ದಿನ ಭವಿಷ್ಯ: ಇಂದು ಯಾರಿಗೆ ಶುಭ ಫಲ?

Daily Horoscope: ಇಂದು (ಮಂಗಳವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Sep 29, 2026 - 10:04
ದಿನ ಭವಿಷ್ಯ: ಇಂದು ಯಾರಿಗೆ ಶುಭ ಫಲ?

ಮೇಷ:

ಪೂರ್ವಜರ ಸ್ಮರಣೆಯಿಂದ ಅನುಕೂಲ.. ಉದ್ಯಮಗಳಿಗೆ ಅನುಕೂಲದ ದಿನ. ಎಳೆಯರ ರಕ್ಷಣೆಗೆ ಗಮನ ಇರಲಿ ಪ್ರಕೃತಿಯ ಜೊತೆಯಲ್ಲಿ ಸಾಮರಸ್ಯದಿಂದ ಆನಂದ. ದೇವೀ ಕ್ಷೇತ್ರ ದರ್ಶನದ ಸಾಧ್ಯತೆ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.

ವೃಷಭ:

ಒಟ್ಟಿನಲ್ಲಿ ಆನಂಧ ದಿನ.. ಉದ್ಯೋಗ ಸ್ಥಾನದಲ್ಲಿ ಸಹಕಾರ. ಗೃಹೋದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ವೃತ್ತಿಪರರಿಗೆ ಸಮಯದ ಸವಾಲು. ದಂಪತಿಗಳ ನಡುವೆ ಅನುರಾಗ ವೃದ್ಧಿ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

ಮಿಥುನ:

ಎಲ್ಲವು ಹಿರಿಯರ ಪುಣ್ಯದ ಫಲ.. ಉದ್ಯಮಿಗಳ ಪಾಲಿಗೆ ಒಳ್ಳೆಯ ದಿನ ಅಕಸ್ಮಾತ್ ಧನಲಾಭ ಸಂಭವ. ಎಳೆಯರ ಮನೋವಿಕಾಸಕ್ಕೆ ಸೂಕ್ತ ಪ್ರಯತ್ನ. ಅನ್ಯರ ಭಾವನೆಗಳನ್ನು ಧಿಕ್ಕರಿಸದೆ ಗೌರವಿಸಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಹನುಮತ್ಕವಚ ಓದಿ.

ಕರ್ಕಾಟಕ:

ಉದ್ಯೋಗಸ್ಥರ ಕಾರ್ಯಗಳು ಸುಗಮ.. ಖಾದಿ ಉತ್ಪನ್ನ ವ್ಯಾಪಾರಿಗಳಿಗೆ ಲಾಭ. ಪೂರ್ವಜರ ಸ್ಮರಣೆಯಲ್ಲಿ ಭಾಗಿ. ಸದ್ಗ್ರಂಥ ವಾಚನದಲ್ಲಿ ಆಸಕ್ತಿ. ಹತ್ತಿರದ ಬಂಧುಗಳ ಕಡೆಯಿಂದ ಶುಭವಾರ್ತೆ. ಗಣೇಶ. ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಗುರುಸ್ತೋತ್ರ ಓದಿ.

ಸಿಂಹ:

ದಿನಕಳೆದಂತೆ ಹೆಚ್ಚಾಗುವ ಉತ್ಸಾಹ.. ನಿರಂತರ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ. ವಸ್ತ್ರ, ಆಭರಣಾದಿ ವ್ಯಾಪಾರಿಗಳಿಗೆ  ನಿರೀಕ್ಷೆ ಮೀರಿ ವ್ಯಾಪಾರ. ದ್ವಿಚಕ್ರ ವಾಹನ ದುರಸ್ತಿಗಾರರಿಗೆ ಅಧಿಕ ಲಾಭ. ಪ್ರಕೃತಿ ರಕ್ಷಣೆಯ ಪ್ರಯತ್ನಗಳಲ್ಲಿ ಭಾಗಿ. ಗಣೇಶ ಅಷ್ಟಕ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

ಕನ್ಯಾ:

ಕೃಷಿ ಆಧಾರಿತ ಉದ್ಯಮಗಳಿಗೆ ಅನುಕೂಲ.. ಗೃಹೋಪಕರಣ ಖರೀದಿಗೆ ಧನವ್ಯಯ ..ಹೊಲಿಗೆ ಕೆಲಸ ಬಲ್ಲವರಿಗೆ ಉದ್ಯೋಗಾವಕಾಶ. 
ರಕ್ಷಣಾ ವಿಭಾಗಗಳಲ್ಲಿ ಸೇವೆ ಸಲ್ಲಿಸುವವರಿಗೆ ಶುಭ..ಹಿರಿಯರ ಮನೆಯ ಪಿತೃಕಾರ್ಯದಲ್ಲಿ ಭಾಗಿ.ಗಣೇಶ ದ್ವಾದಶನಾಮ ಸ್ತೋತ್ರ , ಶಿವಪಂಚಾಕ್ಷರ ಸ್ತೋತ್ರ,  ಲಕ್ಷ್ಮೀಸ್ತೋತ್ರ ಓದಿ.

ತುಲಾ:

ತಾಳ್ಮೆ, ಸಮಯಸ್ಫೂರ್ತಿ ಎರಡೂ ಇರಲಿ.. ಕಸೂತಿ, ಕರಕೌಶಲದ ಕೆಲಸಗಳನ್ನು ಬಲ್ಲವರಿಗೆ ಬೇಡಿಕೆ. ಮಕ್ಕಳ ಬಹುಮುಖ ಪ್ರತಿಭೆ ಬೆಳವಣಿಗೆಗೆ ಪ್ರೋತ್ಸಾಹ. ಆರಾಧನಾ ಸ್ಥಾನಕ್ಕೆ ಭೇಟಿಯಿಂದ ಹರ್ಷ. ಸಂಗೀತ ಶ್ರವಣದಿಂದ ಆರೋಗ್ಯ ವೃದ್ಧಿ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ದೇವೀಸ್ತೋತ್ರ ಓದಿ.

ವೃಶ್ಚಿಕ:

ಒಲಿದು ಬಂದ ವಿದ್ಯೆಗಳ ಸದುಪಯೋಗ.. ಗೃಹೋದ್ಯಮ ಉತ್ಪನ್ನಗಳಿಗೆ ಹೊಸ ಗಿರಾಕಿಗಳು. ಉದ್ಯೋಗ ಅರಸುವ ಶಿಕ್ಷಿತರಿಗೆ ಮಾರ್ಗದರ್ಶನ. ಬಂಧುಗಳ ಮನೆಯಲ್ಲಿ ಪಿತೃಕಾರ್ಯ. ಲೌಕಿಕ- ಆಧ್ಯಾತ್ಮಿಕ ಜೀವನ ಸಮನ್ವಯ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ  ಓದಿ.

ಧನು:

ಸಹಕಾರ, ಸಾಮರಸ್ಯದಿಂದ ಎಲ್ಲರ ಹಿತ ರಕ್ಷಣೆ.. ಸಣ್ಣ ಪ್ರಮಾಣದ ಗೃಹೋದ್ಯಮ ಪ್ರಗತಿಯಲ್ಲಿ.. ಕರಕುಶಲ ಸಾಮಗ್ರಿ ತಯಾರಕರಿಗೆ ಪ್ರೋತ್ಸಾಹ. ನಾಟಿ ಔಷಧಿ ಸೇವನೆಯಿಂದ ಆರೋಗ್ಯ ಪ್ರಾಪ್ತಿ ಕೆಲವರಿಗೆ ಅನ್ನದಾನ ಮಾಡುವ ಯೋಗ. ಗಣೇಶ ಸ್ತೋತ್ರ, ವೇದಸಾರ ಶಿವಸ್ತೋತ್ರ, ಗೌರೀದಶಕ ಓದಿ.

ಮಕರ:

ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ.. ಮಕ್ಕಳ ಜ್ಞಾನವೃದ್ಧಿಗೆ ವಿಶೇಷ ಪ್ರಯತ್ನ. ಅಸಹಾಯಕರಿಗೆ ನೆರವಾಗುವ ಅವಕಾಶ. ಒಡಹುಟ್ಟುಗಳ ಸಹಾಯದಿಂದ ಕ್ಷೇಮ ಪ್ರಾಪ್ತಿ. ಉದರದ ಆರೋಗ್ಯ ಗಮನಿಸಿ. ಗಣೇಶ ಕವಚ, ದತ್ತಾತ್ರೇಯ. ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಕುಂಭ:

ಕಾರ್ಯಕ್ಷೇತ್ರದಿಂದ ಇನ್ನಷ್ಟು ಸೇವೆ ಅಪೇಕ್ಷೆ.. ಉದ್ಯೋಗಸ್ಥರಿಗೆ ಹೊಸ ವಿಭಾಗದಲ್ಲಿ ಯಶಸ್ಸು. ವೃತ್ತಿರಂಗದ ಮಿತ್ರರಿಂದ ಸಹಾಯಕ್ಕೆ ಕೋರಿಕೆ. ಗ್ರಾಹಕರ ವಿಶ್ವಾಸ ಉಳಿಸುವ ಪ್ರಯತ್ನ. ಉದ್ಯೋಗಾಸಕ್ತರಿಗೆ ಅವಕಾಶ ಗೋಚರ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.

ಮೀನ:

ಮತ್ತೆ ತೀವ್ರವಾದ ಕೆಲಸಗಳ ಒತ್ತಡ.. ಪ್ರಭಾವಿ ವ್ಯಕ್ತಿಗಳಿಂದ ನೆರವು. ಭೂಮಿ  ವ್ಯವಹಾರ ಮತ್ತೆ ಆರಂಭ. ಹಿರಿಯರೊಬ್ಬರ ವಿಶೇಷ ಸಹಾಯ. ಕುಟುಂಬಸ್ಥರ ಮನೆಯ ಪಿತೃಕಾರ್ಯದಲ್ಲಿ ಭಾಗಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.