Unnathi Forest View: ಪ್ರಕೃತಿ ಮಡಿಲಲ್ಲಿ ಕಾಲ ಕಳೆಯಬೇಕೇ.. ಸಕಲೇಶಪುರದ ಉನ್ನತಿ ಫಾರೆಸ್ಟ್ ವ್ಯೂ ಬೆಸ್ಟ್ ಚಾಯ್ಸ್!
Unnathi Forest View: ಪ್ರಕೃತಿ ಮಡಿಲಲ್ಲಿ ಕಾಲ ಕಳೆಯಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, ಸಕಲೇಶಪುರದ ಉನ್ನತಿ ಫಾರೆಸ್ಟ್ ವ್ಯೂ ಅತ್ಯುತ್ತಮ ಆಯ್ಕೆಯಾಗಲಿದೆ.
ಸಕಲೇಶಪುರ: ನಗರದ ದೈನಂದಿನ ಜಂಜಾಟ, ಒತ್ತಡ & ಗದ್ದಲದಿಂದ ಕೊಂಚ ದೂರ ಸರಿದು, ಕುಟುಂಬ ಸಮೇತರಾಗಿ ನೆಮ್ಮದಿಯ ಕ್ಷಣಗಳನ್ನು ಕಳೆಯಬೇಕು ಎನ್ನುವವರಿಗೆ ಪ್ರಕೃತಿಯ ಮಡಿಲಿನ ಪ್ರವಾಸಿ ತಾಣಗಳೇ ಮೊದಲ ಆಯ್ಕೆ. ಅದರಲ್ಲೂ ನದಿ, ದಟ್ಟ ಕಾಡು, ಹಸಿರು ಬೆಟ್ಟಗಳು ಮತ್ತು ಕಾಫಿ ತೋಟಗಳ ನಡುವೆ ಒಂದಿಷ್ಟು ಸಮಯ ಕಳೆಯುವ ಅನುಭವವೇ ವಿಭಿನ್ನ.
ಇಂತಹ ಪ್ರಕೃತಿ ಸೌಂದರ್ಯದ ನಡುವೆ, ಸಕಲೇಶಪುರದಿಂದ ಸುಮಾರು 15 ಕಿ.ಮೀ. ದೂರದ ಪಶ್ಚಿಮ ಘಟ್ಟದ ತಪ್ಪಲಿನ ಮಾರನಹಳ್ಳಿಯಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಉನ್ನತಿ ಫಾರೆಸ್ಟ್ ವ್ಯೂ (Unnathi Forest View).

ಹೆಸರಿಗಷ್ಟೇ ಹೋಮ್‌ಸ್ಟೇ - ರೆಸಾರ್ಟ್‌ನ್ನು ಮೀರಿಸುತ್ತೆ:
ಸುತ್ತಲೂ ಹಸಿರು ಕಾಡು, ಕಾಫಿ ಎಸ್ಟೇಟ್‌ಗಳು, ಪ್ರಕೃತಿಯ ನಿಶ್ಶಬ್ದತೆಯ ನಡುವೆ ನೆಲೆಸಿರುವ ಈ ತಾಣವು ಕುಟುಂಬ, ಸ್ನೇಹಿತರು ಹಾಗೂ ಪ್ರಕೃತಿ ಪ್ರಿಯರಿಗೆ ವಿಶ್ರಾಂತಿಯ ಜೊತೆಗೆ ಮನರಂಜನೆಯನ್ನೂ ಒದಗಿಸುವಂತಿದೆ. ಇಲ್ಲಿ 8 ಕೊಠಡಿಗಳಿದ್ದು, ವಿವಿಧ ರೀತಿಯ ಕಾಟೇಜ್‌ಗಳು, ಕಪಲ್ ರೂಮ್‌ಗಳು, ಟೆಂಟ್ ಹೌಸ್ ಮತ್ತು ಡಾರ್ಮಿಟರಿ ವಸತಿ ವ್ಯವಸ್ಥೆಗಳಿವೆ.
ಒಂದೇ ತಾಣ - ಹತ್ತಾರು ಅನುಭವ:
ಉನ್ನತಿ ಫಾರೆಸ್ಟ್ ವ್ಯೂನ ಪ್ರಮುಖ ಆಕರ್ಷಣೆ ಎಂದರೆ, ಪ್ರಕೃತಿಯ ಸೌಂದರ್ಯದ ಜೊತೆಗೆ ಮನರಂಜನೆಗೂ ಹೆಚ್ಚಿನ ಆದ್ಯತೆ ನೀಡಿರುವುದು. ಈಜುಕೊಳದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಮೋಜು ಮಾಡಬಹುದು. ಬೋಟಿಂಗ್, ಬ್ಯಾಡ್ಮಿಂಟನ್, ಕ್ರಿಕೆಟ್, ಚೆಸ್, ಕ್ಯಾರಮ್ ಸೇರಿದಂತೆ ಒಳಾಂಗಣ ಹಾಗೂ ಹೊರಾಂಗಣ ಚಟುವಟಿಕೆಗಳಿಗೂ ಅವಕಾಶವಿದೆ. ಸಂಜೆ ಬಾನ್‌ಫೈರ್ ಸುತ್ತ ಕುಳಿತು ಕುಟುಂಬ ಅಥವಾ ಸ್ನೇಹಿತರೊಂದಿಗೆ ಸಮಯ ಕಳೆಯಬಹುದು.

ಪ್ರಕೃತಿಯ ನಡುವೆ ನೆಮ್ಮದಿಯಿಂದ ಕಾಲ ಕಳೆಯಲು ಇಚ್ಛಿಸುವವರಿಗೆ, ಇಲ್ಲಿನ ಕಾಫಿ ತೋಟಗಳ ವಾತಾವರಣವೇ ಮತ್ತೊಂದು ವಿಶೇಷ ಅನುಭವ ನೀಡುತ್ತದೆ. ಹಸಿರಿನ ನಡುವೆ ಹೆಜ್ಜೆ ಹಾಕುತ್ತಾ, ತಂಪಾದ ಗಾಳಿಯನ್ನು ಆಸ್ವಾದಿಸುತ್ತಾ, ನಗರದ ಗದ್ದಲವನ್ನು ಮರೆತು ಒಂದಷ್ಟು ಹೊತ್ತು ಪ್ರಕೃತಿಯೊಂದಿಗೆ ಬೆರೆಯಬಹುದಾಗಿದೆ. ಪ್ರಕೃತಿ ಮನೋಹರ ಸೊಬಗನ್ನು ನೋಡುತ್ತ ನಿಂತರೆ ಸಮಯ ಕಳೆದು ಹೋಗಿರುವುದೇ ಗೊತ್ತಾಗುವುದಿಲ್ಲ. ಅಂಥಹ ನೇಚರ್ ವೈಬ್ ಅನ್ನು ಈ ಜಾಗ ಹೊಂದಿದೆ.
ಕುಟುಂಬದೊಂದಿಗೆ ನೆಮ್ಮದಿಯ ಪ್ರವಾಸ:
ಮಕ್ಕಳೊಂದಿಗೆ ಬರುವ ಕುಟುಂಬಗಳಿಗೆ ಆಟ-ಮನರಂಜನೆಯ ಅವಕಾಶಗಳಿದ್ದರೆ, ದಂಪತಿಗಳಿಗೆ ಪ್ರಕೃತಿಯ ಪ್ರಶಾಂತ ವಾತಾವರಣ ಆಕರ್ಷಣೆ. ಸ್ನೇಹಿತರ ಬಳಗಕ್ಕೆ ಬೋಟಿಂಗ್, ಕ್ರೀಡೆಗಳು ಮತ್ತು ಬಾನ್‌ಫೈರ್‌ನಂತಹ ಚಟುವಟಿಕೆಗಳು ಪ್ರವಾಸವನ್ನು ಇನ್ನಷ್ಟು ಸ್ಮರಣೀಯವಾಗಿಸುತ್ತವೆ.

ಇದರೊಂದಿಗೆ ವಸತಿ, ಆಹಾರ ಮತ್ತು ಮನರಂಜನೆ ಸೇರಿದಂತೆ ಪ್ರವಾಸಿಗರಿಗೆ ಅಗತ್ಯವಿರುವ ಹಲವು ಸೌಲಭ್ಯಗಳು ಒಂದೇ ತಾಣದಲ್ಲಿ ದೊರೆಯುವ ವ್ಯವಸ್ಥೆಯೂ ಇಲ್ಲಿದೆ. ವಿವಿಧ ವಸತಿ ಆಯ್ಕೆಗಳ ಜೊತೆಗೆ, ಊಟದ ವ್ಯವಸ್ಥೆಯೂ ಲಭ್ಯವಿದೆ.
ನಗರದಿಂದ ದೂರ - ಪ್ರಕೃತಿಗೆ ಹತ್ತಿರ:
ಒಟ್ಟಿನಲ್ಲಿ, 'ರಜೆ' ಎಂದರೆ ಕೇವಲ ಒಂದು ಕೊಠಡಿಯಲ್ಲಿ ಉಳಿಯುವುದಲ್ಲ. ಪ್ರಕೃತಿಯನ್ನು ಅನುಭವಿಸುವುದು ಹೌದು. ಅಂತಹವರಿಗೆ ಉನ್ನತಿ ಫಾರೆಸ್ಟ್ ವ್ಯೂ ವಿಭಿನ್ನ ಅನುಭವ ನೀಡುವ ನೇಚರ್‌ಗೆ ಬಹಳ ಹತ್ತಿರವಾಗಿರುವ ತಾಣವಾಗಿದೆ.
ಸಕಲೇಶಪುರದ ಪಶ್ಚಿಮ ಘಟ್ಟದ ಹಸಿರಿನ ನಡುವೆ, ಕುಟುಂಬದವರೊಂದಿಗೆ ಒಂದಿಷ್ಟು ನೆಮ್ಮದಿ, ಸ್ನೇಹಿತರೊಂದಿಗೆ ಒಂದಿಷ್ಟು ಮೋಜು, ಪ್ರಕೃತಿಯೊಂದಿಗೆ ಒಂದಿಷ್ಟು ಆತ್ಮೀಯತೆ - ಈ ಮೂರನ್ನು ಒಂದೇ ಕಡೆ ಅನುಭವಿಸಬೇಕೆಂದರೆ, ಮಾರನಹಳ್ಳಿಯ ಉನ್ನತಿ ಫಾರೆಸ್ಟ್ ವ್ಯೂ ಪ್ರವಾಸದ ಪಟ್ಟಿಗೆ ಸೇರಿಸಬಹುದಾದ ಅತ್ಯುತ್ತಮ ಜಾಗವೆಂದು ಹೇಳಿದರೂ ತಪ್ಪಾಗುವುದಿಲ್ಲ.

'ಉನ್ನತಿ ಫಾರೆಸ್ಟ್ ವ್ಯೂ' ಯುವ ಉದ್ಯಮಿ ಹೆಚ್.ಎಲ್.ದರ್ಶನ್‌ರ ಪರಿಶ್ರಮದ ಕನಸು:
ಉನ್ನತಿ ಫಾರೆಸ್ಟ್ ವ್ಯೂ ಕೇವಲ ಒಂದು ಹೋಮ್‌ಸ್ಟೇ ಅಥವಾ ಪ್ರವಾಸಿ ತಾಣವಲ್ಲ. ಇದರ ಹಿಂದೆ ತನ್ನ ಹುಟ್ಟೂರಿನ ಪ್ರಕೃತಿ ಸೌಂದರ್ಯವನ್ನು ಪ್ರವಾಸಿಗರಿಗೆ ಪರಿಚಯಿಸಬೇಕು ಎಂಬ ಕನಸೊಂದಿದೆ. ಆ ಕನಸಿಗೆ ರೂಪ ನೀಡಿದವರು ಯುವ ಉದ್ಯಮಿ ಹೆಚ್.ಎಲ್. ದರ್ಶನ್.
ಮೂಲತಃ ಸಕಲೇಶಪುರದವರಾದ ಅವರು, ತಾವು ಹುಟ್ಟಿ ಬೆಳೆದ ಪರಿಸರದೊಂದಿಗೆ, ಬಾಲ್ಯದಿಂದಲೇ ಬೆಸೆದುಕೊಂಡವರು. ಪಶ್ಚಿಮ ಘಟ್ಟದ ಹಸಿರು, ಕಾಫಿ ತೋಟಗಳು, ಕಾಡು, ನದಿಯ ಜುಳುಜುಳು ಹರಿವು ಹಾಗೂ ನೈಸರ್ಗಿಕ ಸೌಂದರ್ಯವನ್ನು ಕೇವಲ ನೋಡುತ್ತಾ ಆನಂದಿಸುವುದಕ್ಕಿಂತ, ಈ ಸೊಬಗನ್ನು ಹೊರಜಗತ್ತಿನ ಪ್ರವಾಸಿಗರಿಗೂ ಪರಿಚಯಿಸಬೇಕು ಎಂಬ ಆಲೋಚನೆಯೇ 'ಉನ್ನತಿ ಫಾರೆಸ್ಟ್ ವ್ಯೂ' ಪರಿಕಲ್ಪನೆಗೆ ಕಾರಣವಾಯಿತು.

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ, ತಮ್ಮದೇಯಾದ ಹೆಚ್‌ಆರ್ (ಹ್ಯೂಮನ್ ರಿಸೋರ್ಸ್) ಸಂಸ್ಥೆಯನ್ನು ಆರಂಭಿಸಿ ದರ್ಶನ್ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಹಾದಿ ಕಂಡುಕೊಂಡಿದ್ದಾರೆ. ಇದೀಗ ಹುಟ್ಟೂರಿನಲ್ಲೇ ವಿಭಿನ್ನವಾದ ಪ್ರವಾಸೋದ್ಯಮ ಪರಿಕಲ್ಪನೆಗೆ ಜೀವ ತುಂಬಿದ್ದಾರೆ.
ವ್ಯವಹಾರವನ್ನು ಕೇವಲ ಲಾಭದ ದೃಷ್ಟಿಯಿಂದ ನೋಡದೆ, ತಮ್ಮೂರಿನ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಂಡೇ ಪ್ರವಾಸಿಗರಿಗೆ ಉತ್ತಮ ಅನುಭವ ನೀಡಬೇಕು ಎಂಬ ಕಾಳಜಿಯೊಂದಿಗೆ ಉನ್ನತಿ ಫಾರೆಸ್ಟ್ ವ್ಯೂ ರೂಪುಗೊಂಡಿದೆ. ಪ್ರಕೃತಿಯ ಮಡಿಲಲ್ಲಿ ನೆಮ್ಮದಿ ಅರಸುವ ಕುಟುಂಬಗಳು, ಸ್ನೇಹಿತರ ಬಳಗಗಳು ಹಾಗೂ ಪ್ರವಾಸಿ ಪ್ರಿಯರಿಗೆ ವಿಭಿನ್ನ ಅನುಭವ ನೀಡಬೇಕು ಎನ್ನುವುದು ದರ್ಶನ್ ಅವರ ಆಶಯವಾಗಿದೆ.

ಹೀಗಾಗಿ, ಸಕಲೇಶಪುರದ ಪ್ರಕೃತಿಯನ್ನು ಮತ್ತಷ್ಟು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಮುಂದಾಗಿರುವ ಯುವ ಉದ್ಯಮಿ ದರ್ಶನ್ ಅವರ ಕಾಳಜಿಗೆ ಶಾಭಾಸ್ ಎನ್ನೋಣ.
ತಮ್ಮ ಹುಟ್ಟೂರಿನ ಪ್ರಕೃತಿ ಸೌಂದರ್ಯಕ್ಕೆ ಹೊಸ ಆಯಾಮ ನೀಡುವ ಈ ಪ್ರಯತ್ನ ಮತ್ತಷ್ಟು ಯಶಸ್ಸು ಕಾಣಲಿ. ಉನ್ನತಿ ಫಾರೆಸ್ಟ್ ವ್ಯೂ ಪ್ರವಾಸಿಗರ ನೆಚ್ಚಿನ ತಾಣವಾಗಿ ಬೆಳೆಯಲಿ ಎಂಬುದು ನಮ್ಮ ಹಾರೈಕೆಯಾಗಿದೆ. ಪ್ರಕೃತಿಯ ಮೇಲಿನ ಪ್ರೀತಿ, ಊರಿನ ಮೇಲಿನ ಅಭಿಮಾನ ಮತ್ತು ಹೊಸತನದ ಉದ್ಯಮಶೀಲತೆ- ಈ ಮೂರರ ಸಂಗಮವೇ ಉನ್ನತಿ ಫಾರೆಸ್ಟ್ ವ್ಯೂ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.