ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಮಹಾಸಭೆ: ರೂ.150 ಕೋಟಿ ವ್ಯವಹಾರ.. ರೂ.1.32 ಕೋಟಿ ಲಾಭ
Puttur Co-operative Town Bank: 'ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್'ನ 2025-26ನೇ ಸಾಲಿನ ವಾರ್ಷಿಕ ಮಹಾಸಭೆ, ಸೋಮವಾರ ಬ್ಯಾಂಕಿನ ಸಭಾಂಗಣದಲ್ಲಿ ಅಧ್ಯಕ್ಷ ಎನ್.ಕಿಶೋರ್ ಕೊಳತ್ತಾಯ ನೇತೃತ್ವದಲ್ಲಿ ಜರುಗಿತು.
ಪುತ್ತೂರು: ಇಲ್ಲಿನ 'ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್'ನ 2025-26ನೇ ಸಾಲಿನ ವಾರ್ಷಿಕ ಮಹಾಸಭೆ, ಸೋಮವಾರ ಬ್ಯಾಂಕಿನ ಸಭಾಂಗಣದಲ್ಲಿ ಅಧ್ಯಕ್ಷ ಎನ್.ಕಿಶೋರ್ ಕೊಳತ್ತಾಯ ನೇತೃತ್ವದಲ್ಲಿ ಜರುಗಿತು. ಈ ಬಾರಿ ರೂ.150 ಕೋಟಿ ವ್ಯವಹಾರ ನಡೆದಿದ್ದು, ರೂ.1.32 ಕೋಟಿ ಲಾಭವಾಗಿದೆ.
'ಬ್ಯಾಂಕ್‌ನಲ್ಲಿ ವರ್ಷಾಂತ್ಯದಲ್ಲಿ ರೂ.62 ಕೋಟಿ ಸಾಲ ಹೊರಬಾಕಿ ಮತ್ತು ರೂ.88 ಕೋಟಿ ಠೇವಣಿಯಿದೆ. ಈ ಸಾಧನೆಗೆ ಸದಸ್ಯರು, ಗ್ರಾಹಕರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಪರಿಶ್ರಮ ಕಾರಣವಾಗಿದೆ' ಎಂದು ಅಧ್ಯಕ್ಷರು ಸಭೆಯಲ್ಲಿ ಹೇಳಿದರು.
ಸದಸ್ಯರಿಗೆ ಈ ಬಾರಿ ಶೇಕಡ 12% ಡಿವಿಡೆಂಡ್ ಘೋಷಣೆ ಮಾಡಿದರು.
'ಮುಂದಿನ ದಿನಗಳಲ್ಲಿ ಹೊಸ ಶಾಖೆ ತೆರೆಯುವುದು, ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ, ಸದಸ್ಯರ ಮಕ್ಕಳಿಗೆ ಕೃತಕ ಬುದ್ಧಿಮತ್ತೆ ಕೋರ್ಸ್ ಹಾಗೂ ವೃತ್ತಿ ಮಾರ್ಗದರ್ಶನ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತ ಸದಸ್ಯರಿಗೆ ವಿಮಾ ಸೌಲಭ್ಯ ಒದಗಿಸಲಾಗುವುದು' ಎಂದು ಅವರು ತಿಳಿಸಿದರು.

ಬ್ಯಾಂಕ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಶೇಖರ್ ಶೆಟ್ಟಿ 2025-26ನೇ ಸಾಲಿನ ವರದಿ ಮಂಡಿಸಿದರು. 'ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕಿನ ಠೇವಣಿ ಮತ್ತು ವಹಿವಾಟಿನಲ್ಲಿ ಒಟ್ಟು ಶೇಕಡ 18% ಪ್ರಗತಿ ಸಾಧಿಸಲಾಗಿದೆ. ಇದು ಬ್ಯಾಂಕ್‌ನ ಇತಿಹಾಸದಲ್ಲೇ ದಾಖಲೆಯಾಗಿದೆ' ಎಂದರು.
'ಈ ವರ್ಷ ಲಕ್ನೋದಲ್ಲಿ ನಡೆದ ಪಟ್ಟಣ ಸಹಕಾರಿ ಬ್ಯಾಂಕ್‌ಗಳ ರಾಷ್ಟ್ರೀಯ ಸಮ್ಮೇಳನದಲ್ಲಿ, ಬ್ಯಾಂಕು 5 ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್‌ನ ಸ್ವಂತ ಕ್ಯೂ-ಆರ್‌ಕೋಡ್ ಶುರು ಮಾಡಲಾಗುವುದು ಎಂದು ಹೇಳಿದರು.

ಈ ಸಭೆಯಲ್ಲಿ ಹಿರಿಯ ಸದಸ್ಯರಾದ ವಾಲ್ಟರ್ ಡಿಸೋಜ, ಜೋನ್ ಪಾಯಿಸ್, ಕಮಲಾಕ್ಷ ಬಲ್ಲಾಯ, ಎಂ.ಜಗದೀಶ್ ಶೆಣೈ, ಗಣಪತಿ ಪ್ರಭು, ಎಂ.ಗೋಪಾಲಕೃಷ್ಣ, ಪಿ.ಅಬೂಬಕರ್, ಸಂಜೀವ ಪೂಜಾರಿ, ಎಂ.ಸುರೇಶ್, ಡಾ.ಯು.ಪಿ.ಶಿವಾನಂದ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ನೀಡಲಾಯಿತು.
ನಿರ್ದೇಶಕರಾದ ಕಿರಣ್ ಕುಮಾರ್ ರೈ , ರಾಮಚಂದ್ರ ಕಾಮತ್, ರಾಜು ಶೆಟ್ಟಿ, ಸುಜೇಂದ್ರ ಪ್ರಭು, ಮಲ್ಲೇಶ್ ಕುಮಾರ್, ಶ್ರೀಧರ್ ಪಟ್ಲ, ಹರೀಶ್ ಬಿಜತ್ರೆ, ಸೀಮಾ ನಾಗರಾಜ್, ಕುಡ್ಪಿ ಹಾಗೂ ವಿಶ್ವಾಸ್ ಶೆಣೈ ಉಪಸ್ಥಿತರಿದ್ದರು.

ಬ್ಯಾಂಕ್‌ನ ಉಪಾಧ್ಯಕ್ಷ ಶ್ರೀಧರ್ ಗೌಡ ಕಣಜಾಲು ಸ್ವಾಗತಿಸಿದರು. ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ ವಂದಿಸಿದರು. ಪುತ್ತೂರು ಶಾಖೆಯ ಪ್ರಬಂಧಕ ಚಿದಂಬರ ಹಾಗೂ ಎಜಿಎಂ. ಚೇತನ್ ಸಭೆಯನ್ನು ನಿರ್ವಹಿಸಿದರು. ವಿಟ್ಲ ಶಾಖೆಯ ಪ್ರಬಂಧಕಿ ಎನ್.ಎಸ್.ಜ್ಯೋತಿ ಹಾಗೂ ಹಿರಿಯ ಸಹಾಯಕ ಬಿ.ಪವನ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.