ನವದೆಹಲಿ: ಜಗದ್ಗುರು ಮಧ್ವಾಚಾರ್ಯ ವೃತ್ತ & ಪದ್ಮವಿಭೂಷಣ ವಿಶ್ವೇಶ ತೀರ್ಥ ಮಾರ್ಗ ಉದ್ಘಾಟನೆ
New Delhi: ಇಲ್ಲಿನ ವಸಂತ್ ಕುಂಜ್ ಪ್ರದೇಶದ ಬೃಹತ್ ಸರ್ಕಲ್‌ವೊಂದಕ್ಕೆ ಜಗದ್ಗುರು ಶ್ರೀ ಮಧ್ವಾಚಾರ್ಯ ವೃತ್ತ ಮತ್ತು ಆ ವೃತ್ತದಿಂದ ಸುಮಾರು 2 ಕಿ.ಮೀ ಮುಖ್ಯರಸ್ತೆಗೆ ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಮಾರ್ಗ ಎಂದು ನಾಮಕರಣ ಮಾಡಲಾಗಿದೆ.
ನವದೆಹಲಿ: ಇಲ್ಲಿನ ವಸಂತ್ ಕುಂಜ್ ಪ್ರದೇಶದ ಬೃಹತ್ ಸರ್ಕಲ್‌ವೊಂದಕ್ಕೆ ಜಗದ್ಗುರು ಶ್ರೀ ಮಧ್ವಾಚಾರ್ಯ ವೃತ್ತ ಮತ್ತು ಆ ವೃತ್ತದಿಂದ ಸುಮಾರು 2 ಕಿ.ಮೀ ಮುಖ್ಯರಸ್ತೆಗೆ ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಮಾರ್ಗ ಎಂದು ನಾಮಕರಣ ಮಾಡಲಾಗಿದೆ.
ಇತ್ತೀಚೆಗೆ ಉದ್ಘಾಟನಾ ಸಮಾರಂಭವು ಜರುಗಿತು. ಈ ವೇಳೆ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ದೆಹಲಿ ಮೇಯರ್ ಪರ್ವೇಶ್ ವಾಹಿ. ಸ್ಥಳೀಯ ಶಾಸಕ ಕೈಲಾಶ್ ಗೆಹ್ಲೋಟ್ ಹಾಗೂ ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಾಜೀವ್ ಬಬ್ಬರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ದೆಹಲಿ ಮಹಾನಗರ ಪಾಲಿಕೆ (MCD) ಹಾಗೂ ದೆಹಲಿ ಅಭಿವೃದ್ಧಿ ಪ್ರಾಧಿಕಾರ (DDA) ಶ್ರೀಗಳಿಗೆ ಗೌರವ ಸಲ್ಲಿಸಲು ಉದ್ದೇಶದಿಂದ ಈ ಕ್ರಮವನ್ನು ಕೈಗೊಂಡಿವೆ.