ಪುತ್ತೂರು: ವಿದ್ಯಾಮಾತಾ ಅಕಾಡೆಮಿಯಲ್ಲಿ ಕೃಷ್ಣ ವೇಷ ಸ್ಪರ್ಧೆ ಆಯೋಜನೆ
Puttur: ಇಲ್ಲಿನ 'ವಿದ್ಯಾಮಾತಾ ಅಕಾಡೆಮಿ'ಯಲ್ಲಿ, 3ನೇ ವರ್ಷದ ಕೃಷ್ಣ ವೇಷ ಸ್ಪರ್ಧೆ ಅದ್ದೂರಿಯಾಗಿ ನೆರೆವೇರಿತು.
ಪುತ್ತೂರು: ಇಲ್ಲಿನ 'ವಿದ್ಯಾಮಾತಾ ಅಕಾಡೆಮಿ'ಯಲ್ಲಿ, 3ನೇ ವರ್ಷದ ಕೃಷ್ಣ ವೇಷ ಸ್ಪರ್ಧೆ ಅದ್ದೂರಿಯಾಗಿ ನೆರೆವೇರಿತು. 'ನಂದ ಗೋಕುಲ ಚಿಣ್ಣರ ಅಂಗಳ' ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 83ಕ್ಕೂ ಅಧಿಕ ಮುದ್ದು ಕೃಷ್ಣರು ಸೇರಿದಂತೆ, ಯಶೋದಾ ಕೃಷ್ಣರು ಸಹ ಪಾಲ್ಗೊಂಡಿದ್ದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಸ್ವಾತಿ, ಈ ಸ್ಪರ್ಧೆಯನ್ನು ಉದ್ಘಾಟಿಸಿದರು.

ಆ ಬಳಿಕ ಅವರು ಮಾತನಾಡಿ, 'ಪ್ರಸ್ತುತ ಕಾಲ ಘಟ್ಟದಲ್ಲಿ ಎಲ್ಲವು ಆಧುನೀಕರಣಗೊಳ್ಳುತ್ತಿದೆ. ವಿದ್ಯಾಮಾತಾ ಅಕಾಡೆಮಿಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದರೊಂದಿಗೆ ಸಮಾಜವನ್ನು ಒಂದುಗೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ' ಎಂದರು.
ಸ್ಪರ್ಧೆಯ ಮೆರುಗು ಹೆಚ್ಚಿಸಿದ ಯಶೋಧ ಕೃಷ್ಣರು:
ಪ್ರತಿ ವರ್ಷ 'ಕೃಷ್ಣ ವೇಷ' ಸ್ಪರ್ಧೆ ಏರ್ಪಡಿಸುತ್ತಿರುವ 'ವಿದ್ಯಾಮಾತಾ ಅಕಾಡೆಮಿ'ಯಲ್ಲಿ ಈ ವರ್ಷದ ಸ್ಪರ್ಧೆಯಲ್ಲಿ 1 ರಿಂದ 3 ವರ್ಷ, 3 ರಿಂದ 6 ವರ್ಷ ಮತ್ತು ಯಶೋದೆ ಕೃಷ್ಣ ವಿಭಾಗವನ್ನು ಹೊಸದಾಗಿ ಪರಿಚಯಿಸಲಾಗಿತ್ತು.

ವಿದ್ಯಾರ್ಥಿಗಳಿಂದ ಓಣಂ ಆಚರಣೆ:
ಇದೇ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವ ಅಕಾಡೆಮಿ ವಿದ್ಯಾರ್ಥಿಗಳು, ಓಣಂ ಪೂಕಳಂ ರಚಿಸಿ 'ಓಣಂ ಹಬ್ಬ'ವನ್ನು ಸರಳವಾಗಿ ಆಚರಿಸಿದರು.
ಆಕರ್ಷಕ ಟ್ರೋಫಿ & ನಗದು ಬಹುಮಾನ ಪಡೆದ ಯಶೋಧ ಕೃಷ್ಣರು (1 ರಿಂದ 3 ವರ್ಷದ ವಿಭಾಗ):
* ಪ್ರಥಮ ಬಹುಮಾನ: ಸುಳ್ಯ ತಾಲೂಕು ಮುರುಳ್ಯದ ಕಳತಾಜೆ ನಿವಾಸಿ ನಿರೀಕ್ಷಾ ಹಾಗೂ ಕೀರ್ತನ್ ದಂಪತಿಗಳ ಪುತ್ರಿ ದಿತ್ಯಾ ಕೆ ಶೆಟ್ಟಿ.
* ದ್ವಿತೀಯ ಬಹುಮಾನ: ಪುತ್ತೂರು ತಾಲೂಕು ಎಪಿಎಂಸಿ ರಸ್ತೆಯ ಅರುಣ್ ಕಾಂಪ್ಲೆಕ್ಸ್ ನಿವಾಸಿ ಸ್ವಾತಿ ಮತ್ತು ಬಾಲಕೃಷ್ಣ ದಂಪತಿಗಳ ಪುತ್ರಿ ಶ್ರೀವಿ ಬಿ.
* ತೃತೀಯ ಬಹುಮಾನ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಈದು ನಿವಾಸಿ ರಶ್ಮಿತಾ ಜೈನ್ ಹಾಗೂ ಶರ್ಮಿತ್ ಜೈನ್ ದಂಪತಿಗಳ ಪುತ್ರ ಕೃತರ್ವ್ ಸತ್ಯಾ ಜೈನ್.

3 ರಿಂದ 6 ವರ್ಷದ ವಿಭಾಗ:
* ಪ್ರಥಮ ಬಹುಮಾನ: ಬಂಟ್ವಾಳ ತಾಲೂಕು ವಿಟ್ಲ ಮೂಡ್ನೂರು ನಿವಾಸಿ ಭಾಗ್ಯಲಕ್ಷ್ಮೀ ಮತ್ತು ಶಿವರಾಮ್ ದಂಪತಿಗಳ ಪುತ್ರಿ ಮಾನ್ಯ ಶ್ರೀಯಾ.
* ದ್ವಿತೀಯ ಬಹುಮಾನ: ಪುತ್ತೂರು ತಾಲೂಕು ನಿಡ್ಪಳ್ಳಿಯ ನಿವಾಸಿ ಶೋಭಾ ಕೆ ಹಾಗೂ ಜನಾರ್ಧನ ಡಿ ದಂಪತಿಗಳ ಪುತ್ರಿ ಚವಿಷ್ಕಾ ದುರ್ಗಾ.
* ತೃತೀಯ ಬಹುಮಾನ: ಪುತ್ತೂರು ತಾಲೂಕು ಮಾಡಾವು ನಿವಾಸಿ ಚೈತನ್ಯ ಸಿ ರೈ ಮತ್ತು ಚಂದ್ರಶೇಖರ ಎಸ್ ದಂಪತಿಗಳ ಪುತ್ರಿ ಚಾರಿತ್ರ್ಯ ಸಿ ರೈ.
ಯಶೋದ ಕೃಷ್ಣ ವಿಭಾಗ:
* ಪ್ರಥಮ ಬಹುಮಾನ: ಪುತ್ತೂರು ತಾಲೂಕು ಕಸಬಾ ನಿವಾಸಿ ಭವ್ಯ ಕೆ ಹಾಗೂ ಸುಧಾಕರ ದಂಪತಿಗಳ ಪುತ್ರಿ ಅನಿತಾ ಕೆ ಆಚಾರ್ಯ.
ದ್ವಿತೀಯ ಬಹುಮಾನ: ಬಂಟ್ವಾಳ ತಾಲೂಕು ಕುಲ ನಿವಾಸಿ ಲಿಖಿತ ಎಂ ಮತ್ತು ಲೋಹಿತ್ ಪಿ ದಂಪತಿಗಳ ಪುತ್ರಿ ಚಿರಣ್ವಿ ಎಂ.
ತೃತೀಯ ಬಹುಮಾನ: ಪುತ್ತೂರು ತಾಲೂಕು ಚಿಕ್ಕ ಮೂಡ್ನೂರು ನಿವಾಸಿ ವಿಮಲತೇಜಾಕ್ಷಿ ಹಾಗೂ ಪುರುಷೋತ್ತಮ ಕೆ ದಂಪತಿಗಳ ಪುತ್ರಿ ಋತ್ವಿಕಾ ಪಿ.
ಅಲ್ಲದೆ, ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮುದ್ದು ಕೃಷ್ಣ, ಯಶೋದ-ಕೃಷ್ಣರಿಗೆ ಗೌರವದ ಪದಕ ಮತ್ತು ಪ್ರಮಾಣ ಪತ್ರ ನೀಡಲಾಯಿತು.
ಸ್ಪರ್ಧೆಯ ತೀರ್ಪುಗಾರರಾಗಿ ಚೇತನಾ ಸತೀಶ್, ಗಾಯತ್ರಿ ಹಾಗೂ ದೀಕ್ಷಿತಾ ಸಹಕರಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು 'ವಿದ್ಯಾಮಾತಾ ಅಕಾಡೆಮಿ'ಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ವಹಿಸಿದ್ದರು.
ವೇದಿಕೆಯಲ್ಲಿ ನಂದಗೋಕುಲ ಚಿಣ್ಣರ ಅಂಗಳದ ಮುಖ್ಯಸ್ಥೆ ಪವಿತ್ರ ವಸಂತ್ ಹಾಗೂ ವಿದ್ಯಾಮಾತಾ ಅಕಾಡೆಮಿಯ ನಿರ್ದೇಶಕಿ ರಮ್ಯಾ ಭಾಗ್ಯೇಶ್ ರೈ, ದೇವಿದ್ಯಾ ರೈ ಉಪಸ್ಥಿತರಿದ್ದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.