ದಿನ ಭವಿಷ್ಯ: ಇವತ್ತು ಯಾರಿಗೆಲ್ಲ ಶುಭ?
Daily Horoscope: ಇಂದು (ಗುರುವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಗುರುವಾರದ ವಿಶಿಷ್ಟ ಅನುಭವಗಳು.. ಎಲ್ಲ ಕಾರ್ಯಗಳಲ್ಲೂ ಜಯ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಹೊಸ ಆದಾಯ ಮೂಲಕ್ಕೆ ಹುಡುಕಾಟ. ಪಿತೃಗಳ ಅನುಗ್ರಹಕ್ಕಾಗಿ ಪ್ರಾರ್ಥನೆಯಲ್ಲಿ ಭಾಗಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
ವೃಷಭ:
ಔಷಧ ವ್ಯಾಪಾರಿಗಳಿಗೆ ಉತ್ತಮ ಲಾಭ.. ಉದ್ಯೋಗಾನ್ವೇಷಿಗಳಿಗೆ ಶುಭವಾರ್ತೆ. ದೀರ್ಘಾವಧಿ ಹೂಡಿಕೆಗಳಲ್ಲಿ ಲಾಭ. ಕೃಷ್ಯುತ್ಪನ್ನಗಳಿಂದ ಉತ್ತಮ ಲಾಭ. ಲೇಖನ ಸಾಮಗ್ರಿ, ಪುಸ್ತಕ ವ್ಯಾಪಾರಿಗಳಿಗೆ ಶುಭ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
ಮಿಥುನ:
ಪತ್ರಕರ್ತರು ಜವಾಬ್ದಾರಿ ಅರಿತು ನಡೆದರೆ ಕ್ಷೇಮ.. ರಖಂ ವ್ಯಾಪಾರಿಗಳಿಗೆ ಪೈಪೋಟಿ ಅನಿವಾರ್ಯ. ಅಧ್ಯಾತ್ಮ ಜೀವಿಗಳಿಗೆ ವಿಶೇಷ ಅನುಭವ. ಗೃಹಿಣಿಯರಿಗೆ ತಕ್ಕಮಟ್ಟಿಗೆ ಕ್ಷೇಮದ ದಿನ. ಸಜ್ಜನರ ಸಹವಾಸದಿಂದ ಆನಂದ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
ಕರ್ಕಾಟಕ:
ಅನಿರೀಕ್ಷಿತ ಮೂಲದಿಂದ ಧನಲಾಭ.. ಎಲೆಕ್ಟ್ರಾನಿಕ್ಸ್ ಕೆಲಸಗಾರರಿಗೆ ಅನುಕೂಲ. ಬಂಧುವರ್ಗದಲ್ಲಿ ಪಿತೃಕಾರ್ಯ. ಹೋಟೆಲ್ ಉದ್ಯಮಿಗಳಿಗೆ ನೌಕರರ ಸಮಸ್ಯೆ. ತೋಟಗಾರಿಕೆ, ಜೇನು ವ್ಯವಸಾಯಕ್ಕೆ ಉತ್ತೇಜನ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ಸಿಂಹ:
ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ.. ಸಾಮಾಜಿಕ ಕಾರ್ಯಕರ್ತರಿಗೆ ಮುಜುಗರದ ಕ್ಷಣಗಳು. ಆಸ್ತಿ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಸರ್ಕಾರಿ ನೌಕರರಿಗೆ ವರ್ಗಾವಣೆಯ ಭೀತಿ. ರಾತ್ರಿ ಪ್ರಯಾಣದಲ್ಲಿ ಎಚ್ಚರ, ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಕನ್ಯಾ:
ಹೊಲಿಗೆ, ಕಸೂತಿ ಬಲ್ಲವರಿಗೆ ಅದೃಷ್ಟದ ದಿನ.. ಬಂಧುಗಳ ಮನೆಯ ಪಿತೃಕಾರ್ಯದಲ್ಲಿ ಭಾಗಿ. ಹಳೆಯ ಗೆಳೆಯರೊಡನೆ ಸಮಾಗಮ. ಲೇವಾದೇವಿ ವ್ಯವಹಾರ ಬೇಡ. ತೋಟಗಾರಿಕೆ ಬೆಳೆಗಳಿಂದ ಲಾಭ. ಗಣೇಶ ತ್ರಿಶತಿ ಸ್ತೋತ್ರ, ವಿಷ್ಣು ಸಹಸ್ರನಾಮ, ಲಕ್ಷ್ಮೀಸ್ತೋತ್ರ ಓದಿ.
ತುಲಾ:
ಆಧ್ಯಾತ್ಮಿಕ ಕಾರ್ಯಕ್ರಮಗಳತ್ತ ಒಲವು.. ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಒಲಿಯುವ ಅದೃಷ್ಟ. ಲಲಿತಕಲೆಗಳಲ್ಲಿ ಸಾಧನೆಯಿಂದ ಸಂತೃಪ್ತಿ. ಸಾಮೂಹಿಕ ಪ್ರಾರ್ಥನೆಯಿಂದ ಸಮಾಜಕ್ಕೆ ಒಳಿತು. ಕರಕುಶಲ ಸಾಮಗ್ರಿ ವ್ಯಾಪಾರದಲ್ಲಿ ಲಾಭ. ಗಣೇಶ ಪಂಚರತ್ನ, ದತ್ತಪಂಜರ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.
ವೃಶ್ಚಿಕ:
ಉದ್ಯೋಗ, ಉದ್ಯಮಗಳಲ್ಲಿ ಸಾಮಾನ್ಯ ಮುನ್ನಡೆ.. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ದೂರದಲ್ಲಿರುವ ಬಂಧುಗಳ ಆಗಮನ. ಕೈಮಗ್ಗದ ಕೆಲಸ ಬಲ್ಲವರಿಗೆ ಅವಕಾಶ. ಪಿತೃಕಾರ್ಯದಲ್ಲಿ ಭಾಗಿಯಾದ ದಮಾಧಾನ. ಗಣಪತಿ ಅಥರ್ವಶೀರ್ಷ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ಧನು:
ಪ್ರಕೃತಿ ಸಂರಕ್ಷಣೆಯ ಕಾರ್ಯಗಳಲ್ಲಿ ಭಾಗಿ.. ಸಹೋದ್ಯೋಗಿ ಮಿತ್ರರಿಗೆ ಮಾರ್ಗದರ್ಶನ. ಸಣ್ಣ ಹೂಡಿಕೆಗಳಲ್ಲಿ ಸಾಮಾನ್ಯ ಲಾಛ
ಶಿಕ್ಷಕ ವರ್ಗದ ಹಿತರಕ್ಷಣೆಗೆ ಪ್ರಯತ್ನ. ಮಕ್ಕಳ ಪರೀಕ್ಷಾ ತಯಾರಿಗೆ ಸಹಾಯ. ಗಣೇಶ ದ್ವಾದಶನಾಮ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ಗೌರೀದಶಕ ಓದಿ.
ಮಕರ:
ಉದ್ಯೋಗಸ್ಥರಿಗೆ ಸಾಮಾನ್ಯ ಸಮಾಧಾನ.. ನಿತ್ಯೋಪಯೋಗಿ ಸಾಮಗ್ರಿ ವಿತರಕರಿಗೆ ಸಡಿಲಾದ ಪೂರೈಕೆ ಒತ್ತಡ. ಹಿರಿಯರ ಆರೋಗ್ಯ ಸುಧಾರಣೆ. ಪರೋಪಕಾರ ಮಾಡುವ ಅವಕಾಶ. ಚಾಡಿ ಮಾತುಗಳನ್ನು ನಿರ್ಲಕ್ಷಿಸಿರಿ. ಗಣೇಶ ಕವಚ, ಕಾರ್ತಿಕೇಯ ಸ್ತೋತ್ರ , ಹನುಮಾನ್ ಚಾಲೀಸಾ ಓದಿ.
ಕುಂಭ:
ನಿರಂತರ ಆದಾಯ ವೃದ್ಧಿ.. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮಗ್ನತೆ. ಯಂತ್ರೋಪಕರಣ ವ್ಯಾಪಾರಿಗಳ ಪಾಲಿಗೆ ಪಿತೃಕಾರ್ಯದಲ್ಲಿ ಭಾಗಿ. ಗುರುಸ್ಥಾನಕ್ಕೆ ಭೇಟಿಯಿಂದ ಶುಭ. ಗಣೇಶ ಅಷ್ಟಕ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ಉದ್ಯೋಗ, ವ್ಯವಹಾರಗಳಲ್ಲಿ ಅನುಕೂಲ.. ಬಂಧು ವರ್ಗದ ಮನೆಯ ಪಿತೃಕಾರ್ಯದಲ್ಲಿ ಭಾಗಿ. ಹಿರಿಯರಿಗೆ ಪೂರ್ಣಾರೋಗ್ಯದ ಅನುಭವ. ಬಂಗಾರದ ಕೆಲಸ ಬಲ್ಲವರಿಗೆ ಸದವಕಾಶ. ದ್ವಿಚಕ್ರವಾಹನ ದುರಸ್ತಿಯವರಿಗೆ ಅನುಕೂಲ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.