ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿಗೆ ಯೋಗಾಸನದಲ್ಲಿ ಚಿನ್ನ ಪದಕ
St Philomena College: ಈಚೆಗೆ ನಡೆದ 'ಮಂಗಳೂರು ವಿವಿ' ಅಂತರ ಕಾಲೇಜು ಯೋಗಾಸನ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ನಿಖಿಲ್ ಬಿ.ಕೆ ಅವರು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಪುತ್ತೂರು: ಈಚೆಗೆ ನಡೆದ 'ಮಂಗಳೂರು ವಿವಿ' ಅಂತರ ಕಾಲೇಜು ಯೋಗಾಸನ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ನಿಖಿಲ್ ಬಿ.ಕೆ ಅವರು ಚಿನ್ನದ ಪದಕಕ್ಕೆ ಭಾಜನರಾಗಿದ್ದು, 'ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ' ಯೋಗಾಸನ ಸ್ಪರ್ಧೆಗೂ ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿಗೆ ನವೀನ್ ಕುಮಾರ್ ಬಿ ಕೆಯೂರ್ ತರಬೇತಿ ನೀಡಿದ್ದಾರೆ.
ಇನ್ನು, ನಿಖಿಲ್ ಬಿ.ಕೆ ಅವರ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ರೆ.ಡಾ.ಆಂಟನಿ ಪ್ರಕಾಶ್ ಮೊಂತೆರೋ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ಹಂತದ ಸ್ಪರ್ಧೆಯಲ್ಲೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.