Honda Elevate Facelift: ಹೊಸ ಹೋಂಡಾ ಎಲಿವೇಟ್ ಫೇಸ್‌ಲಿಫ್ಟ್ SUV ಬಿಡುಗಡೆ.. ಬೆಲೆ ಎಷ್ಟು?
Honda Elevate Facelift: 2026ರ ನೂತನ 'ಹೋಂಡಾ ಎಲಿವೇಟ್ ಫೇಸ್‌ಲಿಫ್ಟ್' ಎಸ್‌ಯುವಿ ಮಂಗಳವಾರ ಬಿಡುಗಡೆಗೊಂಡಿದೆ.
Honda Elevate Facelift: 2026ರ ನೂತನ 'ಹೋಂಡಾ ಎಲಿವೇಟ್ ಫೇಸ್‌ಲಿಫ್ಟ್' ಎಸ್‌ಯುವಿ ಮಂಗಳವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ.
ಈ ಕಾರು ರೂ.11.80 ಲಕ್ಷದಿಂದ ರೂ.18.40 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಎಸ್‌ವಿ, ವಿ, ವಿಎಕ್ಸ್, ಜಡ್ಎಕ್ಸ್, ಜಡ್ಎಕ್ಸ್ ಪ್ಲಸ್ ಹಾಗೂ ಜಡ್ಎಕ್ಸ್ ಪ್ಲಸ್ ಎಂಬ ರೂಪಾಂತರಗಳೊಂದಿಗೂ ದೊರೆಯುತ್ತದೆ.
ನೂತನ 'ಹೋಂಡಾ ಎಲಿವೇಟ್ ಫೇಸ್‌ಲಿಫ್ಟ್' ನವೀಕರಣಗೊಂಡಿರುವ ವಿನ್ಯಾಸವನ್ನು ಹೊಂದಿದೆ. ಮುಂಭಾಗದ ಬಂಪರ್ & ಗ್ರಿಲ್ ಹೊಸದಾಗಿವೆ. ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಫಾಗ್ ಲ್ಯಾಂಪ್‌ಗಳು, ಕನೆಕ್ಟೆಡ್ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, 16-ಇಂಚಿನ ಸ್ಟೀಲ್ ವೀಲ್‌ಗಳು/ 17-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ.
ಜೊತೆಗಿದು ಕ್ರಿಸ್ಟಲ್ ಬ್ಲ್ಯಾಕ್ ಪರ್ಲ್, ಆಬ್ಸಿಡಿಯನ್ ಬ್ಲೂ ಪರ್ಲ್, ರೇಡಿಯಂಟ್ ರೆಡ್ ಮೆಟಾಲಿಕ್, ಮೀಟಿಯೊರಾಯ್ಡ್ ಗ್ರೇ ಮೆಟಾಲಿಕ್, ಲೂನಾರ್ ಸಿಲ್ವರ್ ಮೆಟಾಲಿಕ್, ಪ್ಲಾಟಿನಮ್ ವೈಟ್ ಪರ್ಲ್ ಮತ್ತು ನಾರ್ಡಿಕ್ ಫಾರೆಸ್ಟ್ ಪರ್ಲ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.
ಈ ಕಾರಿನಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 458 ಲೀ.ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ.
ಹೊಸ 'ಹೋಂಡಾ ಎಲಿವೇಟ್ ಫೇಸ್‌ಲಿಫ್ಟ್' ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 121 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 145 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯೂನುವಲ್ ಹಾಗೂ 7-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 15.31 ರಿಂದ 16.61 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ.
ಇದರ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕನೆಕ್ಟೆಡ್ ಕಾರ್ ಟೆಕ್, ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 8-ಸ್ಪೀಕರ್ ಸೌಂಡ್ ಸಿಸ್ಟಮ್, ವೆಂಟಿಲೇಟೆಡ್ & ಪವರ್ಡ್ ಫ್ರಂಟ್ ಸೀಟುಗಳು, ಸಿಂಗಲ್-ಪೇನ್ ಸನ್‌ರೂಫ್ ಹಾಗೂ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ ಸ್ಟ್ಯಾಂಡರ್ಡ್ ಆಗಿ 6-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) , ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಹೋಲ್ಡ್ ಅಸಿಸ್ಟ್, ರೇರ್ ಪಾರ್ಕಿಂಗ್ ಸೆನ್ಸರ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.