T20 Women Asia Cup-2026: ಫೈನಲ್‌ಗೆ ಲಗ್ಗೆ ಇಟ್ಟ ಭಾರತ.. ಭಾನುವಾರ ಹೈ-ವೋಲ್ಟೇಜ್ ಪಂದ್ಯ
T20 Asia Cup-2026: 'ಮಹಿಳಾ ಟಿ20 ಏಷ್ಯಾ ಕಪ್-2026' ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ, ಬಾಂಗ್ಲಾದೇಶ ವಿರುದ್ಧ ಭಾರತವು ಭರ್ಜರಿಯಾಗಿ ಜಯಗಳಿಸಿದೆ.
T20 Women Asia Cup-2026: ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ 'ಮಹಿಳಾ ಟಿ20 ಏಷ್ಯಾ ಕಪ್-2026' ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ, ಬಾಂಗ್ಲಾದೇಶ ವಿರುದ್ಧ ಭಾರತವು ಭರ್ಜರಿಯಾಗಿ ಜಯಗಳಿಸಿದೆ. ಈ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತವು ಬಾಂಗ್ಲಾಗೆ ನಿಗದಿತ 20 ಓವರ್‌ಗಳಲ್ಲಿ 149/6 ರನ್ ಟಾರ್ಗೆಟ್ ನೀಡಿತು. ಆದಾಗ್ಯೂ ಬಾಂಗ್ಲಾದೇಶವು ಅದೇ 20 ಓವರ್‌ಗಳಲ್ಲಿ 109/7 ರನ್ ಗಳಿಸಲಷ್ಟೇ ಶಕ್ತವಾಯಿತು.
ಶಫಾಲಿ ವರ್ಮಾ (40 ಎಸೆತಗಳಲ್ಲಿ 64 ರನ್) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸ್ಟಾರ್ ಬೌಲರ್ ದೀಪ್ತಿ ಶರ್ಮಾ 26 ರನ್ ನೀಡಿ, 3 ವಿಕೆಟ್ ಕಬಳಿಸಿದರು.
ಸೆ.13 ಭಾನುವಾರದಂದು ಹೈ-ವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದೆ. ಇಂದು ಎರಡನೇ ಸೆಮಿಫೈನಲ್ ಪಂದ್ಯ ಜರುಗಲಿದ್ದು, ಪಾಕಿಸ್ತಾನವು ಶ್ರೀಲಂಕಾದ ವಿರುದ್ಧ ಸೆಣಸಲಿದೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.