Cocktel-2: ಕಾಕ್‌ಟೇಲ್-2 OTTಗೆ ಬರಲು ಸಿದ್ದ

Cocktel-2: ಬಾಲಿವುಡ್‌ನ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ಕಾಕ್‌ಟೇಲ್-2' ಒಟಿಟಿಗೆ ಬರಲು ಸಿದ್ದವಾಗಿದೆ. ಇದೇ ಆಗಸ್ಟ್‌ 14 ರಂದು ನೆಟ್‌ಫ್ಲಿಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

Aug 3, 2026 - 17:52
Cocktel-2: ಕಾಕ್‌ಟೇಲ್-2 OTTಗೆ ಬರಲು ಸಿದ್ದ
ಚಿತ್ರ ಕೃಪೆ: ಎಕ್ಸ್/ OTTRelease

ಬಾಲಿವುಡ್‌ನ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಕಾಕ್‌ಟೇಲ್-2 (Cocktail-2) ಒಟಿಟಿಗೆ ಬರಲು ಸಿದ್ದವಾಗಿದೆ. ಇದೇ ಆಗಸ್ಟ್‌ 14 ರಂದು ನೆಟ್‌ಫ್ಲಿಕ್ಸ್ (Netflix) ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. 

ಜೂನ್ 19 ರಂದು ಈ ಚಿತ್ರವು ರಿಲೀಸ್ ಆಗಿತ್ತು. ಪ್ರೇಷಕರು ಫುಲ್ ಫಿದಾ ಮನಸೊತ್ತಿದ್ದು, ಬಾಕ್ಸ್ ಆಫೀಸ್‌ನಲ್ಲೂ ಅಬ್ಬರಿಸಿತ್ತು. ವಿಶ್ವದಾದ್ಯಂತ ರೂ.166.34 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು. 

ಹೋಮಿ ಅದಜಾನಿಯಾ ಆಕ್ಷನ್ ಕಟ್ ಹೇಳಿದ್ದು, ಮ್ಯಾಡಾಕ್ ಫಿಲ್ಮ್ಸ್ & ಲವ್ ಫಿಲ್ಮ್ಸ್ ಬ್ಯಾನರ್‌ನಡಿ ನಿರ್ಮಿಸಲಾಗಿದೆ. ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಪ್ರೀತಂ ಸಂಗೀತ ನೀಡಿದ್ದು, ಅನಿಲ್ ಮೆಹ್ತಾ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಇಮ್ತಿಯಾಜ್ ಅಲಿ ಮತ್ತು ಸಾಜಿದ್ ಅಲಿ ಸಂಭಾಷಣೆ ಬರೆದಿದ್ದಾರೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.