Ather Konarc: ಹೊಸ ಎಥರ್ ಕೊನಾರ್ಕ್ ಇ-ಸ್ಕೂಟರ್ ಬಿಡುಗಡೆ.. 99,999 ರೂ.ಗೆ ಸಿಗುತ್ತೆ.. ವಿಶೇಷತೆಗಳೇನು?

Ather Konarc: ಇಂದು ನೂತನ 'ಎಥರ್ ಕೊನಾರ್ಕ್' ಇ-ಸ್ಕೂಟರ್ ಅದ್ದೂರಿಯಾಗಿ ಬಿಡುಗಡೆಗೊಂಡಿದೆ.

Aug 29, 2026 - 20:30
Ather Konarc: ಹೊಸ ಎಥರ್ ಕೊನಾರ್ಕ್ ಇ-ಸ್ಕೂಟರ್ ಬಿಡುಗಡೆ.. 99,999 ರೂ.ಗೆ ಸಿಗುತ್ತೆ.. ವಿಶೇಷತೆಗಳೇನು?

ಹೊಸದೊಂದು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಪ್ಲ್ಯಾನ್ ಮಾಡಿರುವವರಿಗೆ ಸಿಹಿಸುದ್ದಿ ಲಭ್ಯವಾಗಿದೆ. ಇಂದು ನೂತನ ಎಥರ್ ಕೊನಾರ್ಕ್ (Ather Konarc) ಇ-ಸ್ಕೂಟರ್ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. 

ಇದು ಎಸ್ 100 (S 100), ಎಸ್ 125 (S 125) ಹಾಗೂ ಎಸ್ 161 (S 161) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಸಿಗುತ್ತದೆ. ಕ್ರಮವಾಗಿ ರೂ.99,999, ರೂ.1,21,999 ಮತ್ತು ರೂ.1,44,999 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 

ಈ ಸ್ಕೂಟರ್ ನವೀನವಾದ ವಿನ್ಯಾಸವನ್ನು ಒಳಗೊಂಡಿದೆ. ಸ್ಟೀಲ್ ಯುನಿಬಾಡಿ ಚಾಸಿಸ್ ಹೊಂದಿದ್ದು, ತುಂಬಾ ಚೆನ್ನಾಗಿರುವ ಹೆಡ್‌ಲ್ಯಾಂಪ್‌, ಸ್ಮಾರ್ಟ್-ಲುಕಿಂಗ್ ಎಲ್ಇಡಿ ಡಿಆರ್‌ಎಲ್‌, ಸಿಂಗಲ್-ಪೀಸ್ ಫ್ಲಾಟ್ ಸೀಟ್, ಫ್ಲಾಟ್ ಫುಟ್‌ಬೋರ್ಡ್, 31-ಲೀಟರ್ ಸ್ಟೋರೇಜ್ ಹಾಗೂ 'ಯು' ಆಕಾರಕ್ಕೆ ಹೋಲಿಕೆಯಾಗಬಲ್ಲ ಎಲ್ಇಡಿ ಟೈಲ್‌ಲೈಟ್ ಕೂಡ ಇದೆ. ಮೆಜೆಸ್ಟಿಕ್ ಗ್ರೇ, ಕ್ವಾರ್ಟ್ಜ್ ವೈಟ್, ಲುಮೆನ್ ಕಾಪರ್ & ಸೆಲೆಸ್ಟಿಯಲ್ ಗೋಲ್ಡ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 

ಹೊಸ 'ಎಥರ್ ಕೊನಾರ್ಕ್' ಎಲೆಕ್ಟ್ರಿಕ್ ಸ್ಕೂಟರ್‌ನ 'ಎಸ್ 100' ರೂಪಾಂತರ, 2.1 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 100 ಕಿ.ಮೀ ರೇಂಜ್ ನೀಡುತ್ತದೆ. 'ಎಸ್ 125' ರೂಪಾಂತರವು 2.1 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದ್ದು, ಭರ್ತಿ ಚಾರ್ಜ್‌ನಲ್ಲಿ 125 ಕಿ.ಮೀ ರೇಂಜ್ ಕೊಡುತ್ತದೆ. 

ಅದೇ ರೀತಿಯಲ್ಲಿ 'ಎಸ್ 161' ರೂಪಾಂತರ, 3.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಪೂರ್ತಿ ಚಾರ್ಜ್‌ನಲ್ಲಿ 161 ಕಿ.ಮೀ ರೇಂಜ್ ನೀಡುತ್ತದೆ.

ಇದು ನಾನಾ ಬಗೆಯ ಆಕರ್ಷಕ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. 4.2-ಇಂಚಿನ ಎಲ್‌ಸಿಡಿ ಕನ್ಸೋಲ್/ 7-ಇಂಚಿನ ಎಲ್‌ಸಿಡಿ ಕನ್ಸೋಲ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಆಟೋಹೋಲ್ಡ್, ಫಾಲ್‌ಸೇಫ್, ಏರ್‌ವಾಕ್, ಬ್ಲೂಟೂತ್ ಕನೆಕ್ಟಿವಿಟಿ, ಎಥರ್ ಕನೆಕ್ಟ್ ಮತ್ತು ಒಟಿಎ ಅಪ್‌ಡೇಟ್ ಅನ್ನು ಪಡೆದಿದೆ. ಸ್ಮಾರ್ಟ್ ಇಕೋ (Smart Eco), ಇಕೋ (Eco) ಹಾಗೂ ಪವರ್ (Power) ಎಂಬ ರೈಡ್ ಮೋಡ್‌ಗಳನ್ನು ಹೊಂದಿದೆ. 

ಈ ಸ್ಕೂಟರ್ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಸವಾರರ ರಕ್ಷಣೆಗಾಗಿ ಎಲೆಕ್ಟ್ರಿಕಲ್ ಬ್ರೇಕಿಂಗ್ ಸಿಸ್ಟಮ್ ಮತ್ತು ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.