ರಾಷ್ಟ್ರೀಯ ಕ್ರೀಡಾ ಪುರಸ್ಕಾರ ಪ್ರಕಟ: 17 ಜನರಿಗೆ ಅರ್ಜುನ ಪ್ರಶಸ್ತಿ
National Sports Awards Announced: ಕೇಂದ್ರ ಕ್ರೀಡಾ ಸಚಿವಾಲಯವು 2025ರ 'ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ'ಗಳನ್ನು ಇಂದು (ಮಂಗಳವಾರ) ಪ್ರಕಟಿಸಿದೆ.
ನವದೆಹಲಿ: ಕೇಂದ್ರ ಕ್ರೀಡಾ ಸಚಿವಾಲಯವು 2025ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಇಂದು (ಮಂಗಳವಾರ) ಪ್ರಕಟಿಸಿದೆ. ಒಟ್ಟು 17 ಕ್ರೀಡಾಪಟುಗಳಿಗೆ 'ಅರ್ಜುನ ಪ್ರಶಸ್ತಿ'ಯನ್ನು ಘೋಷಿಸಲಾಗಿದೆ. ಆದಾಗ್ಯೂ ಪ್ರತಿಷ್ಠಿತ 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ' ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಿಲ್ಲ.
ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ, ಆಯ್ಕೆ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಈ ಪುರಸ್ಕಾರ ನೀಡಲಾಗಿದೆ. ಅರ್ಜುನ ಪ್ರಶಸ್ತಿ ರೂ.15 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
'ಅರ್ಜುನ ಪ್ರಶಸ್ತಿ' ಪಡೆದವರು ಯಾರ್ಯಾರು?
ತೇಜಸ್ವಿನ್ ಶಂಕರ್ (ಅಥ್ಲೆಟಿಕ್ಸ್), ಮುಹಮ್ಮದ್ ಅಜ್ಮಲ್ (ಅಥ್ಲೆಟಿಕ್ಸ್), ಪ್ರಿಯಾಂಕಾ ಗೋಸ್ವಾಮಿ (ಅಥ್ಲೆಟಿಕ್ಸ್), ಟ್ರೀಸಾಜೊಲ್ಲಿ (ಬ್ಯಾಡ್ಮಿಂಟನ್), ಗಾಯತ್ರಿ ಗೋಪಿಚಂದ್ (ಬ್ಯಾಡ್ಮಿಂಟನ್), ನರೇಂದರ್ (ಬಾಕ್ಸಿಂಗ್), ವಿದಿತ್ ಸಂತೋಷ್ (ಚೆಸ್), ದಿವ್ಯಾ ಜಿತೇಂದ್ರ ದೇಶ್‌ಮುಖ್ (ಚೆಸ್), ಧನುಷ್ ಶ್ರೀಕಾಂತ್ (ಶೂಟಿಂಗ್), ಲಾಲ್ರೆಮ್ಸಿಯಾಮಿ (ಹಾಕಿ), ರಾಜಕುಮಾರ್ ಪಾಲ್ (ಹಾಕಿ), ಸುರ್ಜೀತ್ (ಕಬಡ್ಡಿ), ಪೂಜಾ (ಕಬಡ್ಡಿ), ರುದ್ರಾಂಶ್ ಖಂಡೇಲ್ವಾಲ್ (ಶೂಟಿಂಗ್), ಏಕ್ತಾಭ್ಯಾನ್ (ಅಥ್ಲೆಟಿಕ್ಸ್), ಅರವಿಂದ್ ಸಿಂಗ್ (ರೋಯಿಂಗ್) ಹಾಗೂ ಅಖಿಲ್ ಶಿಯೋರನ್ (ಶೂಟಿಂಗ್).
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.