Today Gold Price: ಇಂದು ಚಿನ್ನ - ಬೆಳ್ಳಿ ಬೆಲೆ ಇಳಿಕೆ

Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಶುಕ್ರವಾರ) ಚಿನ್ನ ಹಾಗೂ ಬೆಳ್ಳಿ ಬೆಲೆಯೂ ಭಾರೀ ಇಳಿಕೆಯಾಗಿದೆ.

Aug 28, 2026 - 12:04
Aug 28, 2026 - 12:04
Today Gold Price: ಇಂದು ಚಿನ್ನ - ಬೆಳ್ಳಿ ಬೆಲೆ ಇಳಿಕೆ

ಬೆಂಗಳೂರು: ಶ್ರಾವಣ ಮಾಸದಲ್ಲಿ ಆಭರಣ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಲಭ್ಯವಾಗಿದೆ. ಚಿನಿವಾರ ಪೇಟೆಯಲ್ಲಿ ಇಂದು (ಶುಕ್ರವಾರ) ಚಿನ್ನ ಹಾಗೂ ಬೆಳ್ಳಿ ಬೆಲೆಯೂ ಭಾರೀ ಇಳಿಕೆಯಾಗಿದೆ. 

ರಾಜ್ಯದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.3,160 ಕಡಿಮೆಯಾಗಿ ರೂ.1,59,820 ಇದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.2,900 ಇಳಿಕೆಯಾಗಿ ರೂ.1,46,500ಕ್ಕೆ ತಲುಪಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.2,370 ಕಡಿಮೆಯಾಗಿ ರೂ.1,19,870 ಆಗಿದೆ. 

ಅದೇ ರೀತಿಯಲ್ಲಿ 1 ಕೆಜಿ ಬೆಳ್ಳಿಯೂ ರೂ.5,000 ಇಳಿಕೆಯಾಗಿ ರೂ.2,55,000 ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ.  

ಷೇರುಪೇಟೆ - ಸಕಾರತ್ಮಕ ವಹಿವಾಟು:

ಭಾರತದ ಷೇರುಪೇಟೆ ವಹಿವಾಟು ಇಂದು ಸಕಾರತ್ಮಕವಾಗಿದೆ. ಸೆನ್ಸೆಕ್ಸ್ 326.88 ಅಂಕಗಳು ಅಥವಾ ಶೇಕಡ 0.42% ಏರಿಕೆಯಾಗಿ 77,260.47 ಅಂಕಗಳಿಗೆ ತಲುಪಿದೆ. ನಿಫ್ಟಿ 70.20 ಅಂಕಗಳು ಅಥವಾ ಶೇಕಡ 0.29% ಹೆಚ್ಚಳವಾಗಿ 24,161.05 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. 

ಕೋಟಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಟೆಕ್ ಮಹೀಂದ್ರಾ, ಬಿಇಎಲ್ ಹಾಗೂ ಅದಾನಿ ಪೋರ್ಟ್ಸ್ ಷೇರುಗಳು ಲಾಭದಲ್ಲಿವೆ. ಹೆಚ್‌ಡಿಎಫ್‌ಸಿ ಬ್ಯಾಂಕ್, ಎನ್‌ಟಿಪಿಸಿ, ಎಂ&ಎಂ, ಭಾರ್ತಿ ಏರ್‌ಟೆಲ್ ಹಾಗೂ ಹೆಚ್‌ಸಿಎಲ್ ಟೆಕ್ ಷೇರುಗಳು ನಷ್ಟದಲ್ಲಿವೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.