ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಆಮದು ಸುಂಕದಿಂದ ವಿನಾಯಿತಿ

ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಪೆಟ್ರೋಕೆಮಿಕಲ್ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯ ಆಗಿ ಬೆಲೆಗಳು ಏರಿವೆ. ಈ ಸಂಕಟ ಕಡಿಮೆ ಮಾಡಲು ಸರ್ಕಾರ ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೂನ್ಯಕ್ಕೆ ಇಳಿಸಿದೆ. ಪ್ಲಾಸ್ಟಿಕ್, ಪಾಲಿಥೀನ್ ಇತ್ಯಾದಿ ಅನೇಕ ಉದ್ಯಮಗಳಿಗೆ ಈ ಕ್ರಮದಿಂದ ಅನುಕೂಲವಾಗಲಿದೆ

Apr 2, 2026 - 13:51
ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಆಮದು ಸುಂಕದಿಂದ ವಿನಾಯಿತಿ
import duty

ಪಶ್ಚಿಮ ಏಷ್ಯಾದಲ್ಲಿ ಯುದ್ಧ ಭೀತಿ ತಪ್ಪದ ಹಿನ್ನೆಲೆಯಲ್ಲಿ ತೈಲ, ಅನಿಲ ಹಾಗೂ ಪೆಟ್ರೋಕೆಮಿಕಲ್ ಪೂರೈಕೆ ವ್ಯವಸ್ಥೆಕ್ಕೆ ಧಕ್ಕೆಯಾಗಿದೆ. ಪೆಟ್ರೋಕೆಮಿಕಲ್ ಆಮದು ವೆಚ್ಚ ಬಹಳ ಹೆಚ್ಚಾಗುತ್ತಿದ್ದು, ಇದರ ಮೇಲೆ ಅವಲಂಬಿತವಾಗಿರುವ ಉದ್ಯಮಗಳಿಗೆ ರಿಲೀಫ್ ನೀಡುವ ಸಲುವಾಗಿ ಸರ್ಕಾರ ಆಮದು ಸುಂಕ ವಿನಾಯಿತಿ ಕ್ರಮ ತೆಗೆದುಕೊಳ್ಳುತ್ತಿದೆ. ಇಂದು ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಕೆಲ ಪ್ರಮುಖ ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲೆ ಪೂರ್ಣ ಆಮದು ಸುಂಕ ವಿನಾಯಿತಿ ಕೊಡಲಿದೆ.

2026ರ ಜೂನ್ 30ರವರೆಗೂ ಆಯ್ದೆ ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲೆ ಆಮದು ಸುಂಕ ಇರುವುದಿಲ್ಲ. ಈ ಕ್ರಮದಿಂದ ದೇಶೀಯ ಉತ್ಪಾದಕರಿಗೆ ಉತ್ಪಾದನಾ ವೆಚ್ಚ ಏರಿಕೆಯಾಗುವುದು ತಪ್ಪುವ ನಿರೀಕ್ಷೆ ಇದೆ.

ಪೆಟ್ರೋಕೆಮಿಕಲ್ ಉತ್ಪನ್ನಗಳು ಅನೇಕ ಮ್ಯಾನುಫ್ಯಾಕ್ಚರಿಂಗ್ ಉದ್ಯಮಗಳಿಗೆ ಕಚ್ಛಾ ಸಾಮಗ್ರಿಗಳಾಗಿ ಬಳಕೆಯಾಗುತ್ತವೆ. ಭಾರತದಲ್ಲಿ ಸಾಕಷ್ಟು ರಿಫೈನರಿಗಳು ಇವೆಯಾದರೂ, ಅದಕ್ಕೆ ಬೇಕಾದ ಹೆಚ್ಚಿನ ಪೆಟ್ರೋಕೆಮಿಕಲ್ ಸ್ಟಾಕ್​ಗಳು ಗಲ್ಫ್ ರಾಷ್ಟ್ರಗಳಿಂದ ಪೂರೈಕೆಯಾಗುತ್ತದೆ. ಅದರಲ್ಲೂ ಬಹಳ ಮುಖ್ಯವಾದ ಶೇ. 45ರಷ್ಟು ಸರಕುಗಳು ಆಮದಾಗುತ್ತವೆ. ಇವುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಬೆಲೆಗಳೂ ಏರಿವೆ. ಈ ಬೆಲೆ ಏರಿಕೆ ಬಿಸಿ ಕಡಿಮೆ ಮಾಡಲು ಸರ್ಕಾರವು ಕಸ್ಟಮ್ಸ್ ಡ್ಯೂಟಿಯನ್ನು ಹಿಂಪಡೆದುಕೊಂಡಿದೆ.

ಪೆಟ್ರೋಕೆಮಿಕಲ್ ಉತ್ಪನ್ನಗಳಾದ ಮೆಥನಾಲ್, ಅಸಿಟಿಕ್ ಆ್ಯಸಿಟ್, ಮಾನೊಎಥಿಲಿನ್ ಕ್ಲೈಕೋಲ್, ಪ್ಯೂರಿಫೈಡ್ ಟೆರೆಫ್ತಾಲಿಕ್ ಆ್ಯಸಿಡ್, ಪಾಲಿಥೀನ್, ಪಾಲಿಪ್ರೊಪಿಲೀನ್ ಮತ್ತು ಪಿವಿಸಿಗಳಿಗೆ ಆಮದು ಸುಂಕದಿಂದ ವಿನಾಯಿತಿ ಕೊಡಲಾಗಿದೆ.

ಸರ್ಕಾರದ ಈ ಕ್ರಮದಿಂದ ಹಲವು ಉದ್ಯಮಗಳಿಗೆ ಅನುಕೂಲವಾಗಲಿದೆ. ಪ್ಲಾಸ್ಟಿಕ್ಸ್, ಪ್ಯಾಕೇಜಿಂಗ್, ಟೆಕ್ಸ್​ಟೈಲ್ಸ್, ಫಾರ್ಮಾ, ಕೆಮಿಕಲ್ಸ್, ಆಟೊಮೋಟಿವ್ ಕಾಂಪೊನೆಂಟ್ ಹಾಗೂ ಇನ್ನೂ ಹಲವು ಮ್ಯಾನುಫ್ಯಾಕ್ಚರಿಂಗ್ ಉದ್ದಿಮೆಗಳಿಗೆ ಲಾಭವಾಗಲಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.