Vivo S2 FE: ನೀವು ಹೊಸದೊಂದು ಸ್ಮಾರ್ಟ್‌ಫೋನ್ ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಇದೇ ಮಂಗಳವಾರದಂದು ನೂತನ 'ವಿವೋ ಎಸ್2 ಎಫ್ಇ' ಬಿಡುಗಡೆಗೊಂಡಿದೆ.
ಈ ಫೋನ್ 6GB RAM + 128GB ಮತ್ತು 8GB + 128GB ಇಂಟರ್ನಲ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಆದಾಗ್ಯೂ ಸ್ಪರ್ಧಾತ್ಮಕ ಬೆಲೆಯಲ್ಲಿಯೇ ಗ್ರಾಹಕರ ಖರೀದಿಗೆ ಲಭ್ಯವಿದೆ. ಕ್ರಮವಾಗಿ ರೂ.38,999 ರಿಂದ ರೂ.42,999 ಬೆಲೆಯನ್ನು ಪಡೆದಿದೆ.
ಇದು 120Hz ರಿಫ್ರೆಶ್ ರೇಟ್ ಹಾಗೂ 2,000 ನಿಟ್ಸ್ HBM ಒಳಗೊಂಡಿರುವ ಅತ್ಯುತ್ತಮವಾದ 6.83-ಇಂಚಿನ 1.5ಕೆ ಅಮೋಲೆಡ್ ಡಿಸ್‌ಪ್ಲೇಯನ್ನು ತನ್ನದಾಗಿಸಿಕೊಂಡಿದೆ.
10,000mAh ಸಾಮರ್ಥ್ಯದ ಶಕ್ತಿಶಾಲಿ ಬ್ಯಾಟರಿ ಇದ್ದು, 44ಡಬ್ಲ್ಯೂ ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಬೆಂಬಲಿಸುತ್ತದೆ. ಆಕ್ಟಾ-ಕೋರ್ 6nm ಮೀಡಿಯಾ ಟೆಕ್ ಡೈಮೆನ್ಸಿಟಿ 7300e 5G ಚಿಪ್‌ಸೆಟ್ ಪ್ರೊಸೆಸರ್‌ನ್ನು ಹೊಂದಿದೆ. ಆಂಡ್ರಾಯ್ಡ್ 16ನ್ನು ಸಪೋರ್ಟ್ ಮಾಡುತ್ತದೆ.
ಉತ್ತಮವಾದ ಫೋಟೋಗಳನ್ನು ಸೆರೆ ಹಿಡಿಯುವ ಸಲುವಾಗಿ 50MP ಪ್ರೈಮರಿ ಹಾಗೂ 32MP ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. ಸ್ಟೆಲ್ಲರ್ ಗ್ರೀನ್ (Stellar Green), ಜೆನ್ ವೈಟ್ (Zen White) ಮತ್ತು ಟೈಟಾನ್ ಬ್ಲ್ಯಾಕ್ (Titan Black) ಎಂಬ ಆಕರ್ಷಕ ಬಣ್ಣಗಳೊಂದಿಗೂ ಸಿಗುತ್ತದೆ.
ಈ ಫೋನ್ ಮೊದಲ ಮಾರಾಟವು ಅ.20 ರಿಂದ ಶುರುವಾಗಲಿದ್ದು, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ವಿವೋ ಫ್ಲಾಟ್‌ಫಾರಂ ಮೂಲಕ ಗ್ರಾಹಕರ ಖರೀದಿಗೆ ದೊರೆಯುತ್ತದೆ.