ಮಹಿಳಾ ಹಾಕಿ ವಿಶ್ವಕಪ್: ಸೆಮಿಫೈನಲ್ ರೇಸ್‌ನಿಂದ ಭಾರತ ಹೊರಕ್ಕೆ
Women's Hockey World Cup: ನೆದರ್‌ಲ್ಯಾಂಡ್ಸ್‌ನ ಆಮ್‌ಸ್ಟೆಲ್ವೀನ್‌ನಲ್ಲಿ ನಡೆದ 'ಮಹಿಳಾ ಹಾಕಿ ವಿಶ್ವಕಪ್'ನ ಗುಂಪು 'ಇ' ನಿರ್ಣಾಯಕ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು 'ಡ್ರಾ' ಸಾಧಿಸಿವೆ. ಇದರಿಂದಾಗಿ ಭಾರತವು ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ.
ನೆದರ್‌ಲ್ಯಾಂಡ್ಸ್‌ನ ಆಮ್‌ಸ್ಟೆಲ್ವೀನ್‌ನಲ್ಲಿ ನಡೆದ 'ಮಹಿಳಾ ಹಾಕಿ ವಿಶ್ವಕಪ್'ನ ಗುಂಪು 'ಇ' ನಿರ್ಣಾಯಕ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು 'ಡ್ರಾ' ಸಾಧಿಸಿವೆ.
ಈ ಪಂದ್ಯದಲ್ಲಿ ಉಭಯ ತಂಡಗಳು ಯಾವುದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಭಾರತವು ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ.
ಸರಾಸರಿ ಅಂಕಗಳ ಆಧಾರದ ಮೇಲೆ ಆಸ್ಟ್ರೇಲಿಯಾ ಮುಂದಿನ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ. ಸೆಮಿಫೈನಲ್‌ಗೇರಲು ಭಾರತಕ್ಕೆ ಈ ಗೆಲುವು ಅನಿವಾರ್ಯವಾಗಿತ್ತು.
ಇದಕ್ಕೂ ಮೊದಲು ಭಾರತ, ನೆದರ್‌ಲ್ಯಾಂಡ್ಸ್ ಎದುರಿಗೆ 0-2 ಗೋಲುಗಳ ಅಂತರದಿಂದ ಸೋಲು ಅನುಭವಿಸಿತ್ತು. ಹೀಗಾಗಿ, ಭಾರೀ ಹಿನ್ನೆಡೆಯಾಗಿತ್ತು.