ಗಾಂಧಿ ವೃದ್ಧಾಶ್ರಮದಲ್ಲಿ ಸರಳವಾಗಿ ಗಾಂಧಿ ಜಯಂತಿ ಆಚರಿಸಿದ ಡಾ.ಸಾತ್ವಿಕ್ ಮಂಜುನಾಥ್ ದಂಪತಿ

Gandhi Old Age Home: ನಗರದ ಮಾಗಡಿ ರಸ್ತೆಯಲ್ಲಿರುವ ಗಾಂಧಿ ವೃದ್ಧಾಶ್ರಮದಲ್ಲಿ ಡಾ.ಸಾತ್ವಿಕ್ ಮಂಜುನಾಥ್ ದಂಪತಿ ಸರಳವಾಗಿ ಗಾಂಧಿ ಜಯಂತಿಯನ್ನು ಆಚರಿಸಿದರು.

Oct 3, 2026 - 11:27
Oct 3, 2026 - 12:21
ಗಾಂಧಿ ವೃದ್ಧಾಶ್ರಮದಲ್ಲಿ ಸರಳವಾಗಿ ಗಾಂಧಿ ಜಯಂತಿ ಆಚರಿಸಿದ ಡಾ.ಸಾತ್ವಿಕ್ ಮಂಜುನಾಥ್ ದಂಪತಿ

ಬೆಂಗಳೂರು: ಹೃದ್ರೋಗ ತಜ್ಞ & ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರ ಪುತ್ರ ಡಾ.ಸಾತ್ವಿಕ್ ಮಂಜುನಾಥ್ ತಮ್ಮ ಧರ್ಮಪತ್ನಿಯೊಂದಿಗೆ ನಗರದ ಮಾಗಡಿ ರಸ್ತೆಯಲ್ಲಿರುವ ಗಾಂಧಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಹಿರಿಯ ನಾಗರಿಕರೊಂದಿಗೆ ಸರಳವಾಗಿ ಗಾಂಧಿ ಜಯಂತಿ ಆಚರಿಸಿದರು.
.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಅಳಿಯರಾಗಿರುವ ಡಾ.ಸಿ.ಎನ್.ಮಂಜುನಾಥ್ ಪುತ್ರರಾಗಿರುವ ಡಾ.ಸಾತ್ವಿಕ್, ಯಾವುದೇ ಆಡಂಬರವಿಲ್ಲದೆ ಆಶ್ರಮದ ಹಿರಿಯರೊಂದಿಗೆ ಸಮಯ ಕಳೆದರು.

ಈ ವೇಳೆ ಆಶ್ರಮದ ಹಿರಿಯ ನಾಗರಿಕರಿಗೆ ಭೋಜನದ ವ್ಯವಸ್ಥೆ ಮಾಡಿದ ಡಾ.ಸಾತ್ವಿಕ್ ಮಂಜುನಾಥ್ ದಂಪತಿ, ಸ್ವತಃ ತಮ್ಮ ಕೈಯಾರೆ ಹಿರಿಯರಿಗೆ ಊಟ ಬಡಿಸಿದರು. ಆ ಬಳಿಕ ಅವರೊಂದಿಗೆ ಕುಳಿತು ಭೋಜನ ಸ್ವೀಕರಿಸಿ, ಹಿರಿಯರ ಆರೋಗ್ಯ ಹಾಗೂ ಯೋಗಕ್ಷೇಮ ವಿಚಾರಿಸಿದರು. 

ಮುಂದಿನ ದಿನಗಳಲ್ಲಿಯೂ ಆಶ್ರಮದ ಹಿರಿಯ ನಾಗರಿಕರ ಸೇವೆ ಮತ್ತು ಕಲ್ಯಾಣಕ್ಕೆ ತಮ್ಮಿಂದಾದ ಸಹಾಯ-ಸಹಕಾರ ನೀಡುವುದಾಗಿ ಡಾ.ಸಾತ್ವಿಕ್ ಭರವಸೆ ನೀಡಿದರು.

ಡಾ.ಸಾತ್ವಿಕ್ ಮಂಜುನಾಥ್ ದಂಪತಿಯನ್ನು ಆಶ್ರಮದ ಅಧ್ಯಕ್ಷೆ ಲಕ್ಷ್ಮೀದೇವಿ ಮತ್ತು ನಿರ್ವಾಹಕಿ ಜ್ಯೋತಿ ಆತ್ಮೀಯವಾಗಿ ಬರಮಾಡಿಕೊಂಡರು. ಆಶ್ರಮದ ಸಂಸ್ಥಾಪಕ ಡಾ.ಲಯನ್ ಉಗ್ರಯ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿರಿಯರೊಂದಿಗೆ ಆತ್ಮೀಯವಾಗಿ ಬೆರೆತು, ಅವರೊಂದಿಗೆ ಊಟ ಮಾಡಿ ಸಮಯ ಕಳೆದ ಡಾ.ಸಾತ್ವಿಕ್ ದಂಪತಿಯ ಸರಳತೆ ಮತ್ತು ಸೇವಾ ಮನೋಭಾವಕ್ಕೆ ಆಶ್ರಮದ ಹಿರಿಯ ನಾಗರಿಕರು ಹಾಗೂ ಸಿಬ್ಬಂದಿ ಕೃತಜ್ಞತೆ ವ್ಯಕ್ತಪಡಿಸಿದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.