Asian Games-2026: ಕಬಡ್ಡಿ.. ಚಿನ್ನ ಗೆದ್ದ ಭಾರತದ ವನಿತೆಯರು

Asian Games-2026: ಜಪಾನ್‌ನ ಐಚಿ ನಗೋಯಾದಲ್ಲಿ ನಡೆದ ಏಷ್ಯನ್ ಗೇಮ್ಸ್‌-2026ರ ಮಹಿಳೆಯರ ಕಬಡ್ಡಿ ಫೈನಲ್ ಪಂದ್ಯದಲ್ಲಿ ಭಾರತವು ಇರಾನ್ ತಂಡವನ್ನು ಮಣಿಸಿ, ಚಿನ್ನದ ಪದಕಕ್ಕೆ ಭಾಜನವಾಗಿದೆ.

Sep 26, 2026 - 12:49
Asian Games-2026: ಕಬಡ್ಡಿ.. ಚಿನ್ನ ಗೆದ್ದ ಭಾರತದ ವನಿತೆಯರು

Asian Games-2026: ಜಪಾನ್‌ನ ಐಚಿ ನಗೋಯಾದಲ್ಲಿ ನಡೆದ ಏಷ್ಯನ್ ಗೇಮ್ಸ್‌-2026ರ ಮಹಿಳೆಯರ ಕಬಡ್ಡಿ ಫೈನಲ್ ಪಂದ್ಯದಲ್ಲಿ ಭಾರತವು 37-34 ಅಂಕಗಳೊಂದಿಗೆ ಇರಾನ್ ತಂಡವನ್ನು ಮಣಿಸಿ, ಚಿನ್ನದ ಪದಕಕ್ಕೆ ಭಾಜನವಾಗಿದೆ.  

ಈ ಪಂದ್ಯವು ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಉಭಯ ತಂಡಗಳು ಪದಕ ಗಳಿಸಲು ತೀವ್ರ ಹೋರಾಟ ನಡೆಸಿದವು. ಮೊದಲಾರ್ಧದ ಮುಕ್ತಾಯದ ವೇಳೆಗೆ 22-16 ಅಂಕಗಳಿಂದ ಭಾರತವು ಮುನ್ನಡೆ ಸಾಧಿಸಿತು. 

ದ್ವಿತೀಯಾರ್ಧದಲ್ಲಿ ಇರಾನ್ 18-15 ಅಂಕಗಳನ್ನು ಗಳಿಸಿ, ಪ್ರಬಲ ಪೈಪೋಟಿ ನೀಡಿತು. ಆದರೂ ರಕ್ಷಣಾತ್ಮಕ ಆಟವಾಡಿ, ಭಾರತವು ಜಯಿಸಿತು. 

ಇದರೊಂದಿಗೆ ಭಾರತದ ವನಿತೆಯರ ಕಬಡ್ಡಿ ತಂಡವು 'ಏಷ್ಯನ್ ಗೇಮ್ಸ್' ಇತಿಹಾಸದಲ್ಲಿ 4ನೇ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. 

ಈ ಅದ್ಭುತ ಗೆಲುವಿನೊಂದಿಗೆ, ಭಾರತದ ಒಟ್ಟಾರೆ ಪದಕಗಳ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಇದರಲ್ಲಿ 3 ಚಿನ್ನ, 11 ಬೆಳ್ಳಿ, ಮತ್ತು 13 ಕಂಚಿನ ಪದಕಗಳು ಸೇರಿವೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.