Simple Wave: ಹೊಸ ಸಿಂಪಲ್ ವೇವ್ ಇ-ಸ್ಕೂಟರ್ ಬಿಡುಗಡೆ.. 243 Km ರೇಂಜ್.. ಬೆಲೆ ಎಷ್ಟು?

Simple Wave: ನೂತನ 'ಸಿಂಪಲ್ ವೇವ್' ಇ-ಸ್ಕೂಟರ್ ಈಚೆಗೆ ಅದ್ದೂರಿಯಾಗಿ ಬಿಡುಗಡೆಗೊಂಡಿದೆ.

Sep 4, 2026 - 13:54
Simple Wave: ಹೊಸ ಸಿಂಪಲ್ ವೇವ್ ಇ-ಸ್ಕೂಟರ್ ಬಿಡುಗಡೆ.. 243 Km ರೇಂಜ್.. ಬೆಲೆ ಎಷ್ಟು?
ಚಿತ್ರಕೃಪೆ @ ಎಕ್ಸ್ (MotorOctane)

ನೂತನ ಸಿಂಪಲ್ ವೇವ್ (Simple Wave) ಇ-ಸ್ಕೂಟರ್ ಈಚೆಗೆ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದರ ವಿತರಣೆಯು ಸೆಪ್ಟೆಂಬರ್ 25 ರಿಂದ ಶುರುವಾಗಲಿದೆ. 

ಈ ಎಲೆಕ್ಟ್ರಿಕ್ ಸ್ಕೂಟರ್ ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ರೂ.1,09,999 ರಿಂದ ರೂ.1,89,999 ದರವನ್ನು ಪಡೆದಿದೆ. ವೇವ್ ಎಸ್ 2.2 ಕೆಡಬ್ಲ್ಯೂಹೆಚ್, ವೇವ್ ಎಸ್ 2.7 ಕೆಡಬ್ಲ್ಯೂಹೆಚ್ ಇಬಿಎನ್, ವೇವ್ ಎಸ್ 2.7 ಕೆಡಬ್ಲ್ಯೂಹೆಚ್ ಟಿಎಫ್‌ಟಿ, ವೇವ್ ಇಬಿಎನ್, ವೇವ್ ಟಿಎಫ್‌ಟಿ ಮತ್ತು ವೇವ್ ಪ್ಲಸ್ ಟಿಎಫ್‌ಟಿ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ದೊರೆಯುತ್ತದೆ. 

ಇದು ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಅತ್ಯುತ್ತಮವಾದ ಹೆಡ್‌ಲ್ಯಾಂಪ್‌, ಸ್ಮೈಲ್-ಆಕಾರದ ಎಲ್ಇಡಿ ಡಿಆರ್‌ಎಲ್‌ ಮತ್ತು ಟೈಲ್‌ಲ್ಯಾಂಪ್‌ನ್ನು ಹೊಂದಿದೆ. ಪರ್ಲ್ ವೈಟ್, ಪೋಲಾರ್ ಬ್ಲೂ, ಫಾರೆಸ್ಟ್ ಗ್ರೀನ್, ಕೋರಲ್ ರೆಡ್, ಟ್ವಿಲೈಟ್ ಬ್ಲ್ಯಾಕ್ ಹಾಗೂ ಡಾಲ್ಫಿನ್ ಗ್ರೇ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. 

ಹೊಸ 'ಸಿಂಪಲ್ ವೇವ್' ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. 2.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್), 2.7 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್), 3.7 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ ಕ್ರಮವಾಗಿ 110, 132, 171 ಮತ್ತು 243 ಕಿ.ಮೀ ರೇಂಜ್ ನೀಡುತ್ತದೆ. 

ಈ ಸ್ಕೂಟರ್‌ ನಾನಾ ಬಗೆಯ ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 7-ಇಂಚಿನ ಟಿಎಫ್‌ಟಿ/ ಎಲ್‌ಸಿಡಿ ಕನ್ಸೋಲ್, ಮ್ಯೂಸಿಕ್ ಕಂಟ್ರೊಲ್ಸ್, ರಿವರ್ಸ್ ಮೋಡ್, ಹೀಲ್ಡ್ ಹೋಲ್ಡ್ ಹಾಗೂ ಟ್ರಾಕ್ಷನ್ ಕಂಟ್ರೋಲ್‌ನ್ನು ಹೊಂದಿದೆ. 12-ಇಂಚಿನ ಅಲಾಯ್ ವೀಲ್‌ಗಳು ಮತ್ತು 90-ಸೆಕ್ಷನ್ ಟೈರ್‌ಗಳನ್ನು ಪಡೆದಿದೆ. ಇಕೋ ಎಕ್ಸ್, ಇಕೋ, ರೈಡ್, ಸ್ಪೋರ್ಟ್ ಎಂಬ ರೈಡ್ ಮೋಡ್‌ಗಳನ್ನು ತನ್ನದಾಗಿಸಿಕೊಂಡಿದೆ.

ಇದು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. ಸಿಬಿಎಸ್ (ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್) ಕೂಡ ಇದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.