Asian Games-2026: ನಾಳೆ ಫೈನಲ್.. ಭಾರತಕ್ಕೆ ಚಿನ್ನ ಒಲಿಯುತ್ತಾ?

Asian Games-2026: ಏಷ್ಯನ್ ಗೇಮ್ಸ್‌-2026ರ ಮಹಿಳಾ ಕ್ರಿಕೆಟ್ ಫೈನಲ್ ಪಂದ್ಯವು ನಾಳೆ (ಸೆ.22) ನಡೆಯಲಿದೆ. ಭಾರತ ಹಾಗೂ ಶೀಲಂಕಾ ತಂಡಗಳು ಮುಖಾಮುಖಿಯಾಗಲಿವೆ.

Sep 21, 2026 - 18:16
Asian Games-2026: ನಾಳೆ ಫೈನಲ್.. ಭಾರತಕ್ಕೆ ಚಿನ್ನ ಒಲಿಯುತ್ತಾ?

Asian Games-2026: ಏಷ್ಯನ್ ಗೇಮ್ಸ್‌-2026ರ ಮಹಿಳಾ ಕ್ರಿಕೆಟ್ ಫೈನಲ್ ಪಂದ್ಯವು ನಾಳೆ (ಸೆ.22) ನಡೆಯಲಿದೆ. ಭಾರತ ಹಾಗೂ ಶೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಜಪಾನ್‌ನ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ಈ ಪಂದ್ಯವು ಆಯೋಜನೆಗೊಂಡಿದ್ದು, ಭಾರತೀಯ ಕಾಲಮಾನ ಬೆಳಗ್ಗೆ10:30ಕ್ಕೆ ಶುರುವಾಗಲಿದೆ. 

ಎರಡನೇ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಜಯಿಸುವುದರೊಂದಿಗೆ, ಭಾರತವು ಫೈನಲ್‌ಗೆ ಲಗ್ಗೆ ಇಟ್ಟಿದೆ. ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. 

ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸುವುದರೊಂದಿಗೆ, ಶ್ರೀಲಂಕಾ ತಂಡವು ಫೈನಲ್‌ಗೆ ಎಂಟ್ರಿ ಕೊಟ್ಟಿದೆ. 

ಸಂಭಾವ್ಯ ಪ್ಲೇಯಿಂಗ್ 11:

ಭಾರತ: ಸ್ಮೃತಿ ಮಂದಾನ, ಶಫಾಲಿ ವರ್ಮಾ, ಜಿ.ಕಮಲಿನಿ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ , ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ಶ್ರೇಯಾಂಕಾ ಪಾಟೀಲ್, ಕ್ರಾಂತಿ ಗೌಡ್, ಶ್ರೀ ಚರಣಿ ಹಾಗೂ ನಂದನಿ ಶರ್ಮಾ.

ಶ್ರೀಲಂಕಾ: ಇಮೇಷಾ ದುಲಾನಿ, ಚಾಮರಿ ಅಟಪಟ್ಟು (ನಾಯಕಿ), ಹಸಿನಿ ಪೆರೆರಾ, ಕವಿಶಾ ದಿಲ್ಹಾರಿ, ಹರ್ಷಿತಾ ಸಮರವಿಕ್ರಮ, ಹನ್ಸಿಮಾ ಕರುಣರತ್ನೆ, ಕೌಶಾನಿ ನುತ್ಯಂಗನಾ, ರಶ್ಮಿಕಾ ಸೇವಂಡಿ, ಮಿಥಾಲಿ ಅಯೋಧ್ಯಾ, ಚಾಮುಡಿ ಪ್ರಬೋದಾ ಮತ್ತು ಸುಗಂಧಿಕಾ ಕುಮಾರಿ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.