MG Hector Tomahawk EV: ಶೋರೂಂಗೆ ಬಂದೇ ಬಿಡ್ತು ಎಂಜಿ ಹೆಕ್ಟರ್ ಟೊಮಾಹಾಕ್ ಇವಿ.. ಬೆಲೆ ಎಷ್ಟು?
MG Hector Tomahawk EV: ಹೊಸ 'ಎಂಜಿ ಹೆಕ್ಟರ್ ಟೊಮಾಹಾಕ್ ಇವಿ'ಯನ್ನು ಶೋರೂಂಗೆ ತಲುಪಿಸುವುದಕ್ಕೆ ಕಂಪನಿಯು ಶುರು ಮಾಡಿದೆ.
ನೂತನ ಎಂಜಿ ಹೆಕ್ಟರ್ ಟೊಮಾಹಾಕ್ ಇವಿ (MG Hector Tomahawk EV) ಈಚೆಗೆ ಅದ್ದೂರಿಯಾಗಿ ಬಿಡುಗಡೆಗೊಂಡಿತ್ತು. ಸದ್ಯ ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಶೋರೂಂಗೆ ತಲುಪಿಸುವುದಕ್ಕೆ ಕಂಪನಿಯು ಶುರು ಮಾಡಿದೆ.
ಇದು ರೂ.19.49 ಲಕ್ಷದಿಂದ ರೂ.23.49 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಬಾಸ್ (ಬ್ಯಾಟರಿ-ಆಸ್-ಎ-ಸರ್ವಿಸ್) ಯೋಜನೆಯಡಿಯೂ ಲಭ್ಯವಿದೆ. ಆ ಮಾಡೆಲ್ ಬೆಲೆ ರೂ.13.99 ಲಕ್ಷದಿಂದ ಶುರುವಾಗಲಿದ್ದು, ಪ್ರತಿ ಕಿಮೀ.ಗೆ ರೂ.4.9 ಶುಲ್ಕವನ್ನು ಪಾವತಿಸಬೇಕು. ಎಕ್ಸೈಟ್, ಎಕ್ಸ್‌ಕ್ಯೂಸಿವ್, ಹಾಗೂ ಎಸೆನ್ಸ್ ಎಂಬ ರೂಪಾಂತರಗಳೊಂದಿಗೂ (ವೇರಿಯೆಂಟ್) ಸಿಗುತ್ತದೆ.
ಈ ಕಾರು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ತುಂಬಾ ಚೆನ್ನಾಗಿರುವ ಬಂಪರ್ & ಗ್ರಿಲ್‌ನ್ನು ಪಡೆದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಸಿಗ್ನೇಚರ್ ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಮತ್ತು 18-ಇಂಚಿನ ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಹೊಂದಿದೆ. ಖಾಕಿ ಗ್ರೀನ್, ಅರೋರಾ ಸಿಲ್ವರ್, ಸ್ಟಾರಿ ಬ್ಲ್ಯಾಕ್, ಸೆಲ್ಡನ್ ಬ್ಲೂ, ಪರ್ಲ್ ವೈಟ್ ಹಾಗೂ ಶ್ಯಾಡೋ ಗೋಲ್ಡ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.
ಹೊಸ 'ಎಂಜಿ ಹೆಕ್ಟರ್ ಟೊಮಾಹಾಕ್ ಇವಿ' ಹೆಚ್ಚು ವಿಶಾಲ ಗಾತ್ರದಲ್ಲಿದೆ. 4745 ಎಂಎಂ ಉದ್ದ, 1850 ಎಂಎಂ ಅಗಲ, 1770 ಎಂಎಂ ಎತ್ತರ ಹಾಗೂ 2810 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ.
ಇದು 5/ 7 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 192 ಲೀ.ನಷ್ಟು ಬೂಟ್ ಸ್ಪೇಸ್‌ನ್ನು ತನ್ನದಾಗಿಸಿಕೊಂಡಿದೆ.
ಈ ಎಸ್‌ಯುವಿ, 69.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 517 ಕಿ.ಮೀ ರೇಂಜ್ ನೀಡುತ್ತದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರ್, 204 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 320 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.
ನೂತನ 'ಟೊಮಾಹಾಕ್ ಇವಿ' ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 8.8-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 10-ಸ್ಪೀಕರ್ ಇನ್ಫಿನಿಟಿ ಸೌಂಡ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಸನ್‌ರೂಫ್ ಮತ್ತು ಆಂಬಿಯೆಂಟ್ ಲೈಟಿಂಗ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಇದು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಫ್ರಂಟ್-ರೇರ್ ಪಾರ್ಕಿಂಗ್ ಸೆನ್ಸರ್ಸ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.