Yamaha YZF R2: ಹೊಸ ಯಮಹಾ ವೈಜಡ್ಎಫ್ ಆರ್2 ಬೈಕ್ ಬಿಡುಗಡೆ.. ಬೆಲೆ ಎಷ್ಟು?

Yamaha YZF R2: ಹೊಸ 'ಯಮಹಾ ವೈಜಡ್ಎಫ್ ಆರ್2' ಪ್ರೀಮಿಯಂ ಬೈಕ್ ಬಿಡುಗಡೆಗೊಂಡಿದೆ.

Aug 28, 2026 - 20:58
Yamaha YZF R2: ಹೊಸ ಯಮಹಾ ವೈಜಡ್ಎಫ್ ಆರ್2 ಬೈಕ್ ಬಿಡುಗಡೆ.. ಬೆಲೆ ಎಷ್ಟು?
ಚಿತ್ರ ಕೃಪೆ @ ಎಕ್ಸ್ (AUTO TODAY)

ಬಹುನಿರೀಕ್ಷಿತ ಯಮಹಾ ವೈಜಡ್ಎಫ್ ಆರ್2 (Yamaha YZF R2) ಪ್ರೀಮಿಯಂ ಮೋಟಾರ್‌ಸೈಕಲ್‌, ಬಿಡುಗಡೆಗೊಂಡಿದೆ.

ಈ ಬೈಕ್ ರೂ.2,30,500 ರಿಂದ ರೂ.2,53,000 ಎಕ್ಸ್-ಶೋರೂಂ ದರವನ್ನು ಹೊಂದಿದೆ. ಬೇಸ್ (Base), ಮಿಡ್ (Mid) ಹಾಗೂ ಎಂ (M) ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. 

ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದ್ದು, ಹೆಚ್ಚು ಅಗ್ರೆಸಿವ್ ಆಗಿದೆ. ಉತ್ತಮವಾದ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ ಹಾಗೂ ಎಲ್ಇಡಿ ಡಿಆರ್‌ಎಲ್‌ಗಳನ್ನು ಹೊಂದಿದೆ. 17-ಇಂಚಿನ ಅಲಾಯ್ ವೀಲ್‌ಗಳನ್ನು ತನ್ನದಾಗಿಸಿಕೊಂಡಿದೆ. ಮೆಟಾಲಿಕ್ ಬ್ಲೂ, ಡಾರ್ಕ್ ಬ್ಲ್ಯೂಯಿಸ್ ಗ್ರೇ, ಮ್ಯಾಟ್ ವೈಟ್ ಪರ್ಲ್, ರೇಸಿಂಗ್ ಬ್ಲೂ ಮತ್ತು ಮೆಟಾಲಿಕ್ ಗ್ರೇ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 

ನೂತನ 'ಯಮಹಾ ವೈಜಡ್ಎಫ್ ಆರ್2' ಹೆಚ್ಚು ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಹೊಂದಿದೆ. 204-ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೋಲ್ಡ್ ಎಂಜಿನ್‌ನ್ನು ಪಡೆದಿದೆ. 10,000 ಆರ್‌ಪಿಎಂನಲ್ಲಿ 26.5 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 8,000 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 

ಈ ಮೋಟಾರ್‌ಸೈಕಲ್‌, 5-ಇಂಚಿನ ಟಿಎಫ್‌ಟಿ ಕನ್ಸೋಲ್, ಸ್ವಿಚ್ಬಲ್ ಟ್ರಾಕ್ಷನ್ ಕಂಟ್ರೋಲ್, ಕ್ವಿಕ್‌ಶಿಫ್ಟರ್ & ಸ್ಲಿಪ್ಪರ್ ಕ್ಲಚ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸ್ಟ್ರೀಟ್, ರೈನ್ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್ ಆಯ್ಕೆಯನ್ನು ಹೊಂದಿದೆ. 

ಇದು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) 37 ಎಂಎಂ ಇನ್ವರ್ಟೆಡ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ ಹೊಂದಿದ್ದು, ಡುಯಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.