ದಕ್ಷಿಣ ಕನ್ನಡ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ.. ಯಾರಿಗೆ ಪುರಸ್ಕಾರ?
Dakshina Kannada: ಶಿಕ್ಷಕರ ದಿನಾಚರಣೆ ಹಿನ್ನೆಲೆ, 2026-27ನೇ ಸಾಲಿನ ಜಿಲ್ಲಾ ಮಟ್ಟದ 'ಉತ್ತಮ ಶಿಕ್ಷಕ' ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಮಂಗಳೂರು: ಶಿಕ್ಷಕರ ದಿನಾಚರಣೆ ಹಿನ್ನೆಲೆ, 2026-27ನೇ ಸಾಲಿನ ಜಿಲ್ಲಾ ಮಟ್ಟದ 'ಉತ್ತಮ ಶಿಕ್ಷಕ' ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯು ಪ್ರಕಟಣೆ ಹೊರಡಿಸಿದೆ. ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳಲ್ಲಿ ಪುರಸ್ಕಾರ ನೀಡಲಾಗಿದೆ.
ಕಿರಿಯ ಪ್ರಾಥಮಿಕ ವಿಭಾಗ:
ದಾಮೋದರ (ಬಂಟ್ವಾಳ), ಚಿತ್ರಪ್ರಭಾ (ಬೆಳ್ತಂಗಡಿ), ಉಮಾಲಕ್ಷ್ಮೀ (ಮಂಗಳೂರು ಉತ್ತರ), ಪ್ಲೇವಿ ಜೆಸಿಂತಾ ಮಿರಾಂದ (ಮಂಗಳೂರು ದಕ್ಷಿಣ), ಶ್ರೀವಾಣಿ (ಮೂಡುಬಿದಿರೆ), ಮಾಲತಿ (ಪುತ್ತೂರು) ಹಾಗೂ ಯಶೋಧರ ಕೆ (ಸುಳ್ಯ).
ಹಿರಿಯ ಪ್ರಾಥಮಿಕ ವಿಭಾಗ:
ವಿದ್ಯಾಶಂಕರ್ ಡಿ (ಬಂಟ್ವಾಳ), ಕೃಷ್ಣಪ್ಪ ಪೂಜಾರಿ (ಬೆಳ್ತಂಗಡಿ), ಇಂದಿರಾ ಎಸ್ (ಮಂಗಳೂರು ಉತ್ತರ), ಹರೀಶ್ ಕುಮಾರ್ (ಮಂಗಳೂರು ದಕ್ಷಿಣ), ಸುಕುಮಾ (ಮೂಡುಬಿದಿರೆ), ಮರಿಯಾ (ಪುತ್ತೂರು) ಮತ್ತು ಭುವನೇಶ್ವರಿ ಕೆ (ಸುಳ್ಯ).
ಪ್ರೌಢಶಾಲಾ ವಿಭಾಗ:
ವಿಜಯಲಕ್ಷ್ಮೀ (ಬಂಟ್ವಾಳ), ರವೀಂದ್ರ ಕೆ (ಬೆಳ್ತಂಗಡಿ), ಪ್ರವೀಣ್ ಕುಟಿನ್ಹೋ (ಮಂಗಳೂರು ಉತ್ತರ), ಕಿಶೋರ್ (ಮಂಗಳೂರು ದಕ್ಷಿಣ), ಜಾನ್ ರೊನಾಲ್ಡ್ ಡಿಸೋಜ (ಮೂಡುಬಿದಿರೆ), ತೋಮಸ್ ಎಂ.ಐ (ಪುತ್ತೂರು) ಹಾಗೂ ಕಿಶೋರ್ ಕುಮಾರ್ (ಸುಳ್ಯ).
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.