ಹೊಸಗುಂದ: ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್‌ನಿಂದ 7ನೇ ವರ್ಷದ ನವರಾತ್ರಿ ಉತ್ಸವ

Hosagunda: ಶ್ರೀ ಭದ್ರಕಾಳಿ ಸ್ವರೂಪಿಣಿ ಕಂಚಿಕಾಳಮ್ಮ ಮತ್ತು ಶ್ರೀ ಮಹಿಷಮರ್ದಿನಿ ಸನ್ನಿಧಿಯಲ್ಲಿ 7ನೇ ವರ್ಷದ ನವರಾತ್ರಿ ಉತ್ಸವ ಅ.11ರಿಂದ 21ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.

Oct 8, 2026 - 13:17
ಹೊಸಗುಂದ: ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್‌ನಿಂದ 7ನೇ ವರ್ಷದ ನವರಾತ್ರಿ ಉತ್ಸವ

ಸಾಗರ: ಶಿವಮೊಗ್ಗದ ಸಾಗರ ತಾಲೂಕಿನ ಹೊಸಗುಂದದ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್‌ ವತಿಯಿಂದ ಶ್ರೀ ಭದ್ರಕಾಳಿ ಸ್ವರೂಪಿಣಿ ಕಂಚಿಕಾಳಮ್ಮ ಮತ್ತು ಶ್ರೀ ಮಹಿಷಮರ್ದಿನಿ ಸನ್ನಿಧಿಯಲ್ಲಿ 7ನೇ ವರ್ಷದ ನವರಾತ್ರಿ ಉತ್ಸವ ಅ.11ರಿಂದ 21ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀಸ್ವಾಮೀಜಿ ಅವರ ದಿವ್ಯಾನುಗ್ರಹದೊಂದಿಗೆ ಈ ಉತ್ಸವ ಜರುಗಲಿದೆ.

ಪ್ರತಿದಿನ ಬೆಳಗ್ಗೆ 9.30ಕ್ಕೆ ಪೂಜೆ, ಅಭಿಷೇಕ, ಅಲಂಕಾರ ಸೇವೆ, ಚಂಡೀ ಮಹಾತ್ಮ್ಯ ಪಾರಾಯಣ, ಕುಂಕುಮಾರ್ಚನೆ ಹಾಗೂ ನೈವೇದ್ಯ ನೆರವೇರಲಿದೆ. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ಮಹಾಪ್ರಸಾದ ಭೋಜನ ವ್ಯವಸ್ಥೆ ಇರಲಿದೆ.

ಸಂಜೆ 5.30ರಿಂದ ರಾಜೋಪಚಾರ ಪೂಜೆ, ಉಯ್ಯಾಲೆ ಸೇವೆ, ಅಷ್ಟಾವಧಾನ ಸೇವೆ ಹಾಗೂ ರಂಗಪೂಜೆ ನಡೆಯಲಿದ್ದು, ರಾತ್ರಿ 7ಕ್ಕೆ ಮಹಾಮಂಗಳಾರತಿ ನೆರವೇರಲಿದೆ. 

ಅ.21ರ ವಿಜಯದಶಮಿಯಂದು ಬೆಳಗ್ಗೆ 9.30ರಿಂದ ನವಚಂಡೀ ಹವನ, ಪೂರ್ಣಾಹುತಿ ಹಾಗೂ ದಶಮಿ ಉತ್ಸವ ಜರುಗಲಿದೆ.

ಭಕ್ತರು ಹೆಸರು, ರಾಶಿ, ನಕ್ಷತ್ರ ಹಾಗೂ ಗೋತ್ರದೊಂದಿಗೆ ಸಂಕಲ್ಪ ಮಾಡಿಸಿಕೊಳ್ಳಬಹುದಾಗಿದೆ. ಸೇವಾ ನಿಧಿಯನ್ನು ಕೆನರಾ ಬ್ಯಾಂಕ್, ಆನಂದಪುರಂ ಶಾಖೆಯ ಟ್ರಸ್ಟ್ ಖಾತೆಗೆ ಜಮಾ ಮಾಡಬಹುದು. ಇಲ್ಲವೇ ಗೂಗಲ್ ಪೇ/ಫೋನ್ ಪೇ ಮೂಲಕ 9900039443ಕ್ಕೆ ಪಾವತಿಸಿ, ರಸೀದಿ ಹಾಗೂ ವಿಳಾಸವನ್ನು ವಾಟ್ಸಾಪ್ ಮೂಲಕ ಕಳುಹಿಸಬಹುದು. 

ಕುಟುಂಬ ಸಮೇತರಾಗಿ ನವರಾತ್ರಿ ಉತ್ಸವದಲ್ಲಿ ಪಾಲ್ಗೊಳ್ಳುವಂತೆ 'ಟ್ರಸ್ಟ್' ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.