RBI: ರೆಪೋ ದರ ಏರಿಕೆ.. ಇನ್ನು EMI ದುಬಾರಿ!
RBI: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ರೆಪೋ ದರವನ್ನು ಪರಿಷ್ಕರಿಸಿದೆ.
RBI: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ರೆಪೋ ದರವನ್ನು ಪರಿಷ್ಕರಿಸಿದ್ದು, 25 ಬೇಸಿಸ್ ಪಾಯಿಂಟ್‌ಗಳಷ್ಟು (0.25%) ಹೆಚ್ಚಿಸಿದೆ. ಫೆಬ್ರವರಿ 2023ರ ಬಳಿಕ ರೆಪೋ ದರದಲ್ಲಿ (ಇತರೆ ಬ್ಯಾಂಕ್‌ಗಳಿಗೆ ಸಾಲ ನೀಡುವ ದರ) ಮೊದಲ ಬಾರಿಗೆ ಏರಿಕೆಯಾಗಿದೆ.
ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಹಣಕಾಸು ನೀತಿ ಸಮಿತಿಯು, ರೆಪೋ ದರವನ್ನು ಶೇಕಡ 5.25% ರಿಂದ ಶೇಕಡ 5.5% ಕ್ಕೆ ಅಧಿಕಗೊಳಿಸುವ ನಿರ್ಧಾರವನ್ನು ಸರ್ವಾನುಮತದಿಂದ ಅಂಗೀಕರಿಸಿದೆ.
ಹಣದುಬ್ಬರ, ಜಾಗತಿಕವಾಗಿ ಕಚ್ಚಾತೈಲ ಬೆಲೆ ಏರಿಕೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗುತ್ತಿರುವ ಹಿನ್ನೆಲೆ, ಈ ತೀರ್ಮಾನ ಕೈಗೊಳ್ಳಲಾಗಿದೆ.
ರೆಪೋ ದರ ಹೆಚ್ಚಳದ ಪರಿಣಾಮ, ಬ್ಯಾಂಕ್‌ಗಳಿಗೆ ಆರ್‌ಬಿಐನಿಂದ ಸಿಗುವ ಸಾಲದ ವೆಚ್ಚ ಏರಿಕೆಯಾಗಲಿದೆ. ಇದರ ನೇರ ಪರಿಣಾಮ ಗ್ರಾಹಕರ ಮೇಲೆ ಉಂಟಾಗಲಿದೆ. ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರವನ್ನು ಹೆಚ್ಚಾಗಲಿದ್ದು, ಇಎಂಐ ದುಬಾರಿಯಾಗಲಿದೆ.