ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ?
Daily Horoscope: ಇಂದು (ಮಂಗಳವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಶುಭದಾಯಕ ಮಂಗಳವಾರ.. ಹೋಟೆಲ್ ಉದ್ಯಮಿಗಳಿಗೆ ಆದಾಯ ವೃದ್ಧಿ. ಬಂಧುವರ್ಗದಲ್ಲಿ ಪಿತೃಕಾರ್ಯ. ಮಹಿಳಾ ಉದ್ಯೋಗಿಗಳಿಗೆ ಅನುಕೂಲ. ಗೃಹೋದ್ಯಮದ ಉತ್ಪನ್ನಗಳಿಗೆ ಅಧಿಕ ಬೇಡಿಕೆ. ಗಣೇಶ ಕವಚ, ಶಿವ ಸಹಸ್ರನಾಮ, ಶನಿಮಹಾತ್ಮೆ ಓದಿ.
ವೃಷಭ:
ಸರ್ಕಾರಿ ನೌಕರರಿಗೆ ಶುಭ ಸನ್ನಿವೇಶ.. ಖಾದಿ ಉಡುಪುಗಳಿಗೆ ಬೇಡಿಕೆ ಹೆಚ್ಚಳ. ಶಿಕ್ಷಿತ ವೃತ್ತಿಪರಿಣತರಿಗೆ ಒಳ್ಳೆಯ ಸುದ್ದಿ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ದಾಯಾದಿಗಳ ಮನೆಯಲ್ಲಿ ಪಿತೃಕಾರ್ಯ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
ಮಿಥುನ:
ಹೆಚ್ಚು ಕಷ್ಟವಿಲ್ಲದೆ ಕಾರ್ಯಸಿದ್ಧಿ.. ಸರ್ಕಾರಿ ಉದ್ಯೋಗಸ್ಥರಿಗೆ ಆತಂಕ. ಕೇಳಿದವರಿಗೆ ಮಾತ್ರ ಸಲಹೆ ನೀಡಿದರೆ ಉತ್ತಮ. ಗ್ಯಾರೇಜ್ ಕೆಲಸಗಾರರಿಗೆ ಶುಭ ದಿನ. ಪ್ರಕೃತಿ ರಕ್ಷಣೆಗೆ ಆದ್ಯತೆ ಇರಲಿ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ರಾಮರಕ್ಷಾ ಸ್ತೋತ್ರ,ಮಹಾಲಕ್ಷ್ಮಿ ಅಷ್ಟಕ ಓದಿ.
ಕರ್ಕಾಟಕ:
ದುರಹಂಕಾರಿಗಳನ್ನು ದೂರವಿಡಿ.. ಸಣ್ಷ ಉದ್ಯಮಗಳ ಪ್ರಗತಿ. ಸರ್ಕಾರಿ ಸುಧಾರಣಾ ಕಾರ್ಯಗಳು ವಿಳಂಬ. ಸಮಾಜ ವಿರೋಧಿಗಳಿಗೆ ಸೋಲು ಆರಂಭ. ಮಹಿಳೆಯರ ಸ್ವೋದ್ಯೋಗ ಯೋಜನೆ ಉತ್ಪನ್ನಗಳಿಗೆ ಕೀರ್ತಿ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಡಕ ಓದಿ.
ಸಿಂಹ:
ಬಹುಮುಖ ಪ್ರತಿಭೆ ಪ್ರಕಟನೆಗೆ ಸಕಾಲ. ಉದ್ಯೋಗಸ್ಥರಿಗೆ ಘಟಕದ ನೇತೃತ್ವ ಲಭ್ಯ. ಉದ್ಯಮಕ್ಕೆ ಹೊಸ ರೂಪ ನೀಡುವ ಪ್ರಯತ್ನ. ಪಿತೃಕಾರ್ಯದಲ್ಲಿ ಭಾಗಿ. ಉದ್ಯೋಗಾಕಾಂಕ್ಷಿಗಳಿಗೆ ಶುಭಸೂಚನೆ. ಗಣೇಶ ಕವಚ, ನರಸಿಂಹ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ಕನ್ಯಾ:
ಕಾರ್ಯಕ್ಷೇತ್ರದಲ್ಲಿ ಉತ್ಸಾಹದ ವಾತಾವರಣ.. ಉನ್ನತರ ಮೆಚ್ಚುಗೆ ಗಳಿಸಲು ಮೇಲಾಟ. ಹಿರಿಲ ಕೃಷಿ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ಕುಟುಂಬದ ಮನೆಯಲ್ಲಿ ಪಿತೃಕಾರ್ಯ. ಸೋದರರ ನಡುವೆ ಪ್ರೀತಿಯ ವ್ಯವಹಾರ. ಗಣಪತಿ ಅಥರ್ವಶೀರ್ಷ, ದೇವೀಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ತುಲಾ:
ಉದ್ಯಮಿಗಳಿಗೆ ಎದುರಾಳಿಗಳಿಂದ ಮಾಮೂಲು ಪೈಪೋಟಿ.. ಉದ್ಯೋಗ ಅನ್ವೇಷಕರಿಗೆ ಯಶಸ್ಸು. ಲೇವಾದೇವಿ ವ್ಯವಹಾರದಿಂದ ದೂರವಿರಿ. ಆಸ್ತಿ ವ್ಯಾಜ್ಯ ರಾಜಿಯಲ್ಲಿ ತೀರ್ಮಾನ. ಪಿತೃಕಾರ್ದಲ್ಲಿ ಭಾಗಿಯಾಗಿ ಧನ್ಯತೆ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ಗುರುಸ್ತೋತ್ರ ಓದಿ.
ವೃಶ್ಚಿಕ:
ಸದ್ಯದ ಪರಿಸ್ಥಿತಿ ಎಲ್ಲ ರೀತಿಯಲ್ಲೂ ಉತ್ತಮ.. ಉದ್ಯೋಗಸ್ಥರ ಸ್ಥಾನ ಗೌರವ ವೃದ್ಧಿ.. ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ಆತಂಕ. ರಾಜಕಾರಣಿಗಳ ಅಧಿಕಾರ ದಾಹಕ್ಕೆ ಕಡಿವಾಣ. ಗೃಹೋಪಯೋಗಿ ಸಾಮಗ್ರಿಗಳಿಗಾಗಿ ಖರ್ಚು. ಗಣಪತಿ ಅಥರ್ವಶೀರ್ಷ, ದೇವೀಕವಚ, ಶನಿಸ್ತೋತ್ರ ಓದಿ.
ಧನು:
ಸ್ವಪ್ರಯತ್ನದಿಂದ ಪರಿಸ್ಥಿತಿ ಸುಧಾರಣೆ.. ಉದ್ಯಮಗಳು ಪ್ರಗತಿ ಪಥದಲ್ಲಿ ಹಿರಿಯ ನಾಗರಿಕರಿಗೆ ಸರ್ಕಾರಿ ನೆರವು ಲಭ್ಯ. ಮಕ್ಕಳ ಅಧ್ಯಯನಾಸಕ್ತಿ ಬೆಳೆಸಲು ಪ್ರೋತ್ಸಾಹ. ವ್ಯವಹಾರದ ನಿಮಿತ್ತ ಉತ್ತರದ ಕಡೆಗೆ ಪ್ರಯಾಣ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಲಕ್ಷ್ಮೀಸ್ತೋತ್ರ ಓದಿ.
ಮಕರ:
ಉದ್ಯೋಗ, ವ್ಯವಹಾರ ಎರಡರಲ್ಲೂ ಯಶಸ್ಸು.. ಉದ್ಯಮಿಗಳು ಹಠಾತ್ ನಷ್ಟದಿಂದ ಪಾರು. ಗೃಹೋಪಯೋಗಿ ಸಾಧನಗಳ ಖರೀದಿಗೆ ಧನವ್ಯಯ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ.ಪೂರ್ವಜರ ಸಂಸ್ಮರಣೆಯಲ್ಲಿ ಭಾಗಿ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಕುಂಭ:
ಕೆಲಸಗಳು ಬದಲಾಗುತ್ತಿದ್ದರೆ ಆನಂದ.. ಉದ್ಯೋಗಸ್ಥರಿಗೆ ಯಥಾರೀತಿಯ ಅನುಭವ. ಸರ್ಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ. ದೀರ್ಘಾವಧಿ ಹೂಡಿಕೆಗಳಲ್ಲಿ ಲಾಭ. ಧಾರ್ಮಿಕ. ಕಾರ್ಯಗಳಲ್ಲಿ ಮಗ್ನತೆ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ಅಧಿಕಾರಿ ವರ್ಗದ ಸಹಕಾರ.. ಹಳೆಯ ಉದ್ಯಮಗಳಿಗೆ ಶುಭಕಾಲ. ದೇವತಾ ಸಾನ್ನಿಧ್ಯಕ್ಕೆ ಭೇಟಿ. ಹಳೆಯ ಪರಿಚಿತರೊಂದಿಗೆ ಮಹತ್ವದ ಮಾತುಕತೆ. ಪಿತೃಕಾರ್ಯದಲ್ಲಿ ಭಾಗಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.