ದಿನ ಭವಿಷ್ಯ: ಇವತ್ತು ಯಾವ ರಾಶಿಗೆ ಶುಭ?

Daily Horoscope: ಇಂದು (ಶುಕ್ರವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Oct 2, 2026 - 10:04
ದಿನ ಭವಿಷ್ಯ: ಇವತ್ತು ಯಾವ ರಾಶಿಗೆ ಶುಭ?

ಮೇಷ:

ನಿಮ್ಮ ಯಶಸ್ಸಿಗೆ ತಡೆಯಿರಲಾರದು.. ಉದ್ಯೋಗ ಸ್ಥಾನದಲ್ಲಿ ಸಾಧನೆ ನಿರಾತಂಕ. ಹೊಸ ಹೂಡಿಕೆಗಳಲ್ಲಿ ಲಾಭದ ಸೂಚನೆ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಚಾರಿತ್ರ್ಯವಂತರಿಗೆ ದೈವರಕ್ಷೆ. ಗಣೇಶ ಕವಚ, ಶಿವಸಹಸ್ರನಾಮ, ಶನಿಮಹಾತ್ಮೆ ಓದಿ.

ವೃಷಭ:

ಶುಕ್ರವಾರದಂದು ಲಕ್ಷ್ಮಿಯ ಅನುಗ್ರಹ.. ಖಾದಿ ಉಡುಪು ಹಾಗೂ ವಸ್ತ್ರ ವ್ಯಾಪಾರಿಗಳಿಗೆ ಹೇರಳ ಲಾಭ. ಶ್ರಮಿಕ ವರ್ಗಕ್ಕೆ ಅನುಕೂಲವಾದ ವಾತಾವರಣ. ಕೇಟರಿಂಗ್ ವ್ಯವಹಾರಸ್ಥರಿಗೆ ಉತ್ತಮ ಲಾಭ. ವಿದ್ಯಾರ್ಥಿಗಳ ಅಧ್ಯಯನಾಸಕ್ತಿ ವೃದ್ಧಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.

ಮಿಥುನ:

ನಡೆದುಬಂದ ದಾರಿಯ ಅವಲೋಕನದಿಂದ ತೃಪ್ತಿ.. ದೂರ ಪ್ರಯಾಣ ಮಾಡುವುದು ಬೇಡ. ಹಿತ ಶತ್ರುಗಳ ವಿಷಯದಲ್ಲಿ ಎಚ್ಚರ ಇರಲಿ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಲಾಭ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಆದಿತ್ಯ ಹೃದಯ ಓದಿ.

ಕರ್ಕಾಟಕ:

ಹಂತಹಂತವಾದ ಪ್ರಗತಿ ನಿಮ್ಮದು.. ಖಾಸಗಿ ಉದ್ಯೋಗಸ್ಥರಿಗೆ ಸಮಾಧಾನ. ಉದ್ಯಮಗಳಿಗೆ ಅನಾಯಾಸವಾಗಿ ನೆರವು. ಮಹಿಳಾ ಹಿತರಕ್ಷಣೆ ಯೋಜನೆಯಿಂದ ಲಾಭ. ಹಿರಿಯರಿಗೆ ಮನೋಬಲದಿಂದ ಆರೋಗ್ಯ ಪ್ರಾಪ್ತಿ. ಗಣೇಶ ದ್ವಾದಶನಾಮ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.

ಸಿಂಹ:

ಹೊಸ ಪರಿಚಯಸ್ಥರಿಂದ ಸಹಾಯ.. ಹಲವು  ವ್ಯವಹಾರಗಳತ್ತ ಗಮನ ಕೊಡಲು ಒತ್ತಡ. ಉದ್ಯೋಗಸ್ಥರಿಗೆ ಘಟಕದ ನೇತೃತ್ವ ಲಭ್ಯ. ಸಿವಿಲ್ ಎಂಜಿನಿಯರರಿಗೆ ಮತ್ತು ನಿರ್ಮಾಣ ವೃತ್ತಿಯವರಿಗೆ ಅನುಕೂಲದ ದಿನ. ಪಿತೃಕಾರ್ಯದಲ್ಲಿ ಭಾಗಿಯಾದ ಸಮಾಧಾನ. ಗಣೇಶ ಪಂಚರತ್ನ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

ಕನ್ಯಾ:

ಅಪರಿಚಿತ ಕ್ಷೇತ್ರಕ್ಕೆ ಪ್ರವೇಶ ಬೇಡ. ಕಠಿಣ ಪರಿಶ್ರಮದಿಂದ ಯಶಸ್ಸು. ಉದ್ಯೋಗ ಅರಸುವವರಿಗೆ ಯೋಗ್ಯ ಹುದ್ದೆಯ ಭರವಸೆ. ದೂರದೂರಿಗೆ ಪ್ರಯಾಣ ಮುಂದಕ್ಕೆ. ಅಧ್ಯಾಪಕರ ಆತಂಕ ನಿವಾರಣೆ. ಸಂಕಷ್ಟನಾಶನ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ತುಲಾ:

ಒಂದೇ ಗುರಿಯನ್ನು ಸಾಧಿಸುವ ಯತ್ನ ಒಳ್ಳೆಯದು.. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ  ಶುಭಸೂಚನೆ. ಲೇವಾದೇವಿ ವ್ಯವಹಾರ ಬೇಡ. ಅಪರೂಪದ ವ್ಯಕ್ತಿಯ ಭೇಟಿ ಸಂಭವ. ಹಿರಿಯರ ಆಸ್ತಿ ಜೋಪಾನಕ್ಕೆ ಕ್ರಮ. ಗಣೇಶ ಅಷ್ಟಕ, ದತ್ತಪಂಜರ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

ವೃಶ್ಚಿಕ:

ಎಲ್ಲರಿಗೂ ಯಶಸ್ಸಿನ ದಿನ.. ಖಾಸಗಿ ಉದ್ಯೋಗಿಗಳಿಗೆ ಸಮಾಧಾನ. ಸರ್ಕಾರಿ ಅಧಿಕಾರಿಗಳಿಗೆ ಪುಢಾರಿಗಳ ಕಾಟ. ಉನ್ನತ ರಾಜಕಾರಣಿಗಳಿಗೆ ಅಧಿಕಾರ ದಾಹ. ಪೂರ್ವಜರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

ಧನು:

ವೃತ್ತಿನಿಷ್ಠರಿಗೆ ಶುಭ ತರುವ ಶುಕ್ರವಾರ.. ಟಕದ ಕಾರ್ಯ ನಿರ್ವಹಣೆಗೆ ಹೊಸ ರೂಪ. ಪರಿಸರದ ಸ್ವರೂಪ ಬದಲಾವಣೆಗೆ ಆದ್ಯತೆ. ಬಂಧುಗಳ ಮನೆಯಲ್ಲಿ ಪಿತೃ ಕಾರ್ಯ. ಮಕ್ಕಳ ಅಧ್ಯಯನಾಸಕ್ತಿಗೆ ಪೋಷಣೆ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ಮಕರ:

ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸುವ ಪ್ರಯತ್ನ..ವೃತ್ತಿಪರ ಉದ್ಯೋಗಸ್ಥರಿಗೆ ಸಮಯದ ಸವಾಲು. ಬಂಧುವರ್ಗದ ಪಿತೃಕಾರ್ಯದಲ್ಲಿ ಭಾಗಿ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ಮಕ್ಕಳನ್ನು ಸಾಕುಪ್ರಾಣಿಗಳಿಂದ ದೂರವಿಡಿ. ಗಣೇಶ ಕವಚ, ದತ್ತಪಂಜರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಕುಂಭ: 

ಹಿರಿಯ ಉದ್ಯೋಗಸ್ಥರಿಗೆ ಸವಾಲಿನ  ಅನುಭವ.. ಸರ್ಕಾರಿ ನೌಕರರಿಗೆ ವಿರಾಮದ ಲಾಭ. ಲೇವಾದೇವಿ ವ್ಯವಹಾರದಲ್ಲಿ ನಷ್ಟ.. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತೃಪ್ತಿ. ಕೃಷಿಕರಿಗೆ ನೂತನ ಬೆಳೆಗಳಲ್ಲಿ ಆಸಕ್ತಿ. ಗಣಪತಿ ಅಥರ್ವಶೀರ್ಷ, ವೇದಸಾರ ಶಿವಸ್ತೋತ್ರ, ಶನಿಮಹಾತ್ಮೆ ಓದಿ.

ಮೀನ: 

ಬದುಕಿನಲ್ಲಿ ಯಶಸ್ಸು ಸಾಧಿಸಲು ಹಿರಿಯರ ಸಹಾಯ.. ಸೇವಾ ರೂಪದ ಕಾರ್ಯಗಳು  ಮುನ್ನಡೆ. ಸಣ್ಣ ಯಂತ್ರೋದ್ಯಮಗಳಿಗೆ ಯಶಸ್ಸು   ದೇವತಾ ಸಾನ್ನಿಧ್ಯಕ್ಕೆ ಭೇಟಿ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿಗೆ  ಪ್ರಯತ್ನ .ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.