ದಿನ ಭವಿಷ್ಯ: ಇಂದು ಯಾರಿಗೆ ಶುಭ?
Daily Horoscope: ಇಂದು (ಬುಧವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಹಿರಿಯರ ಆಶೀರ್ವಾದದಿಂದ ಉನ್ನತಿ.. ಉದ್ಯೋಗದಲ್ಲಿ ಒಳ್ಳೆಯ ಹೆಸರು. ಹೊಸ ಹೂಡಿಕೆಗಳಲ್ಲಿ ಲಾಭದ ಸೂಚನೆ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಸಚ್ಚಾರಿತ್ರ್ಯ ಮೆರೆದ ನಾಯಕರಿಗೆ ವಿಜಯ. ಗಣೇಶ ಕವಚ, ಶಿವಸಹಸ್ರನಾಮ, ಶನಿಮಹಾತ್ಮೆ ಓದಿ.
ವೃಷಭ:
ಅಸಾಮಾನ್ಯ ಅನುಗ್ರಹದ ಬುಧವಾರ.. ಖಾದಿ ಉಡುಪು ಹಾಗೂ ವಸ್ತ್ರ ವ್ಯಾಪಾರಿಗಳಿಗೆ ಹೇರಳ ಲಾಭ. ಶ್ರಮಿಕ ವರ್ಗಕ್ಕೆ ಅನುಕೂಲವಾದ ವಾತಾವರಣ. ಕೇಟರಿಂಗ್ ವ್ಯವಹಾರಸ್ಥರಿಗೆ ಉತ್ತಮ ಲಾಭ. ವಿದ್ಯಾರ್ಥಿಗಳ ಅಧ್ಯಯನಾಸಕ್ತಿ ವೃದ್ಧಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.
ಮಿಥುನ:
ವಿನಯಗುಣದಿಂದ ವೃದ್ಧಿಯಾದ ಜನಪ್ರಿಯತೆ.. ದೂರ ಪ್ರಯಾಣ ಮಾಡುವುದು ಬೇಡ. ಹೊಗಳುಭಟರನ್ನು ದೂರವಿಡಿ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ ಬೌದ್ಧಿಕ ಕೆಲಸಗಾರರಿಗೆ ಒತ್ತಡ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಕಾರ್ತಿಕೇಯ ಸ್ತೋತ್ರ ಓದಿ.
ಕರ್ಕಾಟಕ:
ಉದ್ಯೋಗಸ್ಥರಿಗೆ ಆರ್ಥಿಕ ತೊಂದರೆ ನಿವಾರಣೆ.. ಉದ್ಯಮಗಳಿಗೆ ಅನಾಯಾಸವಾಗಿ ನೆರವು. ಮಹಿಳಾ ಉದ್ಯಮಿಗಳು ಸ್ವಾವಲಂಬನೆಯಲ್ಲಿ ಯಶಸ್ವಿ. ಹಿರಿಯರಿಗೆ ಮನೋಬಲದಿಂದ ಆರೋಗ್ಯ ಪ್ರಾಪ್ತಿ. ಪಿತೃಕಾರ್ಯದಲ್ಲಿ ಭಾಗಿಯಾದ ಸಮಾಧಾನ. ಗಣೇಶ ದ್ವಾದಶನಾಮ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.
ಸಿಂಹ:
ಪಾಲುದಾರಿಕೆ ಪ್ರಸ್ತಾವಗಳಿಗೆ ದಿಢೀರ್ ಸ್ಪಂದನ ಬೇಡ.. ಹಲವು ವ್ಯವಹಾರಗಳತ್ತ ಗಮನ ಅನಿವಾರ್ಯ. ಉದ್ಯೋಗಸ್ಥರಿಗೆ ಘಟಕದ ನೇತೃತ್ವ ಲಭ್ಯ. ಸಿವಿಲ್ ಎಂಜಿನಿಯರ್‌ಗಳಿಗೆ ಅನುಕೂಲದ ದಿನ. ಆಸ್ತಿ ವ್ಯಾಜ್ಯ ರಾಜಿಯಲ್ಲಿ ತೀರ್ಮಾನ. ಗಣೇಶ ಪಂಚರತ್ನ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
ಕನ್ಯಾ:
ಕುಟುಂಬದವರ ಕೂಡುವಿಕೆಯಲ್ಲಿ ಹಿರಿಯರ ಸ್ಮರಣೆ.. ಪ್ರತಿಭೆ ಹಾಗೂ ಕಾರ್ಯನಿಷ್ಠೆಗೆ ಉನ್ನತರ ಮೆಚ್ಚುಗೆ. ಉದ್ಯೋಗ ಅರಸುವವರಿಗೆ ಯೋಗ್ಯ ಹುದ್ದೆಯ ಭರವಸೆ. ದೂರ ಪ್ರಯಾಣಕ್ಕೆ ಅವಸರ ಬೇಡ. ಕೇಟರಿಂಗ್ ವ್ಯವಹಾರಸ್ಥರಿಗೆ ಅನುಕೂಲದ ದಿನ. ಸಂಕಷ್ಟ ನಾಶನ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ತುಲಾ:
ಲೋಭಿಗಳ ಹುನ್ನಾರಕ್ಕೆ ಪರಾಭವ.. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಶುಭಸೂಚನೆ. ಲೇವಾದೇವಿ ವ್ಯವಹಾರ ಬೇಡ. ಚಾಡಿಮಾತುಗಳನ್ನು ಉಪೇಕ್ಷಿಸುವುದೇ ಮೇಲು. ಹಿರಿಯರ ಆಸ್ತಿ ಜೋಪಾನಕ್ಕೆ ಕ್ರಮ.ಗಣೇಶ ಅಷ್ಟಕ, ದತ್ತಪಂಜರ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ವೃಶ್ಚಿಕ:
ವೃತ್ತಿಪರರಿಗೆ ಸಮಯಪಾಲನೆಯ ಒತ್ತಡ. ಉದ್ಯೋಗಸ್ಥರ ಸ್ಥಾನ ಗೌರವ ಭದ್ರ. ಹಿರಿಯ ಅಧಿಕಾರಿಗಳಿಗೆ ಪುಢಾರಿಗಳ ಕಾಟ. ಉನ್ನತ ರಾಜಕಾರಣಿಗಳಿಗೆ ಅಧಿಕಾರ ದಾಹ. ವಸ್ತ್ರ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
ಧನು:
ಎಂದೂ ಸೋಲದ ವ್ಯಕ್ತಿತ್ವ ನಿಮ್ಮದು.. ಉದ್ಯೋಗ ಘಟಕದ ಕಾರ್ಯ ನಿರ್ವಹಣೆಗೆ ಹೊಸ ರೂಪ. ಪರಿಸರದ ಸ್ವರೂಪ ಬದಲಾವಣೆಗೆ ಆದ್ಯತೆ. ಬಂಧುಗಳ ಮನೆಯಲ್ಲಿ ಪಿತೃಕಾರ್ಯ. ಹಿರಿಯರ ಆರೋಗ್ಯದ ಕುರಿತು ಕಾಳಜಿ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
ಮಕರ:
ಸಾಮರಸ್ಯದ ಜೀವನಕ್ಕೆ ಪ್ರಯತ್ನ.. ಉದ್ಯೋಗಸ್ಥರ ಕಾರ್ಯಸಾಮರ್ಥ್ಯ ಪರೀಕ್ಷೆಗಳಲ್ಲಿ ವಿಜಯ. ಬಂಧುವರ್ಗದಲ್ಲಿ ವೈಷಮ್ಯ ನಿವಾರಣೆ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ಮಕ್ಕಳನ್ನು ಸಾಕುಪ್ರಾಣಿಗಳಿಂದ ದೂರವಿಡಿ. ಗಣೇಶ ಕವಚ, ದತ್ತಪಂಜರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಕುಂಭ:
ಉದ್ಯೋಗಸ್ಥರಿಗೆ ಸಮಯಪಾಲನೆಯ ಸವಾಲು. ಸರ್ಕಾರಿ ನೌಕರರಿಗೆ ಹೆಚ್ಚುವರಿ ಜವಾಬ್ದಾರಿಗಳು. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತೃಪ್ತಿಯ ಅನುಭವ. ಕೃಷಿಕರಿಗೆ ನೂತನ ಬೆಳೆಗಳಲ್ಲಿ ಆಸಕ್ತಿ. ಗಣಪತಿ ಅಥರ್ವಶೀರ್ಷ, ವೇದಸಾರ ಶಿವಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ಒಂದೇಬಾರಿ ಎಲ್ಲವನ್ನೂ ನಿಭಾಯಿಸುವ ಪ್ರಯತ್ನ. ಎಲ್ಲ ಕಾರ್ಯಾಲಯಗಳಲ್ಲಿ ಅನುಕೂಲದ ಸ್ಪಂದನ. ಹೊಸ ಉದ್ಯಮಗಳು ಯಶಸ್ಸಿನ ಹಾದಿಯಲ್ಲಿ. ದೇವತಾ ಸಾನ್ನಿಧ್ಯಕ್ಕೆ ಭೇಟಿ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿಗೆ ಕಡೆಗೆ ಪ್ರಯತ್ನ ಅವಶ್ಯ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.