಕಸ್ಮಾತ್ ಧನಪ್ರಾಪ್ತಿ. ವಿತ್ತ ಸಂಸ್ಥೆಯ ನೆರವಿನಿಂದ  ವ್ಯವಹಾರ ವಿಸ್ತರಣೆ. ಅವಿವಾಹಿತರಿಗೆ ವಿವಾಹ ಯೋಗ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಸಮಾಜ ಸೇವೆಗೆ ಸಮಯ ಮೀಸಲು. ಗಣೇಶ ಪಂಚರತ್ನ,  ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ. 


೮.ವೃಶ್ಚಿಕ:

  ಮನಸ್ಸನ್ನು ಮುದುಡಿಸಿಕೊಳ್ಳದಿರಿ.  ಉದ್ಯಮ  ಭರದಲ್ಲಿ ಮುನ್ನಡೆ.   ಉತ್ಪನ್ನಗಳ ಗುಣಮಟ್ಟಕ್ಕೆ ಸರ್ವತ್ರ  ಶ್ಲಾಘನೆ.  ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ. ಗೃಹೋದ್ಯಮ ಉತ್ಪನ್ನಗಳ ಜನಪ್ರಿಯತೆ ವರ್ಧನೆ. ಸಣ್ಣ ಪ್ರಮಾಣದ ಕೃಷಿಯಿಂದ ಸಂಸಾರಕ್ಕೆ ಅನುಕೂಲ. ಗಷಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

೯. ಧನು:

  ವಾತಾವರಣದಲ್ಲಿ ಅಸ್ಥಿರತೆ. ಆತ್ಮೀಯರಿಂದ  ಸಕಾಲದಲ್ಲಿ ಸಹಾಯ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಸಣ್ಣ ಪ್ರಮಾಣದ  ಉದ್ಯಮಗಳ ಅಭಿವೃದ್ಧಿ. ದೀರ್ಘಕಾಲದ ಕೌಟುಂಬಿಕ ಸಮಸ್ಯೆಗೆ ಪರಿಹಾರ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.


೧೦. ಮಕರ:

 ಉದ್ಯೋಗ ಸ್ಥಾನದಲ್ಲಿ ಕೆಲಸದ ಒತ್ತಡವಿದ್ದರೂ ನೆಮ್ಮದಿ. ಉದ್ಯಮಿಗಳಿಗೆ ಶುಭದಿನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ.‌ ಕೃಷ್ಯುತ್ಪನ್ನಗಳ ಮಾರಾಟದಿಂದ ಉತ್ತಮ ಲಾಭ. ದ್ರವಪದಾರ್ಥ ವ್ಯಾಪಾರಿಗಳಿಗೆ  ಇಮ್ಮಡಿ ಲಾಭ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧.ಕುಂಭ:

ಮೂಲಗಳು ಹಲವಿದ್ದರೂ ಒಂದರಿಂದ ಅಧಿಕ ಅದಾಯ.  ಸರಕಾರಿ ನೌಕರರಿಗೆ ಕೆಲಸದ ಹೊರೆ. ಉದ್ಯಮಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ನ್ಯಾಯಾಲಯ ವ್ಯವಹಾರದಲ್ಲಿ ಜಯ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ. 
ಗಣಪತಿ ಅಥರ್ವಶೀರ್ಷ, ನರಸಿಂಹ ಸ್ತೋತ್ರ, ಶನಿಮಹಾತ್ಮೆ ಓದಿ.


೧೨.ಮೀನ:

ಉದ್ಯೋಗ ಸ್ಥಾನದಲ್ಲಿ‌ ಅನುಕೂಲ. ಸರಕಾರಿ ಅಧಿಕಾರಿಗಳಿಗೆ ಜನಗೌರವ. ಬಂಧುವರ್ಗದಲ್ಲಿ ಶುಭಕಾರ್ಯ. ಜನಸೇವೆಯ ಕಾರಣದಿಂದ ಸರ್ವಜನ ಮನ್ನಣೆ. ಕೃಷಿಭೂಮಿಗೆ ಜಲಮೂಲ ಪ್ರಾಪ್ತಿ. ಗಷೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.